ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ 6ನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ದಿವಾಳಿ!

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಭಾರತದ 6ನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ಏರ್ ಸೆಲ್ ಸೆಲ್ಯುಲಾರ್ ಲಿಮಿಟೆಡ್ ದಿವಾಳಿಯಾಗಿರುವುದಾಗಿ ಘೋಷಿಸಿದೆ. ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್ ಸಿ ಎಲ್ ಟಿ) ಮುಂದೆ ದಿವಾಳಿ ಎಂದು ಅಧಿಕೃತವಾಗಿ ಘೋಷಿಸುವಂತೆ ಕೇಳಿಕೊಂಡಿದೆ.

ಕೋಟ್ಯಧಿಪತಿ ಟಿ ಆನಂದ ಕೃಷ್ಣನ್ ಒಡೆತನದ ಏರ್ ಸೆಲ್ ಸೆಲ್ಯುಲಾರ್ ಲಿಮಿಟೆಡ್ ಮೇಲೆ ಸುಮಾರು 15,500 ಕೋಟಿ ಸಾಲವಿದೆ.

ಏರ್ ಸೆಲ್ ಲಿಮಿಟೆಡ್, ಏರ್ ಸೆಲ್ ಸೆಲ್ಯುಲಾರ್ ಲಿಮಿಟೆಡ್ ಹಾಗೂ ಡಿಶ್ ನೆಟ್ ವೈರ್ ಲೆಸ್ ಲಿಮಿಟೆಡ್ ಗಳು ದಿವಾಳಿ ಎಂದು ಘೋಷಿಸಲು ಸಿದ್ಧವಾಗಿವೆ. ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಷನ್ ಜತೆ ವಿಲೀನದ ಮಾತುಕತೆ ಮುರಿದು ಬಿದ್ದ ಬಳಿಕ ಏರ್ ಸೆಲ್ ಕೂಡಾ ತನ್ನ ಅಸ್ತಿತ್ವ ಕಳೆದುಕೊಳ್ಳತೊಡಗಿತು.

Aircel files for Bankruptcy

ಏರ್ ಸೆಲ್ ಸುಮಾರು 85 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, 17 ಟೆಲಿಕಾಂ ಸರ್ಕಲ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಚಂದಾದಾರರಿಗೆ ಅನುಕೂಲವಂತೆ ವಿಶಿಷ್ಟವಾದ ಪೋರ್ಟಿಂಗ್ ಕೋಡ್ (ಯುಪಿಸಿ) ನೀಡುವಂತೆ ಏರ್ ಸೆಲ್ ಗೆ ಟೆಲಿಕಾಂ ನಿಯಂತ್ರಕ (ಟ್ರಾಯ್)ಸೂಚಿಸಿದೆ.

English summary
India's sixth largest telecom operator Aircel on Wednesday filed for bankruptcy at National Company Law Tribunal (NCLT). Aircel has claimed debt of Rs 15,500 Crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X