• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋ 52ರ ಯೋಜನೆಗೆ ಪೈಪೋಟಿ ನೀಡಲು ಏರ್ಟೆಲ್ ನಿಂದ 49ರ ಪ್ಲಾನ್!

By Mahesh
|
Google Oneindia Kannada News

ಟೆಲಿಕಾಂ ಸಂಸ್ಥೆಗಳ ಪ್ರೀಪೇಯ್ಡ್ ದರ ಸಮರ ಪ್ರತಿದಿನ ಹೊಸ ಹೊಸ ಯೋಜನೆಗಳಿಗೆ ನಾಂದಿ ಹಾಡುತ್ತಿದೆ. ರಿಲಯನ್ಸ್ ಜಿಯೋ ಸಂಸ್ಥೆಯ 52ರುಗಳ ಪ್ರೀಪೇಯ್ಡ್ ಗೆ ಪ್ರತಿಯಾಗಿ ಭಾರ್ತಿ ಏರ್ ಟೆಲ್ 49ರು ಗಳ ಒಂದು ದಿನದ ಡೇಟಾ ಪ್ಯಾಕ್ ಪ್ರಕಟಿಸಿದೆ.

49 ರು ಯೋಜನೆ ಅಲ್ಲದೆ ಏರ್ ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ 51 ರು, 99 ರು ಹಾಗೂ 146 ರು. ಪ್ಲಾನ್ ಗಳನ್ನು ಪರಿಚಯಿಸಿದ್ದು, ಒಂದು ದಿನದಿಂದ 28 ದಿನಗಳವರೆಗೆ ವ್ಯಾಲಿಡಿಟಿ ಇದೆ.

ಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಭರ್ಜರಿ ಕೊಡುಗೆಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಭರ್ಜರಿ ಕೊಡುಗೆ

ಇದಲ್ಲದೆ, ಏರ್ಟೆಲ್ ನ 199 ರು, 349, 448, 549, 799 ರೂಪಾಯಿ ಯೋಜನೆಗಳು ಜನಪ್ರಿಯಗೊಳ್ಳುತ್ತಿವೆ. ಏರ್ ಟೆಲ್ ಈಗ ತನ್ನ 349 ಹಾಗೂ 549 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ತಂದಿದೆ.

ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಏರ್ಟೆಲ್ ತನ್ನ ಪ್ರೀ ಪೇಯ್ಡ್ ಗ್ರಾಹಕರಿಗೆ ಸರಿಸುಮಾರು ಒಂದು ವರ್ಷದವರೆಗೆ (360 ದಿನ) ಚಾಲ್ತಿಯಲ್ಲಿರುವ ಆಫರ್ ನೀಡುತ್ತಿದೆ.

ಏರ್ ಟೆಲ್ ನಿಂದ ಹೊಸ ಪ್ಲ್ಯಾನ್,ದಿನಕ್ಕೆ 1.5 ಜಿಬಿ ಡೇಟಾ!ಏರ್ ಟೆಲ್ ನಿಂದ ಹೊಸ ಪ್ಲ್ಯಾನ್,ದಿನಕ್ಕೆ 1.5 ಜಿಬಿ ಡೇಟಾ!

ಈ ಆಫರ್ ನಂತೆ 3,999 ರೂ. ರೀ ಚಾರ್ಜ್ ಮಾಡಿಸಿದರೆ 360 ದಿನದವರೆಗೆ ಅನಿಯಮಿತ ಕರೆ, ಪ್ರತಿದಿನ 100 ಎಸ್ಎಂಎಸ್ ಹಾಗೂ 360 ದಿನಕ್ಕೆ 300 ಜಿಬಿ ಡೇಟಾ ಲಭ್ಯವಾಗಲಿದೆ. ಕಡಿಮೆ ಅವಧಿಯ ಕಡಿಮೆ ಬೆಲೆಯ ರೀಚಾರ್ಜ್ ಬಗ್ಗೆ ಮುಂದೆ ಓದಿ...

29 ರು ಗಳ ಡೇಟಾ ಬೂಸ್ಟ್ ಪ್ಯಾಕ್

29 ರು ಗಳ ಡೇಟಾ ಬೂಸ್ಟ್ ಪ್ಯಾಕ್

ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಹೊಸ ಪ್ರೀಪೇಯ್ಡ್ ಯೋಜನೆಯನ್ನು ಪರಿಚಯಿಸಿದ್ದು, 29 ರು ಗಳ ಡೇಟಾ ಬೂಸ್ಟ್ ಪ್ಯಾಕ್ ನಲ್ಲಿ 150 ಎಂಬಿ 2ಜಿ/3ಜಿ/4ಜಿ ಡೇಟಾವನ್ನು ಪಡೆಯಬಹುದಾಗಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳ ಅವಧಿಯಾಗಿದೆ.

 49 ರೂ.ಗೆ ಪ್ರೀಪೇಯ್ಡ್ ಪ್ಲಾನ್

49 ರೂ.ಗೆ ಪ್ರೀಪೇಯ್ಡ್ ಪ್ಲಾನ್

49 ರೂ.ಗೆ 1 ಜಿ.ಬಿ. ಡೇಟಾ ಪ್ಲಾನ್ ಒಂದು ದಿನದ ಯೋಜನೆಯಾಗಿದೆ. ಇದರಲ್ಲಿ 2ಜಿ/3ಜಿ/4ಜಿ ಡೇಟಾವನ್ನು ಪಡೆಯಬಹುದಾಗಿದೆ. ಭಾರತದೆಲ್ಲೆಡೆ ಈ ಸೌಲಭ್ಯ ಲಭ್ಯವಿದೆ. ಏರ್ ಟೆಲ್ ನ ಮೈಏರ್ಟೆಲ್ ಅಪ್ಲಿಕೇಷನ್ ನಲ್ಲಿ ವಿವರಗಳು ಲಭ್ಯ.

51 ರುಗಳ ಪ್ಲಾನ್ ಪ್ರೀಪೇಯ್ಡ್

51 ರುಗಳ ಪ್ಲಾನ್ ಪ್ರೀಪೇಯ್ಡ್

51 ರುಗಳ ಪ್ಲಾನ್ ಪ್ರೀಪೇಯ್ಡ್ ಯೋಜನೆಯಲ್ಲಿ 49ರು ಗಳ ಡೇಟಾ ಪ್ಲಾನ್ ನ ಸೌಲಭ್ಯಗಳೆಲ್ಲವೂ ಸಿಗಲಿದೆ ಜತೆಗೆ ಉಚಿತ ಕರೆ ಸೌಲಭ್ಯವನ್ನು 7 ದಿನಗಳ ಅವಧಿಗೆ ನೀಡಲಾಗುವುದು. ಈ ಯೋಜನೆಯಲ್ಲಿ 49ರು ಯೋಜನೆಗಿಂತ ಡೇಟಾ ಹೆಚ್ಚಿನ ಟೆಲಿಕಾಂ ಸರ್ಕಲ್ ಗಳಿಗೆ ವಿಸ್ತರಣೆಯಾಗಿದೆ.

98 ಹಾಗೂ 99 ರು ಯೋಜನೆ

98 ಹಾಗೂ 99 ರು ಯೋಜನೆ

98 ರೂ. ಯೋಜನೆಯಡಿ 2 ಜಿ.ಬಿ. ಡೇಟಾವನ್ನು 5 ದಿನಗಳವರೆಗೆ ನೀಡಲಿದೆ.ಇದರಲ್ಲಿ 2ಜಿ/3ಜಿ/4ಜಿ ಡೇಟಾವನ್ನು ಪಡೆಯಬಹುದಾಗಿದೆ. ಭಾರತದೆಲ್ಲೆಡೆ ಈ ಸೌಲಭ್ಯ ಲಭ್ಯವಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳವರೆಗೆ ಇದೆ.
* 99 ರು ಗಳ ಯೋಜನೆಯ ವ್ಯಾಲಿಡಿಟಿ 5 ದಿನಗಳವರೆಗೆ ಮಾತ್ರ ಇದೆ.

146 ರು ಗಳ ಪ್ರೀಪೇಯ್ಡ್ ಡೇಟಾ

146 ರು ಗಳ ಪ್ರೀಪೇಯ್ಡ್ ಡೇಟಾ

146 ರು ಗಳ ಪ್ರೀಪೇಯ್ಡ್ ಡೇಟಾ ಯೋಜನೆಯಲ್ಲಿ 1 ಜಿ.ಬಿ. 4 ಜಿ ಡೇಟಾ, ಉಚಿತ ಕರೆ ಸೌಲಭ್ಯವನ್ನು 7 ದಿನಗಳ ಅವಧಿಗೆ ನೀಡಲಾಗುವುದು. ಮೈ ಏರ್ ಟೆಲ್ ಆಪ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

English summary
In a bid to counter Reliance Jio's 52 prepaid recharge plan, Bharti Airtel has launched a new one day Data recharge pre paid plan at Rs 49.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X