• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರ್ ಇಂಡಿಯಾ ಮಾರಾಟ, ಉಕ್ಕಿನ ಹಕ್ಕಿ ಸವಾರಿಗೆ ಮುಂದಾದ ಟಾಟಾ ಸಮೂಹ

|

ದೇಶದ ಆರ್ಥಿಕ ಕುಸಿತ ಪರಿಸ್ಥಿತಿ ಜೊತೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪರಿಸ್ಥಿತಿಯೂ ಕಷ್ಟದಲ್ಲಿವೆ. ಇಂಧನ ಬಾಕಿ ಮೊತ್ತ ಪಾವತಿಸದ ಕಾರಣ, ಏರ್ ಇಂಡಿಯಾ ವಿಮಾನಗಳಿಗೆ ತೈಲ ಪೂರೈಕೆ ಸ್ಥಗಿತಗೊಂಡಿದ್ದು ನೆನಪಿರಬಹುದು. ಇದಾದ ಬಳಿಕ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣ ಖಾಸಗಿ ಅಥವಾ 100% ಖಾಸಗಿಗೆ ಒಪ್ಪಿಸುವ ಬಗ್ಗೆ ಸರಕಾರ ನಿರ್ಧಾರ ಮಾಡಲಿದೆ ನಾಗರಿಕ ವಿಮಾನ ಯಾನ ಖಾತೆ ರಾಜ್ಯ ಸಚಿವ ಹರ್ ದೀಪ್ ಸಿಂಗ್ ಪುರಿ ಘೋಷಿಸಿದ್ದರು. ಈಗ ಈ ನಿಟ್ಟಿನಲ್ಲಿ ಪ್ರಗತಿ ಕಂಡು ಬಂದಿದ್ದು, ಏರ್ ಇಂಡಿಯಾವನ್ನು ಖರೀದಿಸಲು ಟಾಟಾ ಸಮೂಹ ಸಂಸ್ಥೆ ಮುಂದಾಗಿದೆ.

ಸುಮಾರು 87ವರ್ಷಗಳ ಬಳಿಕ ಮತ್ತೊಮ್ಮೆ ಏರ್ ಇಂಡಿಯಾದ ಮೇಲೆ ಟಾಟಾ ಸಂಸ್ಥೆ ತನ್ನ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಟಾಟಾ ವಿಸ್ತಾರದ ಭಾಗವಾಗಿ ಏರ್ ಇಂಡಿಯಾ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚಿಸಲಾಗಿದೆ, ಇದಕ್ಕೂ ಟಾಟಾ ಸನ್ಸ್ ಸಮೂಹಕ್ಕೂ ಸಂಬಂಧವಿಲ್ಲ ಎಂದು ಟಾಟಾ ಸನ್ಸ್ ಚೇರ್ಮನ್ ಎನ್ ಚಂದ್ರಶೇಖರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

"ವಿಸ್ತಾರ, ಏರ್ ಏಷ್ಯಾ ಜೊತೆಗೆ ಮತ್ತೊಂದು ವಿಮಾನಯಾನ ಸಂಸ್ಥೆ ನಡೆಸಲು ಇಚ್ಛೆಯಿಲ್ಲ. ಹಾಲಿ ಚಾಲ್ತಿಯಲ್ಲ್ರುವ ಸಂಸ್ಥೆ ಜೊತೆ ವಿಲೀನವಾದರೆ ಯಾವುದೇ ತೊಂದರೆಯಿಲ್ಲ" ಎಂದು ಚಂದ್ರಶೇಖರ್ ಹೇಳಿದ್ದಾರೆ.

ಸಾಲದ ಹೊರೆ ಹೊತ್ತುಕೊಂಡಿರುವ ಏರ್ ಇಂಡಿಯಾ

ಸಾಲದ ಹೊರೆ ಹೊತ್ತುಕೊಂಡಿರುವ ಏರ್ ಇಂಡಿಯಾ

ಸುಮಾರು 50,000 ಕೋಟಿ ರುಪಾಯಿಗೂ ಅಧಿಕ ಸಾಲದ ಹೊರೆ ಹೊತ್ತುಕೊಂಡಿರುವ ಏರ್ ಇಂಡಿಯಾ ಪುನಶ್ಚೇತನಕ್ಕಾಗಿ ಸರ್ಕಾರ ಇನ್ನಿಲ್ಲದ್ದಂತೆ ಯತ್ನಿಸಿ ಸೋತಿದೆ. ತನ್ನ ಪಾಲಿನ ಶೇಕಡಾ 76ರಷ್ಟು ಷೇರು ಮಾರಾಟಕ್ಕಿಟ್ಟರೂ ಖರೀದಿದಾರರು ಇಲ್ಲದ್ದಂತಾಗಿದೆ. ಏರ್ ಇಂಡಿಯಾ ಬದಲಿಗೆ ಜೆಟ್ ಏರ್ ಲೈನ್ಸ್ ಖರೀದಿಯತ್ತ ಟಾಟಾ ಸಮೂಹ ಸಂಸ್ಥೆ ಹೆಚ್ಚಿನ ಆಸಕ್ತಿ ವಹಿಸಿತ್ತು. ಆದರೆ ಈಗ ಟಾಟಾ ಸನ್ಸ್ ಚೇರ್ಮನ್ ಎನ್ ಚಂದ್ರಶೇಖರನ್ ಅವರು ಏರ್ ಇಂಡಿಯಾ ಖರೀದಿ ಪ್ರಕ್ರಿಯೆ ಬಗ್ಗೆ ಸುಳಿವು ನೀಡಿದ್ದಾರೆ.

ಜೆಆರ್ ಡಿ ಟಾಟಾ ಕನಸಿನ ವಿಮಾನ ಸಂಸ್ಥೆ

ಜೆಆರ್ ಡಿ ಟಾಟಾ ಕನಸಿನ ವಿಮಾನ ಸಂಸ್ಥೆ

1932ರಲ್ಲಿ ಜೆಆರ್ ಡಿ ಟಾಟಾ ಅವರು ಟಾಟಾ ಏರ್ ಲೈನ್ಸ್ ಆರಂಭಿಸಿದರು. ಕರಾಚಿಯಿಂದ ಬಾಂಬೆಗೆ ಮೊದಲ ವಿಮಾನಯಾನಕ್ಕೆ ಟಾಟಾ ಪೈಲಟ್ ಆಗಿದ್ದರು. ವಿಮಾನ ಸಂಸ್ಥೆ ಟಾಟಾ ಅವರ ಕನಸಾಗಿತ್ತು. 1948ರಲ್ಲಿ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (ಎಐಟಿಎ) ಸ್ಥಾಪಿಸಿದರು. 1978ರ ತನಕ ಏರ್ ಇಂಡಿಯಾದ ಏಳಿಗೆಗೆ ಶ್ರಮಿಸಿದ್ದರು.

ಸರ್ಕಾರದ ಸುಪರ್ದಿಗೆ ಸೇರಿದ ಏರ್ ಇಂಡಿಯಾ

ಸರ್ಕಾರದ ಸುಪರ್ದಿಗೆ ಸೇರಿದ ಏರ್ ಇಂಡಿಯಾ

1953ರಲ್ಲಿ ಅಂದಿನ ಪ್ರಧಾನಿ ಜವಹಾರ ಲಾಲ್ ನೆಹರೂ ಅವರು ಏರ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಘೋಷಿಸಲು ಮುಂದಾದಾಗ ಟಾಟಾಗೆ ನಿಜಕ್ಕೂ ಆಘಾತವಾಗಿತ್ತು. ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಟಾಟಾ ಅವರನ್ನು ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆಯುವಂತೆ ನೆಹರೂ ಒಪ್ಪಿಸಿದರು. 1977ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟಾಟಾ ಅವರನ್ನು ಸಂಸ್ಥೆ ಚೇರ್ಮನ್ ಸ್ಥಾನದಿಂದ ಕೆಳಗಿಸಿದರು. 1946ರಲ್ಲಿ ಟಾಟಾ ಏರ್ ಲೈನ್ಸ್ ಸಾರ್ವಜನಿಕ ಸಂಸ್ಥೆಯಾಗಿ ನಂತರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಆಗಿದ್ದು ಈಗ ಇತಿಹಾಸ.

ಏರ್ ಇಂಡಿಯಾ ಇಂದಿನ ಪರಿಸ್ಥಿತಿ:

ಏರ್ ಇಂಡಿಯಾ ಇಂದಿನ ಪರಿಸ್ಥಿತಿ:

2017-18ರಲ್ಲಿ 5,799 ಕೋಟಿ ರು ನಷ್ಟ ಅನುಭವಿಸಿದೆ. ಇಂದಿಗೆ ಏರ್ ಇಂಡಿಯಾ ಸಂಸ್ಥೆ ಮೇಲೆ 58,000 ಕೋಟಿ ರು ಸಾಲವಿದೆ. ಇಂಧನ ಬಾಕಿ ಮೊತ್ತ ಪಾವತಿಸದ ಕಾರಣ, ಏರ್ ಇಂಡಿಯಾ ವಿಮಾನಗಳಿಗೆ ತೈಲ ಪೂರೈಕೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಸ್ಥಗಿತಗೊಳಿಸಿತ್ತು. 6 ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ಕಂಡಿರಲಿಲ್ಲ. ಬೇರೆ ದೇಶಿ ವಿಮಾನಯಾನ ಸಂಸ್ಥೆಗೆ ಹೋಲಿಸಿದರೆ, ವಿಮಾನ ರದ್ದು (2.6%), ಸರಿಯಾದ ಸಮಯಕ್ಕೆ ಕಾರ್ಯಕ್ಷಮತೆ (53.5%), ಏರ್ ಲೈನ್ ಲೋಡ್ ಫ್ಯಾಕ್ಟರ್ 80.9% ನಷ್ಟು ಹಿಂದೆ ಉಳಿದಿದೆ.

English summary
Air India sale: Tata Group bid to buy,Tata Sons Chairman N Chandrasekaran has not ruled out the possibility of bidding for national carrier Air India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X