ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಈ 8 ನಗರಗಳಲ್ಲಿ ಏರ್‌ಟೆಲ್ 5ಜಿ ಪ್ಲಸ್ ಸೇವೆ ಪ್ರಾರಂಭ

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ಭಾರ್ತಿ ಏರ್‌ಟೆಲ್ ಕಂಪನಿಯು ಗುರುವಾರ ಭಾರತದ ಎಂಟು ಪ್ರಮುಖ ನಗರಗಳಲ್ಲಿ 5G ಪ್ಲಸ್ ಸೇವೆಗಳನ್ನು ಪ್ರಾರಂಭಿಸಿದೆ. ಇದರ ಮಧ್ಯೆ ಗ್ರಾಹಕರಿಗೆ ಕಂಪನಿಯು ಖುಷಿಯ ಸುದ್ದಿಯೊಂದನ್ನು ನೀಡಿದೆ. ಸದ್ಯ ಅಸ್ತಿತ್ವದಲ್ಲಿರುವ ಏರ್‌ಟೆಲ್ 4G ಸಿಮ್ ಅನ್ನು ಬಳಸಿಕೊಂಡೇ ಈಗ 5G ಸೇವೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಬಳಕೆದಾರರು ಸಿಮ್ ಕಾರ್ಡ್ ಅನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಕಂಪನಿ ತಿಳಿಸಿದೆ.

Airtel company start out 5G Plus services in 8 indian cities. No need to change your Sim card

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿ ನಗರಗಳಲ್ಲಿ ಗ್ರಾಹಕರು ಹಂತ ಹಂತವಾಗಿ ಏರ್‌ಟೆಲ್ 5G ಪ್ಲಸ್ ಸೇವೆಗಳನ್ನು ಆನಂದಿಸಲು ಪ್ರಾರಂಭಿಸುತ್ತಾರೆ ಎಂದು ಕಂಪನಿಯು ತಿಳಿಸಿದೆ. ತನ್ನ ನೆಟ್‌ವರ್ಕ್ ಅನ್ನು ನಿರ್ಮಿಸಲು ಮತ್ತು ಪ್ರಾರಂಭಿಸುವುದನ್ನು ಮುಂದುವರೆಸಲಿದೆ ಎಂದು ಕಂಪನಿ ತಿಳಿಸಿದೆ.

ಏರ್‌ಟೆಲ್‌ ಬಳಕೆದಾರರಿಗೆ 5ಜಿ ಲಭ್ಯತೆ ವಿಳಂಬ, ಯಾಕೆ ಗೊತ್ತಾ?ಏರ್‌ಟೆಲ್‌ ಬಳಕೆದಾರರಿಗೆ 5ಜಿ ಲಭ್ಯತೆ ವಿಳಂಬ, ಯಾಕೆ ಗೊತ್ತಾ?

5ಜಿ ಪ್ಲಸ್ ಸೇವೆಯಿಂದ ಗ್ರಾಹಕರು ಪ್ರಸ್ತುತ ವೇಗಕ್ಕಿಂತ 20 ರಿಂದ 30 ಪಟ್ಟು ಹೆಚ್ಚಿನ ವೇಗವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇದರ ಜೊತೆಗೆ ಅದ್ಭುತ ಧ್ವನಿ ಅನುಭವ ಮತ್ತು ಸೂಪರ್-ಫಾಸ್ಟ್ ಕರೆ ಸಂಪರ್ಕವನ್ನು ನೀಡುತ್ತದೆ ಎಂದು ಕಂಪನಿಯು ಹೇಳಿದೆ.

5G ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಡೇಟಾ ಯೋಜನೆಗಳಲ್ಲಿ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಸೇವೆಯನ್ನು ಆನಂದಿಸುತ್ತಾರೆ. "ಸದ್ಯಕ್ಕೆ 5G ಹ್ಯಾಂಡ್‌ಸೆಟ್ ಮತ್ತು ಸಿಮ್ ಅನ್ನು ಹೊಂದಿರುವ ಗ್ರಾಹಕರಿಗೆ ಈ ಸೇವೆಯು ಸುಲಭವಾಗಿ ಸಿಗಲಿದೆ. 4ಜಿ ಸಿಮ್ ಅನ್ನು ಹೊಂದಿರುವವರು ಸಹ ಯಾವುದೇ ರೀತಿ ಸಿಮ್ ಬದಲಾಯಿಸುವ ಅಗತ್ಯ ಇರುವುದಿಲ್ಲ," ಎಂದು ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೋಪಾಲ್ ವಿಟ್ಟಲ್ ಹೇಳಿದರು.

"ಏರ್‌ಟೆಲ್ 5G ಪ್ಲಸ್ ಅನ್ನು ಜನರು ಸಂವಹನ ಮಾಡುವ, ವಾಸಿಸುವ, ಕೆಲಸ ಮಾಡುವ, ಸಂಪರ್ಕಿಸುವ ಮತ್ತು ಮುಂಬರುವ ವರ್ಷಗಳಲ್ಲಿ ಆಡುವ ವಿಧಾನವನ್ನು ಮರು ವ್ಯಾಖ್ಯಾನಿಸಲು ಸಿದ್ಧವಾಗಿದೆ," ಎಂದು ವಿಟ್ಟಲ್ ತಿಳಿಸಿದ್ದಾರೆ.

ಏರ್‌ಟೆಲ್ 5G ಪ್ಲಸ್ ಹೆಚ್ಚು ಅಭಿವೃದ್ಧಿ ಹೊಂದಿದ ಪರಿಸರ ವ್ಯವಸ್ಥೆಯೊಂದಿಗೆ ವಿಶ್ವದಲ್ಲೇ ವ್ಯಾಪಕವಾದ ಸ್ವೀಕಾರವನ್ನು ಹೊಂದಿರುವ ತಂತ್ರಜ್ಞಾನದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಇದು ಭಾರತದಲ್ಲಿನ ಎಲ್ಲಾ 5G ಸ್ಮಾರ್ಟ್‌ಫೋನ್‌ಗಳು ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತದೆ.

ಏರ್‌ಟೆಲ್ 5G ಪ್ಲಸ್ ಹೈ-ಡೆಫಿನಿಷನ್ ವೀಡಿಯೊ ಸ್ಟ್ರೀಮಿಂಗ್, ಗೇಮಿಂಗ್, ಮಲ್ಟಿಪಲ್ ಚಾಟಿಂಗ್, ಫೋಟೋಗಳ ತ್ವರಿತ ಅಪ್‌ಲೋಡ್ ಮತ್ತು ಹೆಚ್ಚಿನವುಗಳಿಗೆ ಸೂಪರ್‌ಫಾಸ್ಟ್ ಪ್ರವೇಶವನ್ನು ಅನುಮತಿಸುತ್ತದೆ.

English summary
Airtel company start out 5G Plus services in 8 indian cities. No need to change your Sim card. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X