• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರ್‌ಟೆಲ್ ಉಚಿತ 4ಜಿ ಡೇಟಾ: ಸ್ನ್ಯಾಕ್ಸ್‌ ಜೊತೆಗೆ ಫ್ರೀ ಡೇಟಾ ಪಡೆಯಿರಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ನೀವು ಸ್ನ್ಯಾಕ್ಸ್ ಪ್ರಿಯರಾಗಿದ್ರೆ, ಮುಂದಿನ ದಿನಗಳಲ್ಲಿ ಸ್ನ್ಯಾಕ್ಸ್‌ ಖರೀದಿ ಜೊತೆಗೆ ನೀವು ಉಚಿತ ಏರ್‌ಟೆಲ್ 4 ಜಿ ಡೇಟಾವನ್ನು ಪಡೆಯಬಹುದು.

ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್, ಪೆಪ್ಸಿಕೋ ಇಂಡಿಯಾದೊಂದಿಗೆ ಸಹ-ಬ್ರಾಂಡಿಂಗ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಸೆಪ್ಟೆಂಬರ್ 1 ರಿಂದ ಕುರ್ಕುರೆ, ಲೇಸ್, ಅಂಕಲ್ ಚಿಪ್ಸ್ ಮತ್ತು ಡೊರಿಟೋಸ್ ಸ್ನ್ಯಾಕ್ ಪ್ಯಾಕ್‌ಗಳನ್ನು ಖರೀದಿಸುವಾಗ ಪ್ರಿಪೇಯ್ಡ್ ಬಳಕೆದಾರರು 2 ಜಿಬಿ ಉಚಿತ 4 ಜಿ ಡೇಟಾವನ್ನು ಪಡೆಯುತ್ತಾರೆ. ಇದು ಹೇಗಪ್ಪಾ ಸಾಧ್ಯ ಎಂದು ನೀವು ಅಂದುಕೊಂಡಿದ್ರೆ ಈ ಲೇಖನವನ್ನು ಓದಿ

ಸ್ನ್ಯಾಕ್ಸ್‌ ಮಾರಾಟ ಹೆಚ್ಚಿಸಲು ಪೆಪ್ಸಿಕೋ ಮಾಸ್ಟರ್‌ ಪ್ಲ್ಯಾನ್

ಸ್ನ್ಯಾಕ್ಸ್‌ ಮಾರಾಟ ಹೆಚ್ಚಿಸಲು ಪೆಪ್ಸಿಕೋ ಮಾಸ್ಟರ್‌ ಪ್ಲ್ಯಾನ್

ಕೋವಿಡ್-19 ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆಯು ಹೆಚ್ಚಿದೆ. ಅಲ್ಲದೆ ಡೇಟಾ ಬಳಕೆ ಕೂಡ ಗಮನಾರ್ಹವಾಗಿ ಏರಿಕೆಯಾಗಿದೆ. ಇದನ್ನೇ ಗುರಿಯಾಗಿಸಿಕೊಂಡು ಪೆಪ್ಸಿ-ಕೋಲಾ ತಯಾರಕ ಕಂಪನಿ ಭಾರ್ತಿ ಏರ್‌ಟೆಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಡೇಟಾ ಆಫರ್ ತೋರಿಸಿ ತನ್ನ ಸ್ನ್ಯಾಕ್ಸ್‌ ಮಾರಾಟವನ್ನು ಗುರಿಯಾಗಿರಿಸಿದೆ.

ಎಜಿಆರ್ ಬಾಕಿ ಪಾವತಿ: ಟೆಲಿಕಾಂ ಕಂಪೆನಿಗಳಿಗೆ 10 ವರ್ಷಗಳ ಸಮಯ ನೀಡಿದ ಸುಪ್ರೀಂಕೋರ್ಟ್ಎಜಿಆರ್ ಬಾಕಿ ಪಾವತಿ: ಟೆಲಿಕಾಂ ಕಂಪೆನಿಗಳಿಗೆ 10 ವರ್ಷಗಳ ಸಮಯ ನೀಡಿದ ಸುಪ್ರೀಂಕೋರ್ಟ್

ಯಾವಾಗ ಸಿಗಲಿದೆ ಈ ಡೇಟಾ ಆಫರ್

ಯಾವಾಗ ಸಿಗಲಿದೆ ಈ ಡೇಟಾ ಆಫರ್

ಸೆಪ್ಟೆಂಬರ್ 1 ರಂದು ನೇರ ಪ್ರಸಾರವಾಗುವ ಪೆಪ್ಸಿ-ಏರ್‌ಟೆಲ್ ಪ್ಯಾಕ್‌ನ ಪ್ರಕಾರ, ಸುನೀಲ್ ಭಾರತಿ ಮಿತ್ತಲ್ ಉಲ್ಲೇಖಿಸುವ ಬ್ರ್ಯಾಂಡಿಂಗ್ ಕುರ್ಕುರೆ, ಲೇಸ್, ಅಂಕಲ್ ಚಿಪ್ಸ್ ಮತ್ತು ಡೊರಿಟೋಸ್ ಪ್ಯಾಕ್‌ಗಳಲ್ಲಿ ಡೇಟಾ ಸಿಗುತ್ತದೆ.

 ಎಷ್ಟು ರೂಪಾಯಿ ಸ್ನ್ಯಾಕ್ಸ್‌ ಪ್ಯಾಕ್‌ನಲ್ಲಿ ಡೇಟಾ ಸಿಗುತ್ತದೆ

ಎಷ್ಟು ರೂಪಾಯಿ ಸ್ನ್ಯಾಕ್ಸ್‌ ಪ್ಯಾಕ್‌ನಲ್ಲಿ ಡೇಟಾ ಸಿಗುತ್ತದೆ

ಒಪ್ಪಂದದ ಪ್ರಕಾರ, ಏರ್‌ಟೆಲ್‌ನ ಪ್ರಿಪೇಯ್ಡ್ ಗ್ರಾಹಕರು 10 ರೂ ಮತ್ತು 20 ರೂ ಪ್ಯಾಕ್‌ಗಳ ಲೇಸ್, ಕುರ್ಕುರೆ, ಡೊರಿಟೋಸ್ ಮತ್ತು ಅಂಕಲ್ ಚಿಪ್‌ಗಳನ್ನು ಖರೀದಿಸುವುದರಿಂದ ಉಚಿತ 4 ಜಿ ಡೇಟಾ ಪ್ರಯೋಜನಗಳನ್ನು ಪಡೆಯುತ್ತಾರೆ. ಏರ್‌ಟೆಲ್ ಬಳಕೆದಾರರು 10 ರೂಪಾಯಿ ಸ್ನ್ಯಾಕ್ ಪ್ಯಾಕ್‌ಗಳಲ್ಲಿ 1ಜಿಬಿ ಡೇಟಾ ಮತ್ತು 20 ರೂಪಾಯಿ ಸ್ನ್ಯಾಕ್ಸ್‌ನಲ್ಲಿ 2 ಜಿಬಿ ಉಚಿತ ಡೇಟಾವನ್ನು ಪಡೆಯುತ್ತಾರೆ.

ಏರ್‌ಟೆಲ್ ಬೊಂಬಾಟ್ ಪ್ರಿಪೇಯ್ಡ್‌ ಪ್ಲ್ಯಾನ್: ಡಿಸ್ನಿ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಉಚಿತಏರ್‌ಟೆಲ್ ಬೊಂಬಾಟ್ ಪ್ರಿಪೇಯ್ಡ್‌ ಪ್ಲ್ಯಾನ್: ಡಿಸ್ನಿ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಉಚಿತ

ಆಫರ್ ವ್ಯಾಲಿಡಿಟಿ ಎಷ್ಟು ದಿನ?

ಆಫರ್ ವ್ಯಾಲಿಡಿಟಿ ಎಷ್ಟು ದಿನ?

ಆಫರ್ ಅವಧಿಯಲ್ಲಿ ಪ್ರತಿ ಅನನ್ಯ(ಯೂನಿಕ್) ಮೊಬೈಲ್ ಸಂಖ್ಯೆಗೆ ಮೂರು ಬಾರಿ ಆಫರ್ ಅನ್ನು ಪುನಃ ಪಡೆದುಕೊಳ್ಳಬಹುದು. ಈ ಯೋಜನೆ 2021 ಜನವರಿ 31 ರವರೆಗೆ ಇರಲಿದೆ. ಏರ್‌ಟೆಲ್‌ನ ಪ್ರಿಪೇಯ್ಡ್ ಗ್ರಾಹಕರು ತನ್ನ ಒಟ್ಟಾರೆ ಸುಮಾರು 280 ಮಿಲಿಯನ್ ಬಳಕೆದಾರರ ಪೈಕಿ ಸುಮಾರು ಶೇಕಡಾ 95 ರಷ್ಟಿದ್ದಾರೆ.

ಡೇಟಾ ಪಡೆಯುವುದು ಹೇಗೆ?

ಡೇಟಾ ಪಡೆಯುವುದು ಹೇಗೆ?

ಈ ವಿಭಿನ್ನ ಡೇಟಾ ಪ್ರಯೋಜನವನ್ನು ಪಡೆಯಲು, ಏರ್‌ಟೆಲ್ ಬಳಕೆದಾರರು ಕುರ್ಕುರೆ, ಲೇಸ್, ಅಂಕಲ್ ಚಿಪ್ಸ್ ಅಥವಾ ಡೊರಿಟೋಸ್ ಪ್ಯಾಕ್‌ಗಳ ಹಿಂದೆ ಮುದ್ರಿಸಲಾದ ಉಚಿತ ಡೇಟಾ ಚೀಟಿ ಕೋಡ್ ಅನ್ನು ಪರಿಶೀಲಿಸಬೇಕು ಮತ್ತು ಏರ್‌ಟೆಲ್ ಥ್ಯಾಂಕ್ಸ್‌ ಆ್ಯಪ್‌ನಲ್ಲಿ 'ಮೈ ಕೂಪನ್‌ಗಳು' ವಿಭಾಗವನ್ನು ಆಯ್ಕೆ ಮಾಡಬೇಕಾಗುತ್ತದೆ.

English summary
Bharti Airtel has signed a co-branding pact with PepsiCo India where prepaid users will get up to 2GB of free 4G data on purchase of Kurkure, Lay’s, Uncle Chipps and Doritos snack packs from September 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X