ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾನ್ವೇಷಣೆ ನಡೆಸಿದ ಏರ್ ಬಸ್ ಇಂಡಿಯಾ

|
Google Oneindia Kannada News

ಬೆಂಗಳೂರು, ಡಿಸೆಂಬರ್ 12: ಏರ್ ಬಸ್ ಇಂಡಿಯಾ ಸಂಸ್ಥೆ, ಹೊಸ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ನಗರದಲ್ಲಿ ಹಮ್ಮಿಕೊಂಡಿದ್ದ 'ಏರೋಥಾನ್ 2.0' ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಏರ್ ಬಸ್ ನ ವೇಗವಾಗಿ ವಿಸ್ತಾರಗೊಳ್ಳುತ್ತಿರುವ ಜಾಗತಿಕ ಕಾರ್ಯಾರಣೆಯ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸಾಮಥ್ರ್ಯಕ್ಕೆ ಬೆಂಬಲ ನೀಡಲು ಹೊಸ ಪ್ರತಿಭೆಗಳನ್ನು ನೇಮಕಮಾಡಿಕೊಳ್ಳುವ ಉದ್ದೇಶದಿಂದ ಏರೋಥಾನ್ ಆಯೋಜಿಸಲಾಗಿತ್ತು. ಇಲ್ಲಿ ಕೃತಕ ಬುದ್ಧಿಮತ್ತೆ, ಡಿಜಿಟಲ್ ಪ್ರಸರಣ, ಉದ್ಯಮ ಸಂಶೋಧನಾ ಯೋಜನೆ (ಇಆರ್ ಪಿ), ಆಟೋಮೇಷನ್, ಪ್ರೊಡಕ್ಟ್ ಲೈಫ್ ಸೈಕಲ್ ಮ್ಯಾನೇಜ್ ಮೆಂಟ್ (ಪಿಎಲ್ ಎಂ), ಇಂಜಿನಿಯರಿಂಗ್ ಸಲ್ಯೂಷನ್ಸ್ , ಮಾನಿಟರಿಂಗ್ ಆಂಡ್ ಅನಾಲಿಸಿಸ್ ಕ್ಷೇತ್ರಗಳ ಪ್ರತಿಭೆಗಳಿಗೆ ಆದ್ಯತೆ ನೀಡಲಾಗಿತ್ತು.

ಏರ್ ಬಸ್ ನಿಂದ ಭಾರತದಲ್ಲಿ ಎ220 ವಿಮಾನ ಪ್ರದರ್ಶನಏರ್ ಬಸ್ ನಿಂದ ಭಾರತದಲ್ಲಿ ಎ220 ವಿಮಾನ ಪ್ರದರ್ಶನ

ಕಳೆದ ಬಾರಿ ನಡೆದ ಏರೋಥಾನ್ ಗೆ 3,500ಕ್ಕೂ ಹೆಚ್ಚು ಪದವೀಧರು ನೋಂದಣಿಯಾಗಿದ್ದರು, ಇದರಲ್ಲಿ ಸುಮಾರು 500 ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಬೆಂಗಳೂರಿನಲ್ಲಿರುವ ಸ್ಟೇಟ್ ಆಫ್ ಆರ್ಟ್ ಇನ್ ಫಾರ್ಮೇಷನ್ ಮ್ಯಾನೇಜ್ ಮೆಂಟ್ ಕೇಂದ್ರದಲ್ಲಿ ಉದ್ಯೋಗ ನೀಡಲಾಗಿದೆ.

Airbus Aerothon Hackathon for Talent Hunt

ಎರಡನೇ ಆವೃತ್ತಿಯ 'ಏರೋಥಾನ್' ನೋಂದಣಿ 6 ಸಾವಿರದ ಗಡಿ ದಾಟಿತ್ತು. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ 2020ರಲ್ಲಿ ಏರ್ ಬಸ್ ಐಎಂ ಕೇಂದ್ರದ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲು 'ಏರ್ ಬಸ್ ಚಾಲೆಂಜ್' ಮತ್ತು ರೋಡ್ ಶೋ ಕೂಡ ಆಯೋಜಿಸಲಾಗಿತ್ತು. ಸುದೀರ್ಘ 8 ಗಂಟೆಗಳ ಸ್ಫರ್ಧೆಯಲ್ಲಿ ಗೆದ್ದವರಿಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು.

ಏರ್‍ಬಸ್‍ನಿಂದ ಭಾರತೀಯ ಪ್ರತಿಭೆಗಳ ಬಳಕೆ, ಬೆಂಗಳೂರಿನಲ್ಲಿ ಐಟಿ ಕೇಂದ್ರಏರ್‍ಬಸ್‍ನಿಂದ ಭಾರತೀಯ ಪ್ರತಿಭೆಗಳ ಬಳಕೆ, ಬೆಂಗಳೂರಿನಲ್ಲಿ ಐಟಿ ಕೇಂದ್ರ

ಯುವ ಪದವೀಧರರನ್ನು ಉದ್ದೇಶಿಸಿ ಇಸ್ರೋದ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್, ಏರ್ ಬಸ್ ಇಂಡಿಯಾದ ಪ್ರಮುಖ ಸಂಪರ್ಕ ಅಧಿಕಾರಿ ಚಾರ್ಲೋ ನಿಜಾಮ್, ಏರ್ ಬಸ್ ಇಂಡಿಯಾ ಹಾಗೂ ದಕ್ಷಿಣ ಏಷ್ಯಾದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸೂರಜ್ ಚೆಟ್ರಿ ಮತ್ತಿತರರು ಮಾತನಾಡಿದರು.

Airbus Aerothon Hackathon for Talent Hunt

ಈ ಕಾರ್ಯಕ್ರಮದಲ್ಲಿ, ಪದವೀಧರರಿಗೆ ಉದ್ಯೋಗಾವಕಾಶಗಳ ಜೊತೆಗೆ, ಕಂಪನಿಯ ಸಂಸ್ಕೃತಿ, ಮೌಲ್ಯಗಳ ಕುರಿತು ಕೂಡ ಮಾಹಿತಿ ನೀಡಲಾಯಿತು.

English summary
Airbus Aerothon 2.0 Hackathon conducted as a part of Talent Hunt programme which witnessed more than 6 thousand nomination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X