ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಫ್ ಬೆಲೆ ಮತ್ತೊಮ್ಮೆ ಏರಿಕೆ, ಪ್ರಯಾಣ ದರ ಹೆಚ್ಚಳ ಸಾಧ್ಯತೆ?

|
Google Oneindia Kannada News

ನವದೆಹಲಿ, ಫೆಬ್ರವರಿ 18: ಜೆಟ್ ಇಂಧನ ಅಥವಾ ಎಟಿಎಫ್ ಬೆಲೆ ಮತ್ತೊಮ್ಮೆ ಏರಿಕೆ ಮಾಡಲಾಗಿದೆ. ಫೆ.1ರಿಂದ ಜಾರಿಗೆ ಬರುವಂತೆ ಶೇ 8.5ರಷ್ಟು ಏರಿಕೆಯಾಗಿತ್ತು. ಈ ತಿಂಗಳಲ್ಲಿ ಮತ್ತೊಮ್ಮೆ ಏರಿಕೆಯಾಗಿದ್ದು, ಶೇ 5.2ರಷ್ಟು ಬೆಲೆ ಹೆಚ್ಚಳವಾಗಿದೆ.

ಎಟಿಎಫ್ ಬೆಲೆ ಜನವರಿ ತಿಂಗಳಲ್ಲೇ ಎರಡನೇ ಬಾರಿ ಹೆಚ್ಚಳ ಕಂಡಿತ್ತು. ಎರಡನೇ ಬಾರಿಗೆ ಶೇ 4.2ರಷ್ಟು ಏರಿಕೆಯಾಗಿತ್ತು. ಪೆಟ್ರೋಲ್, ಡೀಸೆಲ್ ಬೆಲೆಗಳು ಬದಲಾವಣೆಯಾಗಿಲ್ಲ. ಐದು ರಾಜ್ಯಗಳ ಚುನಾವಣೆಗೂ ಮುನ್ನ ಇಂಧನ ಬೆಲೆ ವ್ಯತ್ಯಯದ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ, ಆದರೆ, ಎಟಿಎಫ್ ಬೆಲೆ ಹೆಚ್ಚಳ ನಂತರವೂ ವಿಮಾನಯಾನ ಸಂಸ್ಥೆಗಳು ಸದ್ಯಕ್ಕಂತೂ ತಮ್ಮ ದರ ಪಟ್ಟಿ ಪರಿಷ್ಕರಿಸಿಲ್ಲ.

ನಿರೀಕ್ಷೆಯಂತೆ ಜೆಟ್ ಇಂಧನ ಬೆಲೆ ಏರಿಕೆ, ವಿಮಾನ ದರ? ನಿರೀಕ್ಷೆಯಂತೆ ಜೆಟ್ ಇಂಧನ ಬೆಲೆ ಏರಿಕೆ, ವಿಮಾನ ದರ?

ಸರ್ಕಾರಿ ಸ್ವಾಮ್ಯದ ಇಂಧನ ರಿಟೈಲ್ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ATF) ಬೆಲೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕಿಲೋಲೀಟರ್‌ಗೆ 4,481.63 ಅಥವಾ ಶೇಕಡಾ 5.2 ರಿಂದ 90,519.79/ಕಿ.ಮೀಗೆ ಹೆಚ್ಚಿಸಲಾಗಿದೆ.

Air Travel May Get Costelier as Atf Prices Climb to Record High

ಹಿಂದಿನ ಹದಿನೈದು ದಿನಗಳಲ್ಲಿ ಅಂತಾರಾಷ್ಟ್ರೀಯ ಮಾನದಂಡದ ಸರಾಸರಿ ಬೆಲೆಯನ್ನು ಆಧರಿಸಿ, ಜೆಟ್ ಇಂಧನ ಬೆಲೆಗಳನ್ನು ಪ್ರತಿ ತಿಂಗಳ 1 ಮತ್ತು 16 ರಂದು ಪರಿಷ್ಕರಿಸಲಾಗುತ್ತದೆ.

ಜಾಗತಿಕವಾಗಿ ಕಚ್ಚಾತೈಲ ಬೆಲೆ ಸತತ ಏರಿಕೆಯಾಗುತ್ತಿದ್ದರೂ ಭಾರತದಲ್ಲಿಇಂದು ಕೂಡ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ದೇಶದ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ನವೆಂಬರ್​ 4ರಿಂದ ಇಂಧನ ದರ ಸ್ಥಿರವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು ಕಚ್ಚಾತೈಲದ ಬೆಲೆ ಏರಿಳಿತವಾಗುತ್ತಿದೆ. ಕಳೆದ ತಿಂಗಳ ದೀಪಾವಳಿ ಹಬ್ಬದ ವೇಳೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ ಬಳಿಕ ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿತ್ತು. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. ಕಳೆದ ಎರಡು ತಿಂಗಳಲ್ಲಿ ಸತತವಾಗಿ ನಾಲ್ಕು ಬಾರಿ ಎಟಿಎಫ್ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 103 ದಿನಗಳಿಂದ ಹೆಚ್ಚಳವಾಗಿಲ್ಲ.

2008ರ ಆಗಸ್ಟ್ ತಿಂಗಳಲ್ಲಿ ಕಚ್ಚಾತೈಲ ಬೆಲೆ 147 ಡಾಲರ್ ಪ್ರತಿ ಬ್ಯಾರೆಲ್ ಮುಟ್ಟಿದ್ದಾಗ, ಎಟಿಎಫ್ ಬೆಲೆ ಗರಿಷ್ಠ ಏರಿಕೆ ಕಂಡು 71,028.26 ರು ಪ್ರತಿ ಕಿ.ಮೀ ತಲುಪಿತ್ತು. ಈಗ ಈ ದಾಖಲೆಯನ್ನು ಹಿಂದಿಕ್ಕಿದೆ.

ಸಾಂಕ್ರಾಮಿಕ-ಸಂಬಂಧಿತ ನಿರ್ಬಂಧಗಳಿಂದಾಗಿ ಇನ್ನೂ ಪೂರ್ಣ ಕಾರ್ಯಾಚರಣೆಯನ್ನು ಪುನರಾರಂಭಿಸದ ವಿಮಾನಯಾನ ಸಂಸ್ಥೆಗಳ ಈಗಾಗಲೇ ಒತ್ತಡದಲ್ಲಿದ್ದು, ತಮ್ಮ ಆಯವ್ಯಯ ಸರಿದೂಗಿಸಲು ವಿಮಾನಯಾನ ದರ ಹೆಚ್ಚಳ ಮಾಡಬೇಕಾದ ಒತ್ತಡವನ್ನು ಎದುರಿಸುತ್ತಿವೆ.

ಬುಧವಾರದ ಬೆಲೆ ಏರಿಕೆ ಈ ವರ್ಷ ನಾಲ್ಕನೇ ಏರಿಕೆಯಾಗಿದೆ. ಜನವರಿ 1 ರಂದು ಪ್ರತಿ ಕಿಲೋಗೆ 2,039.63 ರು ಅಥವಾ ಶೇ 2.75 ರಿಂದ 76,062.04 ರು ನಿಂದ ಪ್ರತಿ ಕಿಲೋಗೆ 3,232.87 ರು ನಿಂದ (ಶೇ 4.25) 79,294.91 ರು ನಿಂದ 79,294.91 ರುಗೆ ಜನವರಿ 16 ರಂದು ಮುಟ್ಟಿತ್ತು. ಫೆಬ್ರವರಿ 1 ರಂದು ಶೇ 8.5ರಷ್ಟು ಏರಿಕೆ ಕಂಡು 86,038.16 ರು ಪ್ರತಿ ಕಿ.ಮೀ ತಲುಪಿತ್ತು.

ನಾಲ್ಕು ಬಾರಿ ಹೆಚ್ಚಳದೊಂದಿಗೆ, ಎಟಿಎಫ್ ಬೆಲೆಗಳು ಪ್ರತಿ ಕಿಲೋಗೆ ₹ 16,497.38 ರಷ್ಟು ಏರಿಕೆಯಾಗಿದೆ. ರಷ್ಯಾ- ಉಕ್ರೇನ್ ನಡುವಿನ ಯುದ್ಧದ ಪರಿಸ್ಥಿತಿ ಇನ್ನೂ ಸಂಪೂರ್ಣ ತಿಳಿಗೊಂಡಿಲ್ಲ, ಕಚ್ಚಾತೈಲ ಬೆಲೆ ಸರಾಸರಿ 100 ಡಾಲರ್ ಪ್ರತಿ ಬ್ಯಾರೆಲ್ ನಂತೆ ವಹಿವಾಟು ನಡೆಸಿದೆ. ವಿಮಾನಯಾನಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಲವು ದೇಶಗಳು ತೆರವುಗೊಳಿಸುತ್ತಿದ್ದರೂ ಎಟಿಎಫ್ ಬೆಲೆ ಹೆಚ್ಚಳದಿಂದ ವಿಮಾನಯಾನ ದುಬಾರಿಯಾಗುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.

English summary
Air Travel may get costelier as Jet fuel or aviation turbine fuel (ATF) prices rose across the country on Wednesday after rates were hiked by 5.2 per cent in sync with international oil price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X