• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾಟಾಯಿಂದ 50 ಮಿಲಿಯನ್ ಡಾಲರ್ ತುರ್ತು ಹಣ ಪಡೆಯಲಿದೆ ಏರ್‌ಏಷ್ಯಾ ಇಂಡಿಯಾ

|

ನವದೆಹಲಿ, ನವೆಂಬರ್ 24: ಮಲೇಷಿಯಾ ಏರ್‌ಏಷ್ಯಾ ಗ್ರೂಪ್ ಬಿಹೆಚ್‌ಡಿಯೊಂದಿಗೆ ಭಾರತದಲ್ಲಿ ತನ್ನ ಜಂಟಿ ಉದ್ಯಮವನ್ನು ಇರಿಸಿಕೊಳ್ಳಲು ಟಾಟಾ ಸಮೂಹವು 50 ಮಿಲಿಯನ್ ಡಾಲರ್ ಹಣವನ್ನು ತುರ್ತಾಗಿ ಒದಗಿಸುತ್ತದೆ ಎಂದು ಈ ವಿಷಯದ ಕುರಿತು ತಿಳಿದ ಇಬ್ಬರು ತಿಳಿಸಿದ್ದಾರೆ.

ಸಾಲ ನೀಡುವುದುರ ಜೊತೆಗೆ ಈಕ್ವಿಟಿಯೊಂದಿಗೆ ಏರ್‌ಏಷ್ಯಾ ಲಿಮಿಟೆಡ್‌ನಲ್ಲಿನ ಟಾಟಾ ಸಮೂಹದ ಪಾಲು ಪ್ರಸ್ತುತ ಶೇ. 51ರಷ್ಟು ಮೀರಿ ಬೆಳೆಯಬಹುದು ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎಂದು ಲೈವ್‌ಮಿಂಟ್ ವರದಿ ಮಾಡಿದೆ.

ದೆಹಲಿ ಮುಂಬೈ ನಡುವೆ ರೈಲು ಹಾಗೂ ವಿಮಾನ ಸೇವೆ ಸ್ಥಗಿತಕ್ಕೆ ನಿರ್ಧಾರ

ಮಲೇಷಿಯಾ ಮೂಲದ ಬಜೆಟ್ ಆಧಾರಿತ ವಿಮಾನಯಾನ ಸಂಸ್ಥೆ ಏರ್‌ಏಷ್ಯಾ ಸೇರಿದಂತೆ ಅನೇಕ ವಿಮಾನಯಾನ ಸಂಸ್ಥೆಗಳು ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜಾಗತಿಕ ಪ್ರಯಾಣ ಕುಸಿತದಿಂದ ಹೆಣಗಾಡುತ್ತಿವೆ. ಹೀಗಾಗಿ ಏರ್‌ಏಷ್ಯಾ ಭಾರತೀಯ ಕಾರ್ಯಾಚರಣೆಗಳಿಗೆ ಧನಸಹಾಯವನ್ನು ಮಾಡಲು ಟಾಟಾ ಸಮೂಹ ಮುಂದಾಗಿದ್ದು, ಏರ್ ಏಷ್ಯಾ ಇಂಡಿಯಾವು ಟಾಟಾ ಸಮೂಹವನ್ನು ಅವಲಂಬಿಸಿದೆ.

"ಟಾಟಾ ಸಮೂಹವು ಏರ್ ಏಷ್ಯಾ ಇಂಡಿಯಾದಲ್ಲಿ ಹೂಡಿಕೆ ಮಾಡಲಿದೆ, ಆದರೂ ಭವಿಷ್ಯದಲ್ಲಿ ವಿಮಾನಯಾನದಲ್ಲಿ ಹೂಡಿಕೆ ಮಾಡಲು ಸೂಕ್ತ ಪಾಲುದಾರನನ್ನು ಹುಡುಕಬಹುದು" ಎಂದು ಗುಂಪಿನ ಕಾರ್ಯತಂತ್ರದ ಬಗ್ಗೆ ತಿಳಿದಿರುವ ಇಬ್ಬರು ಜನರಲ್ಲಿ ಒಬ್ಬರು ಹೇಳಿದರು.

   ಪಬ್ ಜಿ ಆಟಗಾರರಿಗೆ 6 ಕೋಟಿ ಬಹುಮಾನ!! | Oneindia Kannada

   ಟಾಟಾ ಸಮೂಹ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಏರ್‌ಏಷ್ಯಾ ಇಂಡಿಯಾದ ವಕ್ತಾರರು ಇಮೇಲ್ ಮಾಡಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.

   English summary
   The Tata Group will provide as much as $50 million in emergency funding to keep its budget airline joint venture in India with malaysia's Airasia Group.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X