ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಕಿ ಮೊತ್ತ 4500 ಕೋಟಿ ರು ಪಾವತಿಸದ ಏರ್ ಇಂಡಿಯಾ

|
Google Oneindia Kannada News

ನವದೆಹಲಿ, ಆಗಸ್ಟ್ 23: ದೇಶದ ಆರ್ಥಿಕ ಕುಸಿತ ಪರಿಸ್ಥಿತಿ ಜೊತೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪರಿಸ್ಥಿತಿಯೂ ಕಷ್ಟದಲ್ಲಿವೆ. ಇಂಧನ ಬಾಕಿ ಮೊತ್ತ ಪಾವತಿಸದ ಕಾರಣ, ಏರ್ ಇಂಡಿಯಾ ವಿಮಾನಗಳಿಗೆ ತೈಲ ಪೂರೈಕೆ ಸ್ಥಗಿತಗೊಂಡಿದೆ.

ದೇಶದ ಆರು ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾಗೆ ಆಯಿಲ್ ಮಾರ್ಕೆಟಿಂಗ್ ಕಂಪನೀಸ್(ಒಎಂಜಿ) ತೈಲ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಕಳೆದ 7 ತಿಂಗಳುಗಳಿಂದ ಬಾಕಿ ಮೊತ್ತ 4,500 ಕೋಟಿ ರು ಪಾವತಿಸಿಲ್ಲದ ಕಾರಣ ಈ ಪರಿಸ್ಥಿತಿ ಉದ್ಭವಿಸಿದೆ.

ಏರ್ ಇಂಡಿಯಾ, ಸ್ಪೈಸ್‌ಜೆಟ್‌ನ ಮೂವರು ಪೈಲಟ್‌ಗಳ ಅಮಾನತುಏರ್ ಇಂಡಿಯಾ, ಸ್ಪೈಸ್‌ಜೆಟ್‌ನ ಮೂವರು ಪೈಲಟ್‌ಗಳ ಅಮಾನತು

"ಒಎಂಜಿಯಿಂದ ಇಂಧನ ಪೂರೈಕೆಯನ್ನು ನಿಲ್ಲಿಸಿದ್ದರೂ ವಿಮಾನ ಹಾರಾಟ ಎಂದಿನಂತೆ ಸಾದಲಿದೆ" ಎಂದು ಏರ್ ಇಂಡಿಯಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Air India owes Rs 4,500 cr in fuel dues; hasnt paid in 200 days

ಕೊಚ್ಚಿನ್, ವಿಶಾಖಪಟ್ಟಣ, ಮೊಹಾಲಿ, ರಾಂಚಿ, ಪುಣೆ ಮತ್ತು ಪಾಟ್ನಾ ವಿಮಾನ ನಿಲ್ದಾಣಗಳಲ್ಲಿ ಇಂಧನ ಪೂರೈಕೆಯನ್ನು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್(ಬಿಪಿಸಿಎಲ್) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್(ಎಚ್ ಪಿಸಿಎಲ್) ನಿಲ್ಲಿಸಿವೆ.

ಏರ್ ಇಂಡಿಯಾದ ವಕ್ತಾರ ಈ ಬಗ್ಗೆ ಪ್ರತಿಕ್ರಿಯಿಸಿ, 90 ದಿನಗಳ ಕ್ರೆಡಿಟ್ ಅವಧಿ ನವೆಂಬರ್ 21ರ ತನಕ ಇದೆ. ಈಕ್ವಿಟಿ ಬೆಂಬಲವಿಲ್ಲದೇ ಏರ್ ಇಂಡಿಯಾವು ದೊಡ್ಡ ಪ್ರಮಾಣದ ಸಾಲದ ಹೊಣೆಗಾರಿಕೆಯನ್ನು ಹೊರಲು ಸಾಧ್ಯವಿಲ್ಲ. ಪ್ರಸಕ್ತ ಹಣಕಾಸು ಸಾಲಿನಲ್ಲಿ ನಮ್ಮ ಹಣಕಾಸು ಪರಿಸ್ಥಿತಿ ಉತ್ತಮವಾಗಿದ್ದು, ಕ್ರೆಡಿಟ್ ಅವಧಿ 200 ದಿನಗಳಿಗೆ ಏರಿಕೆಯಾಗಿದೆ ಎಂದಿದ್ದಾರೆ.

4,500 ಕೋಟಿ ರು ಬಾಕಿ ಮೊತ್ತ ಉಳಿಸಿಕೊಂಡು 60 ಕೋಟಿ ರು ಪಾವತಿಸುವುದಾಗಿ ಹೇಳಿದ್ದು, ಒಎಂಜಿ ಅಧಿಕಾರಿಗಳನ್ನು ಕೆರಳಿಸಿದೆ. ಹೀಗಾಗಿ, ಬಾಕಿ ಮೊತ್ತ ಪಾವತಿಸಿ ಇಲ್ಲದಿದ್ದರೆ, ತೈಲ ಪೂರೈಕೆ ಬಂದ್ ಮಾಡುತ್ತೇವೆ ಎಂದು ಒಎಂಜಿ ವಾರದ ಕೆಳಗೆ ಏರ್ ಇಂಡಿಯಾಕ್ಕೆ ಪತ್ರ ಬರೆದಿತ್ತು.

"2002ರಲ್ಲಿ ವಿಮಾನ ತೈಲ (ಎಟಿಎಫ್)ವನ್ನು ನಿಯಂತ್ರಣ ಮುಕ್ತಗೊಳಿಸಿದ್ದರಿಂದ ಕೇಂದ್ರದಿಂದ ಯಾವುದೇ ಸಬ್ಸಿಡಿ ಇಲ್ಲದೆ ಸಂಸ್ಥೆಯನ್ನು ನಿಭಾಯಿಸಬೇಕಾಗಿದೆ" ಎಂದು ಏರ್ ಇಂಡಿಯಾದ ಸಿಬ್ಬಂದಿ ಹೇಳಿದ್ದಾರೆ. ತೈಲ ಸಮಸ್ಯೆ ಸೇರಿದಂತೆ ಏರ್ ಇಂಡಿಯಾ ಸುಮಾರು 58,000 ಕೋಟಿ ರು ಗಳ ಸಾಲವನ್ನು ಹೊತ್ತುಕೊಂಡಿದೆ.

English summary
Air India owes three state-owned oil firms close to Rs 4,500 crore in unpaid fuel bills with payments being delayed by almost seven months, forcing retailers to snap supplies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X