ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಟ್ ಇಂಧನ ಬೆಲೆ ಗಗನಕ್ಕೆ; ವಿಮಾನ ಪಯಣವಾಗಲಿದೆ ಇನ್ನೂ ದುಬಾರಿ

|
Google Oneindia Kannada News

ನವದೆಹಲಿ ಮೇ 16: ಇಂಧನ ಬೆಲೆ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ, ಆಕಾಶದಲ್ಲಿ ಪ್ರಯಾಣಿಕರನ್ನು ಹೊತ್ತು ಹಾರುವ ಹಕ್ಕಿಗಳಾದ ವಿಮಾನಯಾನಗಳ ಸೇವೆ ನೀಡುವ ಕಂಪನಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ನಿಮಗೆ ಬ್ಯಾಡ್ ನ್ಯೂಸ್ ಎನ್ನಬಹುದು. ಜೆಟ್ ಇಂಧನ ಅಥವಾ ಏವಿಯೇಷನ್ ​​ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳು ಮತ್ತೊಮ್ಮೆ ಏರಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ಜೆಟ್ ಇಂಧನ ಬೆಲೆಯನ್ನು 5% ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಅದರ ಬೆಲೆ ಕಿಲೋಲೀಟರ್‌ಗೆ 6188 ರೂಪಾಯಿಗಳಷ್ಟು ಹೆಚ್ಚಾಗಿದೆ. ಈ ಹೆಚ್ಚಳದ ನಂತರ ದೆಹಲಿಯಲ್ಲಿ ಅದರ ಬೆಲೆ ಪ್ರತಿ ಕಿಲೋಲೀಟರ್‌ಗೆ 1.16 ಲಕ್ಷದಿಂದ 1.23 ಲಕ್ಷಕ್ಕೆ ಏರಿದೆ. ಜನವರಿ 1, 2022 ರಿಂದ ಇದು ಸತತ 9 ನೇ ಬಾರಿಗೆ ಹೆಚ್ಚಳವಾಗಿದೆ. ಏರ್-ಟ್ರಾವೆಲ್-ವಿಲ್-ಕಾಸ್ಟ್ಲಿಯರ್-ಜೆಟ್-ಇಂಧನ-ಬೆಲೆಗಳು-ಹೆಚ್ಚಿಸಲಾಗಿದ್ದು, ಹೌದು ಜೆಟ್ ಇಂಧನ ಬೆಲೆ ಶೇ.5 ರಷ್ಟು ಏರಿಕೆ ಕಂಡಿದ್ದು, ಸರ್ಕಾರಿ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜೆಟ್ ಇಂಧನ ಬೆಲೆಯನ್ನು ಹೆಚ್ಚಿಸಿದೆ. ಪ್ರತಿ ಕೆಜಿಗೆ 5% ರಷ್ಟು ಇಂದನ ಬೆಲೆಯ ದರದಲ್ಲಿ ಈ ಹೆಚ್ಚಳ ಮಾಡಲಾಗಿದ್ದು, ನಂತರ ಅದರ ದರವು ಕಿಲೋ ಲೀಟರ್‌ಗೆ 1,16,852 ರೂ.ನಿಂದ 1,23,040 ರೂ.ಗೆ ಏರಿಕೆಯಾಗಿದೆ. ಜೆಟ್ ಇಂಧನದ ಈ ಹೊಸ ದರವು ಮೇ 31, 2022 ರವರೆಗೆ ಅನ್ವಯಿಸುತ್ತದೆ.

ವಿಶ್ವದ ಅತಿದೂರದ ತಡೆರಹಿತ ವಿಮಾನ, ವಿಶೇಷತೆಗಳುವಿಶ್ವದ ಅತಿದೂರದ ತಡೆರಹಿತ ವಿಮಾನ, ವಿಶೇಷತೆಗಳು

ಜೆಟ್ ಇಂಧನ ಅಥವಾ ಏವಿಯೇಷನ್ ​​ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳು ಜನವರಿಯಿಂದ 61.7% ರಷ್ಟು ಹೆಚ್ಚಾಗಿದ್ದು, ಮತ್ತೊಂದೆಡೆ, ನಾವು ರೂಪಾಯಿಯಲ್ಲಿ ಮೂಲಕ ಹೇಳುವುದಾದರೆ, ಜನವರಿ 1ರಿಂದ ಅದರ ಬೆಲೆ ಕಿಲೋಲೀಟರ್‌ಗೆ 46938 ರೂ.ಗಳಷ್ಟು ಹೆಚ್ಚಾಗಿದೆ. ಇದಾದ ಬಳಿಕ ಅದರ ಬೆಲೆ ಕಿಲೋ ಲೀಟರ್‌ಗೆ 72,062 ರೂ.ನಿಂದ 1.23 ಲಕ್ಷ ರೂ.ಗೆ ಏರಿಕೆಯಾಗಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ವಿಚಾರಕ್ಕೆ ಬಂದರೆ 40ನೇ ದಿನವಾದರೂ ಅದರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Air travel to become costlier ; Jet fuel price hiked by 5%

ಜಾಗತಿಕವಾಗಿ ಬೆಲೆ ಏರಿಕೆಯ ಪರಿಣಾಮ

ಭಾರತದಲ್ಲಿ ಜೆಟ್ ಇಂಧನ ಬೆಲೆಯನ್ನು ಸತತ 9ನೇ ಬಾರಿಗೆ ಹೆಚ್ಚಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ತಜ್ಞರು ಊಹಿಸುತ್ತಿರುವುದು ಇದರ ಹಿಂದಿನ ಕಾರಣ. ಭಾರತವು ತನ್ನ ತೈಲ ಅವಶ್ಯಕತೆಗಳನ್ನು ಪೂರೈಸಲು 85% ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ, ಜಾಗತಿಕವಾಗಿ ಅದರ ಏರುತ್ತಿರುವ ಬೆಲೆಗಳು ಭಾರತದ ಮೇಲೂ ನೇರ ಪರಿಣಾಮ ಬೀರುತ್ತಿವೆ.

Air travel to become costlier ; Jet fuel price hiked by 5%

ವಿಮಾನ ಪ್ರಯಾಣ ದುಬಾರಿಯಾಗಲಿದೆ
ಜೆಟ್ ಇಂಧನ ಅಥವಾ ಏವಿಯೇಷನ್ ​​ಟರ್ಬೈನ್ ಇಂಧನ (ಎಟಿಎಫ್) ಬೆಲೆಯಲ್ಲಿ ಹೆಚ್ಚಳದ ನಂತರ, ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಜೆಟ್ ಇಂಧನ ಅಥವಾ ಏವಿಯೇಷನ್ ​​ಟರ್ಬೈನ್ ಇಂಧನ (ATF) ಯಾವುದೇ ಏರ್‌ಲೈನ್‌ನ ನಿರ್ವಹಣಾ ವೆಚ್ಚದ ಸುಮಾರು 40% ನಷ್ಟಿದೆ, ಈ ಕಾರಣದಿಂದಾಗಿ ವಿಮಾನ ಪ್ರಯಾಣವು ಈಗ ದುಬಾರಿಯಾಗಬಹುದು ಎಂದು ವರದಿಯಾಗಿದೆ.

English summary
Jet fuel prices hiked by 5% to new record high in Delhi; Air travel to become costlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X