ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಯಾನ ಇತಿಹಾಸದಲ್ಲೇ ದೊಡ್ಡ ಖರೀದಿಗೆ ಮುಂದಾದ ಏರ್ ಇಂಡಿಯಾ!

|
Google Oneindia Kannada News

ನವದೆಹಲಿ, ಜೂನ್ 20: ನಷ್ಟದ ಸುಳಿಯಲ್ಲಿದ್ದ ಏರ್ ಇಂಡಿಯಾ ಈಗ ಟಾಟಾ ಸಮೂಹದ ಪಾಲಾಗಿದೆ. ಏರ್ ಇಂಡಿಯಾವನ್ನು ಮರಳಿ ಪಡೆದ ಬೆನ್ನಲ್ಲೇ ಟಾಟಾ ಸಂಸ್ಥೆ ಉದ್ಯಮವನ್ನು ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ವರದಿಯೊಂದರ ಪ್ರಕಾರ ವಿಮಾನಯಾನ ವಲಯದ ಇತಿಹಾಸದ ಅತೀ ದೊಡ್ಡದಾದ ಖರೀದಿಗೆ ಟಾಟಾ ಸಮೂಹ ಮುಂದಾಗಿದೆ ಎಂದು ತಿಳಿಸಿದೆ.

ಬರೋಬ್ಬರಿ 300 ಸಣ್ಣ ಗಾತ್ರದ ವಿಮಾನಗಳ ಖರೀದಿಗೆ ಏರ್ ಇಂಡಿಯಾ ಮುಂದಾಗಿದ್ದು, ಒಂದು ವೇಳೆ ಇದು ನಡೆದಿದ್ದೇ ಆದಲ್ಲಿ ದೇಶದ ವಿಮಾನಯಾನ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಡೀಲ್‌ ಆಗಿರಲಿದೆ ಎಂದು ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ.

ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ; 185 ಜೀವ ಉಳಿಸಿದ ಪೈಲೆಟ್ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ; 185 ಜೀವ ಉಳಿಸಿದ ಪೈಲೆಟ್

ಏರ್‌ ಇಂಡಿಯಾವು ಏರ್‌ಬಸ್‌ ಕಂಪನಿಯ ಎಸ್‌ಇ ಯ A320 ನಿಯೋ (Airbus SE's A320neo) ಅಥವಾ ಬೋಯಿಂಗ್‌ ಕಂಪನಿಯ 737 ಮ್ಯಾಕ್ಸ್‌ (Boeing 737 Max) ಮಾದರಿಯ ಅಥವಾ ಇವೆರಡದ್ದೂ ಸೇರಿ ಒಟ್ಟು 300 ವಿಮಾನಗಳನ್ನು ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಒಪ್ಪಂದ ಗೌಪ್ಯವಾಗಿರುವುದರಿಂದ ಸಂಸ್ಥೆ ಈ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಮಾಹಿತಿ ಗೌಪ್ಯವಾಗಿಟ್ಟಿರುವ ಸಂಸ್ಥೆ

ಮಾಹಿತಿ ಗೌಪ್ಯವಾಗಿಟ್ಟಿರುವ ಸಂಸ್ಥೆ

ಒಂದು ವೇಳೆ ಬೋಯಿಂಗ್‌ನ 737 ಮ್ಯಾಕ್ಸ್‌-10 ವಿಮಾನಗಳನ್ನು ಖರೀದಿ ಮಾಡಿದರೆ, ಸುಮಾರು 40.5 ಬಿಲಿಯನ್‌ ಡಾಲರ್‌ ವೆಚ್ಚವಾಗಲಿದೆ ಎಂದು, ಹೆಸರು ಹೇಳಲು ಇಚ್ಛಿಸದ ಮಾಹಿತಿ ಇರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಒಪ್ಪಂದ ಇನ್ನೂ ಮೊದಲ ಹಂತದಲ್ಲೇ ಇರುವುದು ಹಾಗೂ ಗೌಪ್ಯ ಸಂಗತಿ ಆಗಿರುವುದಿಂದ ಹೆಚ್ಚಿನ ಬಹಿರಂಗವಾಗಿಲ್ಲ.

ಸದ್ಯ ಸಣ್ಣ ಗಾತ್ರದ ವಿಮಾನಗಳ ತಯಾರಿಕೆಯಲ್ಲಿ ಯೂರೋಪ್ ಮೂಲದ ಏರ್‌ಬಸ್‌ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್‌ ಪೂರ್ವ ಅವಧಿಯಲ್ಲಿ ಏರ್‍‌ಬಸ್‌ ಸಂಸ್ಥೆ ಅತೀ ಹೆಚ್ಚು ಸಣ್ಣ ಪ್ರಮಾಣದ ವಿಮಾನಗಳನ್ನು ಮಾರಾಟ ಮಾಡಿರುವ ಕಂಪನಿ ಎನಿಸಿಕೊಂಡಿತ್ತು. ಹೀಗಾಗಿ ಏರ್‌ ಇಂಡಿಯಾದ ಆರ್ಡರ್ ಏರ್ ಬಸ್ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ವೇಳೆ ಬೋಯಿಂಗ್‌ ಕಂಪನಿಗೆ ಏರ್ ಇಂಡಿಯಾ ಸಂಸ್ಥೆಯ ಆರ್ಡರ್‌ ಸಿಕ್ಕರೂ ಕೂಡ ಬೋಯಿಂಗ್‌ಗೆ ಅದು ದೊಡ್ಡ ಒಪ್ಪಂದವಾಗಿರಲಿದೆ. ಏರ್‌ಬಸ್‌ ಸಂಸ್ಥೆಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಇದು ಪ್ರಮುಖ ಒಪ್ಪಂದವಾಗಲಿದೆ.

 ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾ, ಓಕೆ ಅಂದ CCI ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾ, ಓಕೆ ಅಂದ CCI

ಪೂರೈಕೆ ಮಾಡಲು 10 ವರ್ಷ ಬೇಕು

ಪೂರೈಕೆ ಮಾಡಲು 10 ವರ್ಷ ಬೇಕು

ಒಂದು ವೇಳೆ ಏರ್ ಇಂಡಿಯಾ ಇಷ್ಟು ವಿಮಾನಗಳ ಉತ್ಪಾದನೆಗೆ ಆರ್ಡರ್ ನೀಡಿದರೆ ಇಷ್ಟು ವಿಮಾನಗಳನ್ನು ಪೂರೈಸಲು 10 ವರ್ಷಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಏರ್‌ಬಸ್‌ ಕಂಪನಿ ಪ್ರತಿ ತಿಂಗಳು 50 ಸಣ್ಣ ಗಾತ್ರದ ವಿಮಾನಗಳನ್ನು ತಯಾರಿಸುತ್ತದೆ. 2023ರ ಅಂತ್ಯದ ವೇಳೆಗೆ ಈ ಪ್ರಮಾಣವನ್ನು 65ಕ್ಕೆ ಹಾಗೂ 2025ರ ಅಂತ್ಯಕ್ಕೆ ಇದನ್ನು 75ಕ್ಕೆ ಹೆಚ್ಚಿಸುವ ಗುರಿಯನ್ನು ಏರ್‌ಬಸ್‌ ಹೊಂದಿದೆ.

ಈ ಒಪ್ಪಂದದ ಕುರಿತು ಹೆಚ್ಚಿನ ಮಾಹಿತಿಗಾಗಿ ಏರ್‌ ಇಂಡಿಯಾ ಹಾಗೂ ಬೋಯಿಂಗ್‌ ಕಂಪನಿಯನ್ನು ಮಾಧ್ಯಮಗಳು ಸಂಪರ್ಕಿಸಿದ್ದು, ಮಾಹಿತಿ ನೀಡಲು ಕಂಪನಿಯ ಪ್ರತಿನಿಧಿಗಳು ನಿರಾಕರಿಸಿದ್ದಾರೆ. ಇವೆಲ್ಲಾ ಗೌಪ್ಯ ಮಾಹಿತಿಗಳು ಎಂದು ಏರ್‌ಬಸ್‌ ಪ್ರತಿಕ್ರಿಯೆ ನೀಡಿದೆ.

ಹಲವು ಸಂಸ್ಥೆಗಳಿಂದ ವಿಮಾನಗಳ ಖರೀದಿ

ಹಲವು ಸಂಸ್ಥೆಗಳಿಂದ ವಿಮಾನಗಳ ಖರೀದಿ

ಭಾರತದಲ್ಲಿ ನ್ಯಾರೋಬಾಡಿ ವಿಮಾನಗಳ ಆರ್ಡರ್ ಪಡೆಯುವುದು ಬೋಯಿಂಗ್ ಸಂಸ್ಥೆಗೆ ಕಷ್ಟವಾಗಿದೆ. ಈ ವಿಭಾಗದಲ್ಲಿ ಏರ್‌ಬಸ್ ಪ್ರಾಬಲ್ಯ ಹೊಂದಿದೆ. ಇಂಟರ್‌ಗ್ಲೋಬ್ ಏವಿಯೇಷನ್ ​​ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಇಂಡಿಗೋ ಸಂಸ್ಥೆ, ನ್ಯಾರೋಬಾಡಿ ವಿಮಾನಗಳ ಅತಿದೊಡ್ಡ ಗ್ರಾಹಕರಾಗಿದ್ದಾರೆ.

700 ಕ್ಕೂ ಹೆಚ್ಚು ವಿಮಾನಗಳನ್ನು ಆರ್ಡರ್ ಮಾಡುತ್ತಿದೆ. ವಿಸ್ತಾರಾ, ಗೋ ಏರ್‌ಲೈನ್ಸ್ ಇಂಡಿಯಾ ಲಿಮಿಟೆಡ್ ಮತ್ತು ಏರ್‌ಏಷ್ಯಾ ಇಂಡಿಯಾ ಲಿಮಿಟೆಡ್ ಸೇರಿದಂತೆ ಹಲವು ಸಂಸ್ಥೆಗಳು ಒಂದೇ ಕಂಪನಿಯ ವಿಮಾನಗಳನ್ನು ಖರೀದಿಸುತ್ತಿವೆ.

ಏರ್ ಇಂಡಿಯಾದ ಮಾಲೀಕ ಟಾಟಾ ಗ್ರೂಪ್ ಕೂಡ ಏರ್‌ಬಸ್ A350 ದೀರ್ಘ-ಶ್ರೇಣಿಯ ಜೆಟ್‌ಗಳ ಆರ್ಡರ್‌ಗೆ ಹತ್ತಿರದಲ್ಲಿದೆ, ಅದು ನವದೆಹಲಿಯಿಂದ ಯುಎಸ್ ವೆಸ್ಟ್ ಕೋಸ್ಟ್‌ನವರೆಗೆ ಹಾರಬಲ್ಲದು ಎಂದು ವರದಿಯಾಗಿತ್ತು.

ಏರ್‍‌ ಬಸ್ ಖರೀದಿಸಿರುವ ಟಾಟಾ ಸಂಸ್ಥೆ

ಏರ್‍‌ ಬಸ್ ಖರೀದಿಸಿರುವ ಟಾಟಾ ಸಂಸ್ಥೆ

ಟಾಟಾ 2022ರ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿ ಖಾಸಗೀಕರಣ ಯೋಜನೆಯಡಿ ಏರ್ ಬಸ್ ವಿಮಾನಯಾನವನ್ನು ಖರೀದಿಸಿತು. ಇದು ನಾಲ್ಕು ಏರ್‌ಲೈನ್ ಬ್ರಾಂಡ್‌ಗಳನ್ನು ಒಳಗೊಂಡಂತೆ ತನ್ನ ವಾಯುಯಾನ ವ್ಯವಹಾರಗಳನ್ನು ಏಕೀಕರಿಸುವ ನಿರೀಕ್ಷೆಯಿದೆ. ವಿಶೇಷವಾಗಿ ದೀರ್ಘಾವಧಿಯ ನಿರ್ವಹಣೆಗೆ ಅನುಕೂಲಕರವಾದ ನಿಯಮಗಳೊಂದಿಗೆ ಹೊಸ ವಿಮಾನಗಳ ಆದೇಶವು ವೆಚ್ಚವನ್ನು ಕಡಿತಗೊಳಿಸಲು ಮತ್ತು ಅತ್ಯಂತ ಅಗ್ಗದ ದರದಲ್ಲಿ ಸೇವೆ ನೀಡುವ ಪ್ರತಿಸ್ಪರ್ಧಿಗಳೊಂದಿಗೆ ಉತ್ತಮವಾಗಿ ಸ್ಪರ್ಧಿಸಲು ಸಹಾಯ ಮಾಡುತ್ತದೆ.

English summary
Under Tata Group ownership, Air India plans to add new flights to its fleet, Air India may order Airbus SE’s A320neo family jets or Boeing Co.’s 737 Max models, or a mix of both.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X