• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರ್ ಟೆಲ್ ನಿಂದ ಹೊಸ ಪ್ಲ್ಯಾನ್,ದಿನಕ್ಕೆ 1.5 ಜಿಬಿ ಡೇಟಾ!

By Mahesh
|

ಬೆಂಗಳೂರು, ನವೆಂಬರ್ 06: ರಿಲಯನ್ಸ್ ಜಿಯೋಗೆ ಪೈಪೋಟಿ ನೀಡಲು ಭಾರ್ತಿ ಏರ್ ಟೆಲ್ ತನ್ನ 349ರುಗಳ ಯೋಜನೆಯಲ್ಲಿ ಸುಧಾರಣೆ ಮಾಡಿದೆ. ಅದೇ ದರಕ್ಕೆ ಹೆಚ್ಚು ಡೇಟಾ ನೀಡಲು ಮುಂದಾಗಿದೆ.

ಇದರ ಜೊತೆಗೆ ಏರ್ ಟೆಲ್ ಮತ್ತೊಂದು ಹೊಸ ಪ್ಲಾನ್ ಪರಿಚಯಿಸಿದೆ. 448 ರೂ. ಗೆ ಅನಿಯಮಿತ ಕರೆ ಮತ್ತು ದಿನಕ್ಕೆ 1 ಜಿ.ಬಿ. ಡೇಟಾವನ್ನು 70 ದಿನಗಳ ಅವಧಿಗೆ ನೀಡಲಿದೆ.

ರಿಲಯನ್ಸ್ ಜಿಯೊ 399 ರೂ. ಪ್ಲಾನ್ ಎದುರಿಸಲು ಏರ್ ಟೆಲ್ ಹೊಸ 448 ರೂ. ಯೋಜನೆಯನ್ನು ಹೊರತಂದಿದೆ. ಆದರೆ, ಈ ಪ್ರೀಪೇಯ್ಡ್ ಯೋಜನೆ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯ.

ಇತ್ತೀಚೆಗೆ ವೋಡಾಫೋನ್ 84 ದಿನಗಳ ವ್ಯಾಲಿಡಿಟಿ ಇರುವ 496ರುಗಳ ಪ್ಲ್ಯಾನ್ ತಂದಿತ್ತು. ಐಡಿಯಾ 498ರುಗೆ ಇಂಥದ್ದೇ ಪ್ಲ್ಯಾನ್ ಹೊಂದಿದೆ. ಈ ಕಂಪನಿಗಳ ವಿಲೀನದ ನಂತರ ಅತಿದೊಡ್ಡ ಟೆಲಿಕಾಂ ಕಂಪನಿ ಎಂಬ ಪಟ್ಟದಿಂದ ಏರ್ ಟೆಲ್ ಕೆಳಗಿಳಿಯಬೇಕಾಗುತ್ತದೆ.

448 ರೂ. ಯೋಜನೆ ಹೊಂದಿರುವ ಏರ್ ಟೆಲ್ ಪ್ರೀಪೇಯ್ಡ್ ಚಂದಾದಾರರು ದಿನಕ್ಕೆ 1 ಜಿ.ಬಿ. 3 ಜಿ ಅಥವಾ 4 ಜಿ ಡೇಟಾವನ್ನು 70 ದಿನಗಳವರೆಗೆ ಪಡೆದುಕೊಳ್ಳುತ್ತಾರೆ. ಈ ಅವಧಿಗೆ ಒಟ್ಟು 70 ಜಿ.ಬಿ. ಡೇಟಾ ದಿನಕ್ಕೆ 1 ಮೀರಿದ ಬಳಿಕ ಡೇಟಾ ವೇಗವು 64 kbps ಗೆ ಇಳಿಯುತ್ತದೆ.

349 ರು ಹೊಸ ಪ್ಲ್ಯಾನ್: ಪ್ರತಿ ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು, 3,000 ಎಸ್ಎಂಎಸ್ ಉಚಿತ. ಆದರೆ, ಈ ಯೋಜನೆಯ ವ್ಯಾಲಿಡಿಟಿ 28ದಿನಗಳು ಮಾತ್ರ. ಅನಿಯಮಿತ ಎಂದಿದ್ದರೂ ದಿನಕ್ಕೆ 250ನಿಮಿಷ ಮಾತ್ರ ಉಚಿತವಾಗಿರುತ್ತದೆ ನಂತರ 10 ಪೈಸೆ ಪ್ರತಿ ಕರೆ ದರದಂತೆ ಶುಲ್ಕ ವಿಧಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Airtel's Rs. 349 plan will now offer 1.5GB data per day, along with unlimited local and STD calls and 3,000 SMSes. The validity of the plan, however, remains the same at 28 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more