ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಯಾನಿಧಿ ಮಾರನ್ ಆಸ್ತಿ ಜಪ್ತಿಗೆ ಮುಂದಾದ 'ಇಡಿ'

By Mahesh
|
Google Oneindia Kannada News

ಚೆನ್ನೈ, ಅ.10:ಏರ್ ಸೆಲ್ ಕಂಪನಿಗೆ 2ಜಿ ತರಂಗಾಂತರ ಗುಚ್ಛ ಕೊಡಿಸಲು ಲಂಚ ಪಡೆದಿರುವ ಆರೋಪ ಹೊತ್ತಿರುವ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರಿಗೆ ದೊಡ್ಡ ಶಾಕ್ ತಗುಲಿದೆ. ಏರ್ ಸೆಲ್ ಮ್ಯಾಕ್ಸಿಸ್ ಒಪ್ಪಂದದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ದಯಾನಿಧಿ ಮಾರನ್ ಅವರ 742 ಕೋಟಿ ರು ಮೌಲ್ಯದ ಆಸ್ತಿ ಜಪ್ತಿ ಮಾಡಲು ಮುಂದಾಗಿದೆ.

ಇದಕ್ಕೂ ಮುನ್ನ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಮಾರನ್ ಅವರಿಗೆ 1,767 ಕೋಟಿ ರು ಮೌಲ್ಯ ಜಪ್ತಿ ಮಾಡಲು ನೋಟಿಸ್ ಜಾರಿ ಮಾಡಲಾಗಿತ್ತು. ಮಾರನ್ ಬ್ರದರ್ಶ್ ಮಾಲೀಕತ್ವದ ಸನ್ ಡೈರೆಕ್ಟ್ ಪ್ರೈ ಲಿ ಕಂಪನಿಯ 629 ಕೋಟಿ ರು ಮೌಲ್ಯದ ಷೇರುಗಳನ್ನು ಯುಕೆ ಮೂಲದ ಮ್ಯಾಕ್ಸಿಸ್ ಕಂಪನಿ ಖರೀದಿಸಿರುವುದು ಗುಟ್ಟಾಗಿ ಉಳಿದಿಲ್ಲ.

Aircel case: ED set to attach Dayanidhi Maran's assets worth Rs 742 crore

ಸುಮಾರು 549,96,01,793 ಲಂಚ ರೂಪದಲ್ಲಿ ಪಡೆದು ಸನ್ ಡೈರೆಕ್ಟ್ ನಲ್ಲಿ ಬಂಡವಾಳ ರೂಪದಲ್ಲಿ ಹೂಡಲಾಗಿತ್ತು. ಆಸ್ಟ್ರೋ ಆಲ್ ಏಷ್ಯಾ ನೆಟ್ವರ್ಕ್ಸ್ ಒಡೆತನದ ಸೌಥ್ ಏಷ್ಯಾ ಎಂಟರ್ ಟ್ರೈನ್ ಮೆಂಟ್ ಹೋಲಿಂಗ್ಸ್ ಹಣ ಪಾವತಿಸಿರುವ ಬಗ್ಗೆ ಮಾಹಿತಿ, ಪುರಾವೆ ಸಿಕ್ಕಿತು. ಬಹುಕೋಟಿ ಟೆಲಿಕಾಂ ಹಗರಣದಲ್ಲಿ ಆರೋಪಗಳು ಕೇಳಿ ಬಂದ ನಂತರ ಕೇಂದ್ರ ಜವಳಿ ಖಾತೆಗೆ ದಯಾನಿಧಿ ಮಾರನ್ ರಾಜೀನಾಮೆ ನೀಡಿದ್ದರು.

ಚೆನ್ನೈನ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ದೂರವಾಣಿ ಸಂಪರ್ಕ ಪಡೆದು ನಂತರ ಸೋದರ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಕಚೇರಿಗೆ ನೀಡಲಾಗಿತ್ತು ಎಂಬ ಆರೋಪ ಮಾರನ್ ಸೋದರರು ಹೊತ್ತಿದ್ದರು. ಇದರ ಜೊತೆಗೆ ಏರ್ ಸೆಲ್ ಹಾಗೂ ಮಾಕ್ಸಿಸ್ ಒಪ್ಪಂದ, 2ಜಿ ಹಗರಣ, ಟೆಲಿಕಾಂ ನಿಯಮ ಉಲ್ಲಂಘನೆ ಮುಂತಾದ ಆರೋಪಗಳು ಮಾರನ್ ವಿರುದ್ಧ ಕೇಳಿ ಬಂದಿದೆ.

English summary
Probing money laundering charges in the Aircel-Maxis case, Enforcement Directorate will soon attach properties worth over Rs 742 crore belonging to former Telecom minister Dayanidhi Maran, his family members and associates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X