ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಬಸ್ ನಿಂದ ಭಾರತದಲ್ಲಿ ಎ220 ವಿಮಾನ ಪ್ರದರ್ಶನ

|
Google Oneindia Kannada News

ಬೆಂಗಳೂರು, ನವೆಂಬರ್ 12: ಏರ್ ಬಸ್ ನ ಏಷಿಯಾ-ಪೆಸಿಫಿಕ್ ಪ್ರಾತ್ಯಕ್ಷಿಕೆ ಪ್ರವಾಸದ ಭಾಗವಾಗಿ ನ.11 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಂಗಲ್ - ಏಸೆಲ್ ಎ220 ವಿಮಾನವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಏರ್ ಲೈನ್ ಮತ್ತು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.

 ಪ್ರಯಾಣಿಕರೇ ಬಳಸಿ, ಏರ್‍ಬಸ್ ಸಂಸ್ಥೆಯಿಂದ ವಿನೂತನ ಟ್ರಾವೆಲ್ ಪಿಲ್ಲೋ ಪ್ರಯಾಣಿಕರೇ ಬಳಸಿ, ಏರ್‍ಬಸ್ ಸಂಸ್ಥೆಯಿಂದ ವಿನೂತನ ಟ್ರಾವೆಲ್ ಪಿಲ್ಲೋ

ಈ ಪ್ರವಾಸ ಸ್ಥಿರ ಪ್ರದರ್ಶನ ಮತ್ತು ಪ್ರಾಯೋಗಿಕ ಹಾರಾಟವನ್ನು ಒಳಗೊಂಡಿದೆ. ಈ ವಿಮಾನದ ಮುಂದಿನ ನಿಲುಗಡೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನ.12ರಂದು ತಲುಪಿದೆ.

Airbus conducts demonstration of A220 in Bengaluru

 ಏರ್‍ಬಸ್‍ನಿಂದ ಭಾರತೀಯ ಪ್ರತಿಭೆಗಳ ಬಳಕೆ, ಬೆಂಗಳೂರಿನಲ್ಲಿ ಐಟಿ ಕೇಂದ್ರ ಏರ್‍ಬಸ್‍ನಿಂದ ಭಾರತೀಯ ಪ್ರತಿಭೆಗಳ ಬಳಕೆ, ಬೆಂಗಳೂರಿನಲ್ಲಿ ಐಟಿ ಕೇಂದ್ರ

ದೊಡ್ಡದಾದ ಮತ್ತು ಪ್ರಶಾಂತ ಕ್ಯಾಬಿನ್ ಗಳನ್ನು ಹೊಂದಿರುವ ಎ220, ಸಿಂಗಲ್ -ಏಸೆಲ್ ವಿಮಾನದಲ್ಲಿ ಪ್ರಯಾಣಿಕರಿಗೆ ವಿಶಾಲ ಜಾಗದ ಜೊತೆಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.

Airbus conducts demonstration of A220 in Bengaluru

ಇದು ಕಲೆ ಮತ್ತು ತಂತ್ರಜ್ಞಾನಗಳು, ಆಧುನಿಕ ಏರೋ ಡೈನಮಿಕ್ ವಿನ್ಯಾಸ ಹಾಗೂ ಹೊಸ ಪೀಳಿಗೆಯ ಇಂಜಿನ್ ಗಳನ್ನು ಅಳವಡಿಸಿದ್ದು, ಇದರಿಂದ ಶೇ. 20ರಂದು ಇಂಧನ ಉಳಿತಾಯವಾಗುತ್ತದೆ. ಇದು ಸಣ್ಣ ವಿಮಾನಗಳ ಮಾರುಕಟ್ಟೆಯನ್ನು ಕೇಂದ್ರೀಕರಿಸಿ ತಯಾರಿಸಿರುವ ವಿಮಾನವಾಗಿದ್ದು, ಕೇವಲ 100ರಿಂದ 150 ಸೀಟುಗಳನ್ನು ಹೊಂದಿದೆ. ಇದು 3,400 ನಾಟಿಕಲ್ ಮೈಲಿ ಪಯಣಿಸುವ ಸಾಮರ್ಥ್ಯ ಹೊಂದಿದ್ದು, ಭಾರತದಲ್ಲಿ ಕಾರ್ಯಾಚರಣೆಗೆ ಸೂಕ್ತವಾಗಿದೆ.

English summary
Global aerospace giant Airbus on Monday conducted a demonstration tour of its new A220 on the Bengaluru-Delhi route, hoping to secure sizeable orders for the aircraft from Indian airline operators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X