ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಪ್ರೀಪೇಯ್ಡ್ ಯೋಜನೆ ಬದಲಾಯಿಸಿದ ಏರ್ಟೆಲ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 26: ಟೆಲಿಕಾಂ ದಿಗ್ಗಜ ಭಾರ್ತಿ ಏರ್ಟೆಲ್ ಸಂಸ್ಥೆ ತನ್ನ ಎರಡು ಜನಪ್ರಿಯ ಪ್ರಿಪೇಯ್ಡ್ ಪ್ಲ್ಯಾನ್ ಗಳನ್ನು ಪರಿಷ್ಕರಿಸಿದೆ. ಗ್ರಾಹಕರಿಗೆ ಇದರಿಂದ ಹೆಚ್ಚು ವ್ಯಾಲಿಡಿಟಿ ಮತ್ತು ಡಾಟಾ ಲಭಿಸಲಿದೆ. 399 ಮತ್ತು 448 ರೂಪಾಯಿಗಳ ಯೋಜನೆ ಈಗ ಬದಲಾಗಿದೆ.

70 ದಿನಗಳ ವ್ಯಾಲಿಡಿಟಿ ಹೊಂದಿದ್ದ 399 ರೂ. ಪ್ಲ್ಯಾನ್ ಈಗ 84 ದಿನಗಳ ವ್ಯಾಲಿಡಿಟಿ ಹೊಂದಲಿದೆ. ಇದರ ಜೊತೆಗೆ ಅನಿಯಮಿತ ಕರೆಗಳ ಸೌಲಭ್ಯ ಸಿಗಲಿದೆ.

ಪ್ರಮುಖ ಪ್ರೀಪೇಯ್ಡ್ ಯೋಜನೆಗಳನ್ನು ರದ್ದು ಮಾಡಿದ ಏರ್ಟೆಲ್
ಆದರೆ, ಈ ಯೋಜನೆಯಲ್ಲಿ ಸಿಗುತ್ತಿದ್ದ ಡೇಟಾ ಪ್ರಮಾಣವನ್ನು ತಗ್ಗಿಸಲಾಗಿದೆ. ಈ ಪ್ಲ್ಯಾನ್ ನಲ್ಲಿ ಈ ಹಿಂದೆ ದಿನಕ್ಕೆ 1.4 ಜಿಬಿ ಡೇಟಾ ಸಿಗುತ್ತಿತ್ತು. ಈಗ 1 ಜಿಬಿಗೆ ಇಳಿಸಲಾಗಿದೆ. ಆದರೆ, ದಿನಕ್ಕೆ ನೂರು ಎಸ್ಎಂಎಸ್ ಗಳು ಸಿಗಲಿವೆ.

Airtel revises Rs 448 and Rs 399 prepaid plans

500 ರು ದರದಲ್ಲಿ ಯಾವ ರೀಚಾರ್ಜ್ ಯೋಜನೆ ಚೆನ್ನಾಗಿದೆ? 500 ರು ದರದಲ್ಲಿ ಯಾವ ರೀಚಾರ್ಜ್ ಯೋಜನೆ ಚೆನ್ನಾಗಿದೆ?

448 ರೂ. ಯೋಜನೆಯಲ್ಲಿ ಗ್ರಾಹಕರಿಗೆ 82 ದಿನಗಳ ವ್ಯಾಲಿಡಿಟಿ ಸಿಗಲಿದೆ. ಈ ಹಿಂದೆ ಈ ಯೋಜನೆಯಲ್ಲಿ ದಿನಕ್ಕೆ 1.4 ಜಿಬಿ ಡೇಟಾ ಸಿಗುತ್ತಿದ್ದು, ಈಗ ಈ ಪ್ರಮಾಣವನ್ನು 1.5 ಜಿಬಿಗೆ ಹೆಚ್ಚಿಸಲಾಗಿದೆ. ಉಳಿದಂತೆ, ಅನಿಯಮಿತ ಒಳಬರುವ ಹಾಗೂ ಹೊರಹೋಗುವ ಕರೆಗಳು, ದಿನಕ್ಕೆ ನೂರು ಎಸ್ಎಂಎಸ್ ಗಳು ಸಿಗಲಿವೆ.

English summary
Airtel has made some changes to its prepaid line of recharges. The company has revised Rs 448 and Rs 399 plans to offer more data and other benefits to its subscribers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X