ಏರ್ಟೆಲ್ ಬೊಂಬಾಟ್ ಪ್ರಿಪೇಯ್ಡ್ ಪ್ಲ್ಯಾನ್: ಡಿಸ್ನಿ ಹಾಟ್ಸ್ಟಾರ್ ವಿಐಪಿ ಚಂದಾದಾರಿಕೆ ಉಚಿತ
ನವದೆಹಲಿ, ಆಗಸ್ಟ್ 20: ಏರ್ಟೆಲ್ ತನ್ನ ಗ್ರಾಹಕರಿಗೆ ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ವಿಐಪಿಯ ಒಂದು ವರ್ಷದವರೆಗೆ ಉಚಿತವಾಗಿ ಚಂದಾದಾರಿಕೆಯನ್ನು ನೀಡಲಾಗುತ್ತಿದೆ.
448 ರೂ, 499 ರೂ, 599 ರೂ. ಮತ್ತು 2,698 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ವಿಐಪಿಯ ಒಂದು ವರ್ಷದ ಚಂದಾದಾರಿಕೆಯನ್ನು ಹೊಂದಿದೆ.
ಏರ್ಟೆಲ್ 5ಜಿ: ಚೀನಾ ಕಂಪನಿಗಳನ್ನ ಕೈ ಬಿಟ್ಟು ಪ್ರಯೋಗಗಳಿಗೆ ಸಿದ್ಧತೆ
ಹೊಸ ಅಪ್ಡೇಟ್ನ ಪರಿಣಾಮವಾಗಿ, ಯಾವುದೇ ನಾಲ್ಕು ಪ್ರಿಪೇಯ್ಡ್ ಯೋಜನೆಗಳೊಂದಿಗೆ ರೀಚಾರ್ಜ್ ಮಾಡುವ ಏರ್ಟೆಲ್ ಗ್ರಾಹಕರು ಒಂದು ವರ್ಷದ ಉಚಿತ ಡಿಸ್ನಿ + ಹಾಟ್ಸ್ಟಾರ್ ವಿಐಪಿ ಪ್ರವೇಶವನ್ನು ಪಡೆಯುತ್ತಾರೆ.
ಈಗಿರುವ 401 ರೂಪಾಯಿ ಪ್ರಿಪೇಯ್ಡ್ ಯೋಜನೆಯನ್ನು ಏಪ್ರಿಲ್ನಲ್ಲಿ ಒಂದು ವರ್ಷದ ಡಿಸ್ನಿ + ಹಾಟ್ಸ್ಟಾರ್ ವಿಐಪಿ ಚಂದಾದಾರಿಕೆಯೊಂದಿಗೆ ಪ್ರಾರಂಭಿಸಲಾಯಿತು. 401 ರುಪಾಯಿ ಯೋಜನೆಯನ್ನು 3 ಜಿಬಿ ಹೈಸ್ಪೀಡ್ ಡೇಟಾ ಹಂಚಿಕೆಯಿಂದ 30 ಜಿಬಿಗೆ 28 ದಿನಗಳವರೆಗೆ ನವೀಕರಿಸಲಾಗಿದೆ.