ಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಹೆಚ್ಚುವರಿ ಡೇಟಾ ಆಫರ್!

Posted By:
Subscribe to Oneindia Kannada
   Tradition Announcement For Aadhar Card Linking to Airtel Sim | Oneindia Kannada

   ಬೆಂಗಳೂರು, ಜನವರಿ 02: ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ವಿರುದ್ಧ ಪೈಪೋಟಿಗೆ ಬಿದ್ದಿರುವ ಭಾರ್ತಿ ಏರ್ ಟೆಲ್ ಸಂಸ್ಥೆ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. 799 ರು ಗಳ ಯೋಜನೆಯನ್ನು ಸುಧಾರಿಸಿದ್ದು, ಹೆಚ್ಚುವರಿ ಡೇಟಾ ಲಭ್ಯವಾಗಲಿದೆ.

   ಏರ್ ಟೆಲ್ ನಿಂದ ಹೊಸ ಪ್ಲ್ಯಾನ್,ದಿನಕ್ಕೆ 1.5 ಜಿಬಿ ಡೇಟಾ!

   ಗ್ರಾಹಕರು 799 ರೂಪಾಯಿ ರೀಚಾರ್ಜ್ ಮಾಡಿದರೆ, ಪ್ರತಿದಿನ 3.5 ಜಿಬಿ 4ಜಿ ಡೇಟಾ ಪಡೆಯಬಹುದು. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಜಿಯೋ ಗ್ರಾಹಕರಿಗೆ ಇದೇ ಬೆಲೆಗೆ 3ಜಿಬಿ ಡೇಟಾ ಸಿಗುತ್ತಿದೆ.

   ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಏರ್ಟೆಲ್ ತನ್ನ ಪ್ರೀ ಪೇಯ್ಡ್ ಗ್ರಾಹಕರಿಗೆ ಸರಿಸುಮಾರು ಒಂದು ವರ್ಷದವರೆಗೆ (360 ದಿನ) ಚಾಲ್ತಿಯಲ್ಲಿರುವ ಆಫರ್ ನೀಡುತ್ತಿದೆ. ಜತೆಗೆ ಇತ್ತೀಚೆಗೆ 349 ಹಾಗೂ 549 ರುಪಾಯಿಯ ಯೋಜನೆಯಲ್ಲೂ ಬದಲಾವಣೆ ತಂದಿದೆ.

   ಏರ್ಟೆಲ್ ನಿಂದ 49ರ ಪ್ಲಾನ್!

   ಇದಲ್ಲದೆ, ಕಡಿಮೆ ವೆಚ್ಚದ ರೀಚಾರ್ಜ್ ಹಾಗೂ ಪ್ರತಿದಿನ ಒಂದು ಜಿಬಿ ಡೇಟಾ ಲಭ್ಯವಾಗುವಂತೆ ಕೇವಲ 49 ರು ಗಳ ರೀಚಾರ್ಜ್ ಯೋಜನೆಯನ್ನು ಕೂಡಾ ಏರ್ ಟೆಲ್ ಇತ್ತೀಚೆಗೆ ಗ್ರಾಹಕರಿಗೆ ಪರಿಚಯಿಸಿತ್ತು. ಏರ್ ಟೆಲ್ ನ ಪ್ರೀಪೇಯ್ಡ್ ಯೋಜನೆಗಳತ್ತ ಒಂದು ನೋಟ ಮುಂದಿದೆ...

   799 ರು ಗಳ ಯೋಜನೆ

   799 ರು ಗಳ ಯೋಜನೆ

   ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ(ವಾಣಿಜ್ಯೇತರ ಕರೆ) 250 ನಿಮಿಷಗಳು ಪ್ರತಿದಿನ ಮಾತ್ರ, 3.5 ಜಿಬಿ ಪ್ರತಿದಿನ ಡೇಟಾ 3ಜಿ/4ಜಿ, ರಾಷ್ಟ್ರೀಯ ರೋಮಿಂಗ್, 100 ಎಸ್ಎಂಎಸ್ ಸ್ಥಳೀಯ/ ಎಸ್ಟಿಡಿ ಪ್ರತಿದಿನ, ವ್ಯಾಲಿಡಿಟಿ 28 ದಿನಗಳು

   349ರುಗಳ ಯೋಜನೆಯಲ್ಲಿ ಸುಧಾರಣೆ

   349ರುಗಳ ಯೋಜನೆಯಲ್ಲಿ ಸುಧಾರಣೆ

   ರಿಲಯನ್ಸ್ ಜಿಯೋಗೆ ಪೈಪೋಟಿ ನೀಡಲು ಭಾರ್ತಿ ಏರ್ ಟೆಲ್ ತನ್ನ 349ರುಗಳ ಯೋಜನೆಯಲ್ಲಿ ಸುಧಾರಣೆ ಮಾಡಿದೆ. ಅದೇ ದರಕ್ಕೆ ಹೆಚ್ಚು ಡೇಟಾ ನೀಡಲು ಮುಂದಾಗಿದೆ. ಇದರ ಜೊತೆಗೆ ಏರ್ ಟೆಲ್ ಮತ್ತೊಂದು ಹೊಸ ಪ್ಲಾನ್ ಪರಿಚಯಿಸಿದೆ. 448 ರೂ. ಗೆ ಅನಿಯಮಿತ ಕರೆ ಮತ್ತು ದಿನಕ್ಕೆ 1 ಜಿ.ಬಿ. ಡೇಟಾವನ್ನು 70 ದಿನಗಳ ಅವಧಿಗೆ ನೀಡಲಿದೆ.

   ಹೊಸ 448 ರೂ. ಯೋಜನೆ

   ಹೊಸ 448 ರೂ. ಯೋಜನೆ

   ರಿಲಯನ್ಸ್ ಜಿಯೊ 399 ರೂ. ಪ್ಲಾನ್ ಎದುರಿಸಲು ಏರ್ ಟೆಲ್ ಹೊಸ 448 ರೂ. ಯೋಜನೆಯನ್ನು ಹೊರತಂದಿದೆ. ಆದರೆ, ಈ ಪ್ರೀಪೇಯ್ಡ್ ಯೋಜನೆ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯ. 448 ರೂ. ಯೋಜನೆ ಹೊಂದಿರುವ ಏರ್ ಟೆಲ್ ಪ್ರೀಪೇಯ್ಡ್ ಚಂದಾದಾರರು ದಿನಕ್ಕೆ 1 ಜಿ.ಬಿ. 3 ಜಿ ಅಥವಾ 4 ಜಿ ಡೇಟಾವನ್ನು 70 ದಿನಗಳವರೆಗೆ ಪಡೆದುಕೊಳ್ಳುತ್ತಾರೆ. ಈ ಅವಧಿಗೆ ಒಟ್ಟು 70 ಜಿ.ಬಿ. ಡೇಟಾ ದಿನಕ್ಕೆ 1 ಮೀರಿದ ಬಳಿಕ ಡೇಟಾ ವೇಗವು 64 kbps ಗೆ ಇಳಿಯುತ್ತದೆ.

   ಏರ್ ಟೆಲ್ 349 ರು ಹೊಸ ಪ್ಲ್ಯಾನ್

   ಏರ್ ಟೆಲ್ 349 ರು ಹೊಸ ಪ್ಲ್ಯಾನ್

   ಪ್ರತಿ ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು, 3,000 ಎಸ್ಎಂಎಸ್ ಉಚಿತ. ಆದರೆ, ಈ ಯೋಜನೆಯ ವ್ಯಾಲಿಡಿಟಿ 28ದಿನಗಳು ಮಾತ್ರ. ಅನಿಯಮಿತ ಎಂದಿದ್ದರೂ ದಿನಕ್ಕೆ 250ನಿಮಿಷ ಮಾತ್ರ ಉಚಿತವಾಗಿರುತ್ತದೆ ನಂತರ 10 ಪೈಸೆ ಪ್ರತಿ ಕರೆ ದರದಂತೆ ಶುಲ್ಕ ವಿಧಿಸಲಾಗುತ್ತದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Airtel has revised one of its more expensive prepaid plans to offer more data than Reliance Jio. Prepaid subscribers will now get 3.5GB data per day with the Airtel Rs. 799 plan, up from the original 3GB a day.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ