• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಯಾಣಿಕರೇ ಬಳಸಿ, ಏರ್‍ಬಸ್ ಸಂಸ್ಥೆಯಿಂದ ವಿನೂತನ ಟ್ರಾವೆಲ್ ಪಿಲ್ಲೋ

|

ಬೆಂಗಳೂರು, ಜುಲೈ 02: ಏರ್‍ಬಸ್‍ನಲ್ಲಿ ಇನ್ನು ಮುಂದೆ ತುಂಬಾ ದೂರದ ಪ್ರಯಾಣ ಮಾಡುವಾಗ ನಿಮಗೆ ಕತ್ತು ನೋವು ಬರುವುದಿಲ್ಲ. ನಿಮ್ಮ ಪ್ರಯಾಣವನ್ನು ಮತ್ತಷ್ಟು ಆರಾಮ ಮಾಡುವ ನಿಟ್ಟಿನಲ್ಲಿ ದೂರದ ಪ್ರಯಾಣ ಮಾಡುವ ಎಕಾನಮಿ-ಕ್ಲಾಸ್ ಪ್ರಯಾಣಿಕರಿಗೆ ವಿನೂತನವಾದ ಕಂಫರ್ಟ್ ಕಿಟ್ ಅನ್ನು ನೀಡಲಿದೆ. ಯುಯುಒ ಇನ್ನೋವೇಶನ್ ಎಂಬ ಸ್ಟಾರ್ಟಪ್ ಕಂಪನಿ ಏರ್‍ಬಸ್ ಇಂಡಿಯಾದ ಆಂತರಿಕ ಇಂಜಿನಿಯರ್ ಗಳ ನೆರವಿನಿಂದ ಈ ವಿನೂತನವಾದ ನ್ಯಾಪ್‍ಈಜಿ ಟ್ರಾವೆಲ್ ಪಿಲ್ಲೋವನ್ನು ಅಭಿವೃದ್ಧಿಪಡಿಸಿದೆ.

ದೇಶದ ವಿಮಾನಯಾನ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿನೂತನವಾದ ಸೌಲಭ್ಯ ನೀಡಲಾಗುತ್ತಿದೆ. ಈ ನ್ಯಾಪ್‍ಈಜಿ ಟ್ರಾವೆಲ್ ಪೊಲ್ಲೋ ಕೇವಲ ಕುತ್ತಿಗೆ ದಿಂಬು ಅಲ್ಲ. ಇದು ಬಹು ಉಪಯೋಗಿ ದಿಂಬಾಗಿರುತ್ತದೆ. ಅಂದರೆ, ಇದನ್ನು ಕೇವಲ ವಿಮಾನದಲ್ಲಿ ಪ್ರಯಾಣಿಸುವಾಗ ಬಳಕೆ ಮಾಡುವುದಷ್ಟೇ ಅಲ್ಲ, ಕಾರಿನಲ್ಲಿ ಪ್ರಯಾಣ ಮಾಡುವಾಗ, ರೈಲಿನಲ್ಲಿ ಪ್ರಯಾಣ ಮಾಡುವಾಗ ಈ ದಿಂಬನ್ನು ಬಳಸಿಕೊಂಡು ಆರಾಮವಾಗಿ ನಿದ್ದೆ ಮಾಡಬಹುದಾಗಿದೆ.

ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್‌ಬಸ್, ವಿಶೇಷತೆ ಏನು?

ಏರ್‍ಬಸ್ ಇಂಡಿಯಾ ಈ ಪಿಲ್ಲೋವನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಯುಯುಒ ಇನ್ನೋವೇಶನ್ಸ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲೂ ಯುಯುಒ ಇನ್ನೋವೇಶನ್‍ಗೆ ನೆರವಾಗಲಿದೆ. ಬೆಂಗಳೂರಿನ ಏರ್‍ಬಸ್ ಘಟಕದ ಉದ್ಯೋಗಿಗಳಾದ ಪ್ರದಿಪ್ತ ಕಿಶೋರ್ ಸಾಹು ಮತ್ತು ಸೋಹಮ್ ನಾರಾಯಣ್ ಅವರು ಈ ಪೇಟೆಂಟ್ ವಿನ್ಯಾಸವನ್ನು ಆಂತರಿಕ ಯೋಜನೆಯಾಗಿ ಅಭಿವೃದ್ಧಿಪಡಿಸಿದ್ದಾರೆ.

ಯುಯುಒ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್‍ನ ಸಿಇಒ ಮತ್ತು ಸಹ-ಸಂಸ್ಥಾಪಕ ಸೋಹಮ್ ನಾರಾಯಣ್ ಪಟೇಲ್ ಅವರು ಮಾತನಾಡಿ, "ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಬೆಳೆಯುತ್ತಿದೆ. ಈ ದೂರದ ಪ್ರಯಾಣದಲ್ಲಿ ಆಗುವ ನೋವು ಮತ್ತು ಆಯಾಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಯುಯುಒ ಇನ್ನೋವೇಶನ್ ವಿನೂತನವಾದ ದಿಂಬಿನ ಮೂಲಕ ದೂರದ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಆರಾಮವಾದ ನಿದ್ದೆಯ ಅನುಭವವನ್ನು ನೀಡಲಿದೆ. ಈ ಮೌಲ್ಯಯುತವಾದ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಏರ್‍ಬಸ್ ಸೂಕ್ತ ಅವಕಾಶ ಮತ್ತು ಮಾರ್ಗದರ್ಶನವನ್ನು ನೀಡಿದೆ" ಎಂದು ತಿಳಿಸಿದರು.

ಬೆಂಗಳೂರು-ಬೆಳಗಾವಿ ನಡುವೆ ಏರ್ ಬಸ್ ಸಂಚಾರ ಆರಂಭ

ಏರ್‍ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಸೂರಜ್ ಚೆಟ್ರಿ ಅವರು ಮಾತನಾಡಿ, "ಏರ್‍ಬಸ್ ಯಾವಾಗಲೂ ಆವಿಷ್ಕಾರಗಳಿಗೆ ಮತ್ತು ಉದ್ಯಮಶೀಲತ್ವಕ್ಕೆ ಉತ್ತೇಜನ ನೀಡುತ್ತಾ ಬಂದಿದೆ. ಭಾರತದಲ್ಲಿ ವಿಶ್ವದರ್ಜೆಯ ಪ್ರತಿಭಾನ್ವಿತ ಇಂಜಿನಿಯರ್‍ಗಳಿದ್ದಾರೆ. ಒಂದು ಚಿಂತನಾಶೀಲ ಉತ್ಪನ್ನದ ಅಭಿವೃದ್ಧಿ ಮೂಲಕ ನಮ್ಮ ಇಬ್ಬರು ಉದ್ಯೋಗಿಗಳು ಪೂರ್ಣ ಪ್ರಮಾಣದ ಉದ್ಯಮಿಗಳಾಗಲು ಬೆಂಬಲವಾಗಿ ನಿಂತಿರುವುದಕ್ಕೆ ನಮಗೆ ಸಂತಸ ತಂದಿದೆ"ಎಂದು ತಿಳಿಸಿದರು.

ಏರ್‍ಬಸ್‍ನಿಂದ ವಾಣಿಜ್ಯ ಪೈಲಟ್ ಮತ್ತು ನಿರ್ವಹಣೆ ತರಬೇತಿ ಕೇಂದ್ರ ಆರಂಭ

ಈ ನ್ಯಾಪ್‍ಈಜಿ ಕಂಫರ್ಟ್ ಕಿಟ್ 2019 ರ ಆಗಸ್ಟ್‍ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಆರಂಭಿಕ ಹಂತದಲ್ಲಿ ಕಿಕ್‍ಸ್ಟಾರ್ಟರ್ ಮತ್ತು ಇಂಡಿಯೆಗೋಗೋ ಮೂಲಕ ಬಿಡುಗಡೆ ಮಾಡಲಿದ್ದು, ನಂತರದ ದಿನಗಳಲ್ಲಿ ಇ-ಕಾಮರ್ಸ್ ಪ್ಲಾಟ್‍ಫಾರ್ಮ್‍ಗಳಿಗೂ ಬಿಡುಗಡೆ ಮಾಡಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Airbus BizLab is a global aerospace business accelerator where startups and Airbus intrapreneurs speed up the transformation of innovative ideas into valuable businesses. Since its inception in 2015, Airbus BizLab has accelerated 72 startups and 54 internal projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more