ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‍ಬಸ್‍ನಿಂದ ಭಾರತೀಯ ಪ್ರತಿಭೆಗಳ ಬಳಕೆ, ಬೆಂಗಳೂರಿನಲ್ಲಿ ಐಟಿ ಕೇಂದ್ರ

|
Google Oneindia Kannada News

ಬೆಂಗಳೂರು, ಸೆ 04: ಏರ್‍ಬಸ್ ಇಂಡಿಯಾ ಸಂಸ್ಥೆಯು ಬೆಂಗಳೂರಿನಲ್ಲಿ 500- ಉದ್ಯೋಗಿಗಳುಳ್ಳ, ಅತ್ಯಾಧುನಿಕ ಕಚೇರಿಯನ್ನು ಆರಂಭಿಸಿದೆ. ಸಮೂಹದ ಅತಿವೇಗದಲ್ಲಿ ವಿಸ್ತರಣೆಯಾಗುತ್ತಿರುವ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸಾಮರ್ಥ್ಯಗಳನ್ನು ತನ್ನ ಜಾಗತಿಕ ಕಾರ್ಯಾಚರಣೆಯಾದ್ಯಂತ ಸುಧಾರಿಸಲು ಇದು ನೆರವಾಗಲಿದೆ.

ತನ್ನ ಜಾಗತಿಕ ಹೆಜ್ಜೆಗುರುತಿನ ಮೂಲಕವಾಗಿ ತನ್ನ ಮೌಲ್ಯವನ್ನು ಗರಿಷ್ಠಗೊಳಿಸುವ ಏರ್‍ಬಸ್‍ನ ಪರಿಶ್ರಮದ ಫಲವೇ ಈ ಹೊಸ ಮಾಹಿತಿ ನಿರ್ವಹಣಾ ಕೇಂದ್ರ. ಅದರಲ್ಲೂ ಭಾರತದಲ್ಲಿ ಗಮನಾರ್ಹವಾದ ಮಾಹಿತಿ ತಂತ್ರಜ್ಞಾನ(ಐಟಿ) ಎಂಜಿನಿಯರಿಂಗ್ ಪ್ರತಿಭೆಗಳು ಏರ್‍ಬಸ್‍ನ ಐರೋಪ್ಯ ಪಾಲುದಾರ ಇಕೋಸಿಸ್ಟಮ್ಸ್‍ಗೆ ಪೂರಕವಾಗಿದೆ.

ಪ್ರಯಾಣಿಕರೇ ಬಳಸಿ, ಏರ್‍ಬಸ್ ಸಂಸ್ಥೆಯಿಂದ ವಿನೂತನ ಟ್ರಾವೆಲ್ ಪಿಲ್ಲೋಪ್ರಯಾಣಿಕರೇ ಬಳಸಿ, ಏರ್‍ಬಸ್ ಸಂಸ್ಥೆಯಿಂದ ವಿನೂತನ ಟ್ರಾವೆಲ್ ಪಿಲ್ಲೋ

ಭಾರತದಲ್ಲಿ ಮಾಹಿತಿ ನಿರ್ವಹಣಾ ಸಾಮರ್ಥ್ಯವನ್ನು ವಿಸ್ತರಿಸಲು ಏರ್‍ಬಸ್ ಆರಂಭಿಸಿದ್ದು 2017ರಲ್ಲಿ. ಆನಂತರ 2019 ಮತ್ತು 2020ರಲ್ಲಿ ಅತ್ಯಂತ ವೇಗವಾಗಿ ಇದು ಅಭಿವೃದ್ಧಿ ಸಾಧಿಸುವತ್ತ ಹೆಜ್ಜೆಯಿಟ್ಟಿದೆ. ಇದರಲ್ಲಿ ವಿಸ್ತರಣೆಯಾಗುತ್ತಿರುವ ಕ್ಷೇತ್ರಗಳೆಂದರೆ, ಇಆರ್‍ಪಿ ಆಪರೇಷನ್‍ಗಳು, ಎಂಜಿನಿಯರಿಂಗ್ ಮತ್ತು ಉತ್ಪನ್ನದ ಜೀವನ-ಚಕ್ರ ನಿರ್ವಹಣೆ ಮತ್ತು ಡಿಜಿಟಲ್ ಸಾಮರ್ಥ್ಯಗಳು. ಇದರಲ್ಲಿ ಬಿಗ್ ಡೇಟಾ, ಅಡ್ವಾನ್ಸ್ಡ್ ಅನಾಲಿಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ಕ್ಲೌಡ್ ಮತ್ತು ಡೆವ್‍ಆಪ್ಸ್, ಎಪಿಐ ಡೆವಲಪ್‍ಮೆಂಟ್ ಮತ್ತು ಸೈಬರ್ ಭದ್ರತೆ ಕೂಡ ಒಳಗೊಂಡಿದೆ.

ಆನಂದ್. ಇ. ಸ್ಟ್ಯಾನ್ಲಿ ಮಾತನಾಡಿ

ಆನಂದ್. ಇ. ಸ್ಟ್ಯಾನ್ಲಿ ಮಾತನಾಡಿ

ಏರ್‍ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ್. ಇ. ಸ್ಟ್ಯಾನ್ಲಿ ಮಾತನಾಡಿ, ಪ್ರತಿಭೆ, ಮೇಲ್ಮಟ್ಟಕ್ಕೆ ಏರುವಂಥ ಸಾಮರ್ಥ್ಯ ಮತ್ತು ಇಕೋಸಿಸ್ಟಂನ ಬಲಿಷ್ಠ ಅಸ್ತಿತ್ವವನ್ನು ಹೊಂದಿರುವಂಥ ಭಾರತದಲ್ಲಿ ಏರ್‍ಬಸ್ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಬಹುಶಃ ಇದು ಜಗತ್ತಿನಲ್ಲೇ ಅತಿದೊಡ್ಡ ಐಟಿ ಪಾಲುದಾರಿಕಾ ಬೇಸ್ ಆಗಿರಬಹುದು'' ಎಂದು ಹೇಳಿದ್ದಾರೆ. ನಮ್ಮ ಅತ್ಯಾಧುನಿಕ ಮಾಹಿತಿ ನಿರ್ವಹಣಾ ವ್ಯವಸ್ಥೆಯು ಮೌಲ್ಯಕ್ಕೆ ಸಂಬಂಧಿಸಿದ್ದು. ಇದು ಹೊರಗುತ್ತಿಗೆಯ ಬದಲಿಗೆ ಒಳಗುತ್ತಿಗೆಯಾಗಿದೆ. ಇದು ಕೋರ್‍ಗೆ ಸಂಬಂಧಿಸಿದ್ದೇ ಹೊರತು ನಾನ್-ಕೋರ್‍ಗೆ ಅಲ್ಲ'' ಎಂದೂ ಅವರು ಹೇಳಿದ್ದಾರೆ.

ಪರಿಸರ ಸ್ನೇಹಿ ಕಚೇರಿ

ಪರಿಸರ ಸ್ನೇಹಿ ಕಚೇರಿ

ಹೊಸ ಕಚೇರಿಯು ನಿಸರ್ಗದಿಂದ ಸ್ಫೂರ್ತಿ ಪಡೆದಿದ್ದು, ಇದಕ್ಕೆ ಭಾರೀ ಪ್ರಮಾಣದ ಹಸಿರು ಗಿಡಮರಗಳು ಮತ್ತು ನೈಸರ್ಗಿಕ ಬೆಳಕನ್ನೇ ಬಳಸಲಾಗಿದೆ. ಇಂಗಾಲದ ಹೊರಸೂಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕೇಂದ್ರವು ವರ್ಚುವಲ್ ಕಂಪ್ಯೂಟಿಂಗ್ ಅನ್ನು ಬಳಸಲಿದೆ. ಇಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಗಾಲಿಕುರ್ಚಿಗಳು ಹಾಗೂ ಬ್ರೈಲ್ ಕೋಡಿಂಗ್ ಲಭ್ಯವಿರುವಂತೆ ನೋಡಿಕೊಂಡು, ವಿಶಿಷ್ಟ ಚೇತನ ಉದ್ಯೋಗಿಗಳ ಅಗತ್ಯತೆಗಳನ್ನು ಪೂರೈಸುವಂತೆಯೇ ಇದನ್ನು ನಿರ್ಮಾಣ ಮಾಡಲಾಗಿದೆ.

24x7 ಕಾರ್ಯನಿರ್ವಹಣೆಗೆ ಬೆಂಬಲ

24x7 ಕಾರ್ಯನಿರ್ವಹಣೆಗೆ ಬೆಂಬಲ

ಲಗುಬಗೆಯ ಕೆಲಸದಿಂದ ಪ್ರೇರಣೆ ಪಡೆದುಕೊಂಡು, ಈ ಕಚೇರಿಯಲ್ಲಿ ದೂರದ ಸಹಭಾಗಿತ್ವ, ಎಲ್ಲ ಕೆಲಸದ ಸ್ಥಳಗಳಲ್ಲೂ ಟಚ್ ಸ್ಕ್ರೀನ್ ವ್ಯವಸ್ಥೆ, ಪೋಗ್ರಾಂ ಇಂಕ್ರಿಮೆಂಟ್(ಪಿಐ) ಕಾರ್ಯಕ್ರಮಗಳಿಗೆ ಬೆಂಬಲ ನೀಡಲೆಂದು ಆಂಫಿಥಿಯೇಟರ್‍ಗಳು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಲ್ಲಿ ನ್ಯಾಪ್ ರೂಂಗಳು, ಬೆಡ್ ರೂಂಗಳು, ಶವರ್‍ಗಳೂ ಇದ್ದು, ಆ ಮೂಲಕ ಉದ್ಯೋಗಿಗಳ ಉತ್ಪಾದಕತೆಯನ್ನು ವರ್ಧಿಸುವ ಮತ್ತು 24x7 ಕಾರ್ಯನಿರ್ವಹಣೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹೆಜ್ಜೆಯಿಡಲಾಗಿದೆ.

ಮಾಹಿತಿ ಅಧಿಕಾರಿ ಕಾರ್ಲೋ ನಿಜಾಮ್

ಮಾಹಿತಿ ಅಧಿಕಾರಿ ಕಾರ್ಲೋ ನಿಜಾಮ್

ಡಿಜಿಟಲ್ ಪರಿವರ್ತನೆ ಎಂಬುದು ನಮ್ಮ ಕಾರ್ಯಪಡೆಯ ವಿಕಸನದಲ್ಲಿ ಬದಲಾವಣೆಗಳಿಗೆ ದಾರಿ ಮಾಡಿಕೊಡುತ್ತಿದೆ. ಅಲ್ಲದೆ ಗರಿಷ್ಠ ಪ್ರಮಾಣದ ಆಂತರಿಕ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ನೀಡುತ್ತದೆ, ಹೊಸ ಪಾಲುದಾರ ಇಕೋವ್ಯವಸ್ಥೆಗೆ ನಮ್ಮನ್ನು ತೆರೆದುಕೊಳ್ಳುವಂತೆ ಮಾಡುತ್ತದೆ'' ಎಂದು ಏರ್‍ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಮುಖ್ಯ ಮಾಹಿತಿ ಅಧಿಕಾರಿ ಕಾರ್ಲೋ ನಿಜಾಮ್ ಹೇಳುತ್ತಾರೆ. ಈ ವಿಕಸನಗಳಿಗೆ ಸ್ಪಂದಿಸಲು ಕೇವಲ ನಮ್ಮ ಯುರೋಪಿಯನ್ ಹೆಜ್ಜೆಗುರುತುಗಳಿಂದ ಸಾಧ್ಯವಿಲ್ಲ. ಇದಕ್ಕೆ ಸಮಗ್ರವಾದ ಜಾಗತಿಕ ವಿಧಾನವೊಂದು ಬೇಕು. ಭಾರತದಲ್ಲಿ ನಮ್ಮ ಹೆಜ್ಜೆಗುರುತು ಎಂಬುದು ಮಾಹಿತಿ ನಿರ್ವಹಣೆಯ ವ್ಯೂಹಾತ್ಮಕ ಮತ್ತು ಸಮಗ್ರವಾದ ಭಾಗವಾಗಿದ್ದು, ಅದು ಕೌಶಲ್ಯಭರಿತ ಪ್ರತಿಭೆಗಳ ಮಹಾಪೂರವನ್ನೇ ಒದಗಿಸುತ್ತದೆ'' ಎಂದೂ ಅವರು ಹೇಳಿದ್ದಾರೆ.

ಏರ್‍ಬಸ್ ಬಗ್ಗೆ

ಏರ್‍ಬಸ್ ಬಗ್ಗೆ

ಏರ್‍ಬಸ್ ಎನ್ನುವುದು ಏರೋನಾಟಿಕ್ಸ್, ಬಾಹ್ಯಾಕಾಶ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವಲ್ಲಿ ಜಾಗತಿಕ ನಾಯಕ. 2018ರಲ್ಲಿ ಇದು 64 ಶತಕೋಟಿ ಪೌಂಡ್ ಆದಾಯವನ್ನು ಗಳಿಸಿದೆ ಮತ್ತು 1,34,000 ಮಂದಿಗೆ ಉದ್ಯೋಗವನ್ನೂ ನೀಡಿದೆ. ಏರ್‍ಬಸ್ ಸಂಸ್ಥೆಯು ಅತ್ಯಂತ ವ್ಯಾಪಕ ಶ್ರೇಣಿಯ ಪ್ರಯಾಣಿಕ ಏರ್‍ಲೈನರ್‍ಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಏರ್‍ಬಸ್ ಒಂದು ಐರೋಪ್ಯ ನಾಯಕನಾಗಿದ್ದು, ಅದು ಟ್ಯಾಂಕರ್, ಯುದ್ಧ, ಸಾಗಣೆ ಮತ್ತು ಮಿಷನ್ ವಿಮಾನಗಳನ್ನು ಒದಗಿಸುವುದಲ್ಲದೆ, ಮುಂಚೂಣಿಯಲ್ಲಿರುವ ಬಾಹ್ಯಾಕಾಶ ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಹೆಲಿಕಾಪ್ಟರ್‍ಗಳ ವಿಚಾರಕ್ಕೆ ಬಂದರೆ, ಜಗತ್ತಿನಾದ್ಯಂತ ಅತ್ಯಂತ ದಕ್ಷವಾದ ಸಿವಿಲ್ ಮತ್ತು ಸೇನಾ ರೋಟಾರ್ ಕ್ರಾಫ್ಟ್‍ಗಳನ್ನು ಏರ್‍ಬಸ್ ಒದಗಿಸಿದೆ.

English summary
Airbus India has inaugurated a 500-person, state-of-the-art office in Bengaluru to help advance the group’s fast-expanding information technology and digital capabilities across its global operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X