ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೈಲಟ್‌ಗಳಿಗೆ ಭರ್ಜರಿ ಆಫರ್‌ ಕೊಟ್ಟ ಏರ್‌ ಇಂಡಿಯಾ

|
Google Oneindia Kannada News

ನವದೆಹಲಿ, ಜೂ. 24: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಐದು ವರ್ಷಗಳ ಅವಧಿಗೆ ನಿವೃತ್ತ ಹೊಂದಿದ ಪೈಲಟ್‌ಗಳನ್ನೂ ಮರು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಟಾಟಾ ಆಂತರಿಕ ಸಂವಹನದ ಪ್ರಕಾರ 300 ಏಕ ಆಸನದ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಮಾತುಕತೆಯ ಮಧ್ಯೆ ಏರ್ಲೈನ್ ​​ಕಾರ್ಯಾಚರಣೆಗಳಲ್ಲಿ ಸ್ಥಿರತೆಯನ್ನು ಸ್ಥಾಪಿಸಲು ಮುಂದಾಗಿದೆ. ಹಾಗಾಗಿ ಈ ಕ್ರಮಗಳು ಎಂದು ಹೇಳಲಾಗಿದೆ. ಈ ಪೈಲಟ್‌ಗಳನ್ನು ಕಮಾಂಡರ್‌ಗಳಾಗಿ ಮರು ನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ನೋಡುತ್ತಿದೆ ಎಂದು ಅದು ಹೇಳಿದೆ.

ವಿಮಾನಯಾನ ಇತಿಹಾಸದಲ್ಲೇ ದೊಡ್ಡ ಖರೀದಿಗೆ ಮುಂದಾದ ಏರ್ ಇಂಡಿಯಾ!ವಿಮಾನಯಾನ ಇತಿಹಾಸದಲ್ಲೇ ದೊಡ್ಡ ಖರೀದಿಗೆ ಮುಂದಾದ ಏರ್ ಇಂಡಿಯಾ!

ಸದರಿ ಕ್ರಮಕ್ಕಾಗಿ ವಿಮಾನಯಾನ ಸಂಸ್ಥೆಯು ನಿವೃತ್ತ ಪೈಲಟ್‌ಗಳ ಒಪ್ಪಿಗೆಯನ್ನು ಕೋರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ನಿವೃತ್ತರಾದ ಪೈಲಟ್‌ಗಳಿಗೆ ಮಾಹಿತಿಯನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೂರ್ಣ ಸೇವಾ ವಾಹಕವು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ತನ್ನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಹೊರತಂದಿದೆ. ಅಲ್ಲದೆ ಅದೇ ಸಮಯದಲ್ಲಿ ಹೊಸ ಜನರನ್ನು ಒಮ್ಮೆ ನೇಮಕ ಮಾಡಿಕೊಳ್ಳಲು ಈಗ ಮುಂದಾಗಿದೆ.

ಪೈಲಟ್‌ಗಳು ವಿಮಾನಯಾನ ಸಂಸ್ಥೆಗೆ ಎಂದಿಗೂ ಅತ್ಯಂತ ದುಬಾರಿ ಆಸ್ತಿಯಾಗಿದ್ದಾರೆ. ಅಲ್ಲದೆ ಇವರು ಕ್ಯಾಬಿನ್ ಸಿಬ್ಬಂದಿ ಮತ್ತು ವಿಮಾನ ನಿರ್ವಹಣಾ ಎಂಜಿನಿಯರ್‌ಗಳಂತಹ ಇತರ ಪ್ರಮುಖ ಪಾತ್ರಗಳಿಗೆ ಹೋಲಿಸಿದರೆ ಅತ್ಯಧಿಕ ವೇತನವನ್ನು ಪಡೆಯುತ್ತಾರೆ. ಇದಲ್ಲದೆ, ದೇಶೀಯ ವಿಮಾನಯಾನ ಉದ್ಯಮದಲ್ಲಿ ಸಮರ್ಪಕವಾಗಿ ತರಬೇತಿ ಪಡೆದ ಪೈಲಟ್‌ಗಳ ಕೊರತೆಯು ಯಾವಾಗಲೂ ಸಮಸ್ಯೆಯಾಗಿಯೇ ಇದೆ.

ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾ, ಓಕೆ ಅಂದ CCI ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾ, ಓಕೆ ಅಂದ CCI

ಡೆಪ್ಯುಟಿ ಜನರಲ್ ಮ್ಯಾನೇಜರ್ ಮೇಲ್‌

ಡೆಪ್ಯುಟಿ ಜನರಲ್ ಮ್ಯಾನೇಜರ್ ಮೇಲ್‌

ಏರ್ ಇಂಡಿಯಾದಲ್ಲಿ ಕಮಾಂಡರ್ ಆಗಿ 5 ವರ್ಷಗಳ ಅವಧಿಗೆ ಅಥವಾ ನಿಮಗೆ 65 ವರ್ಷ ವಯಸ್ಸಾಗುವವರೆಗೆ ನಿವೃತ್ತಿಯ ನಂತರದ ಒಪ್ಪಂದಕ್ಕೆ ನಿಮ್ಮನ್ನು ಪರಿಗಣಿಸಲಾಗುತ್ತಿದೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ ಎಂದು ಏರ್ ಇಂಡಿಯಾ ಸಿಬ್ಬಂದಿ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ವಿಕಾಸ್ ಗುಪ್ತಾ ಸಂಸ್ಥೆಯ ಆಂತರಿಕ ಮೇಲ್‌ನಲ್ಲಿ ತಿಳಿಸಿದ್ದಾರೆ.

ಜೂನ್ 23ರೊಳಗೆ ಮೇಲ್ ಮಾಡಲು ಸೂಚನೆ

ಜೂನ್ 23ರೊಳಗೆ ಮೇಲ್ ಮಾಡಲು ಸೂಚನೆ

ನಿವೃತ್ತಿಯ ನಂತರದ ಒಪ್ಪಂದದ ಅವಧಿಯಲ್ಲಿ ಅಂತಹ ನೇಮಕಾತಿಗಳಿಗೆ ಏರ್ ಇಂಡಿಯಾದ ನೀತಿಯ ಪ್ರಕಾರ ನಿಮಗೆ ಸಂಭಾವನೆ ಮತ್ತು ಇತರೆ ಭತ್ಯೆಗಳನ್ನು ಪಾವತಿಸಲಾಗುವುದು ಎಂದು ವಿಕಾಸ್‌ ಗುಪ್ತಾ ತಿಳಿಸಿದ್ದಾರೆ. ಆಸಕ್ತ ಪೈಲಟ್‌ಗಳು ತಮ್ಮ ವಿವರಗಳನ್ನು ಲಿಖಿತ ಒಪ್ಪಿಗೆಯೊಂದಿಗೆ ಜೂನ್ 23ರೊಳಗೆ ಮೇಲ್ ಮೂಲಕ ಸಲ್ಲಿಸಲು ತಿಳಿಸಲಾಗಿದೆ. ಈ ಸಂಬಂಧ ಏರ್ ಇಂಡಿಯಾ ವಕ್ತಾರರಿಗೆ ಕಳುಹಿಸಲಾದ ಪ್ರಶ್ನೆಗೆ ಉತ್ತರ ಇನ್ನೂ ಬಂದಿಲ್ಲ.

ಎಲ್ಲಾ ಉದ್ಯೋಗಿಗಳ ನಿವೃತ್ತಿ 58 ವರ್ಷ

ಎಲ್ಲಾ ಉದ್ಯೋಗಿಗಳ ನಿವೃತ್ತಿ 58 ವರ್ಷ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಏರ್‌ಲೈನ್ಸ್ ಬಿಡ್ ಅನ್ನು ಯಶಸ್ವಿಯಾಗಿ ಗೆದ್ದ ನಂತರ ಟಾಟಾ ಗ್ರೂಪ್ ಈ ವರ್ಷದ ಜನವರಿ 27 ರಂದು ಏರ್ ಇಂಡಿಯಾದ ನಿಯಂತ್ರಣವನ್ನು ತೆಗೆದುಕೊಂಡಿತು. ಏರ್ ಇಂಡಿಯಾದಲ್ಲಿ ಪೈಲಟ್‌ಗಳ ನಿವೃತ್ತಿ ವಯಸ್ಸು ಏರ್‌ಲೈನ್‌ನ ಇತರ ಎಲ್ಲಾ ಉದ್ಯೋಗಿಗಳಂತೆ 58 ಆಗಿದೆ. ಸಾಂಕ್ರಾಮಿಕ ರೋಗದ ಮೊದಲು, ಏರ್ ಇಂಡಿಯಾ ತನ್ನ ನಿವೃತ್ತ ಪೈಲಟ್‌ಗಳನ್ನು ಗುತ್ತಿಗೆಯ ಮೇಲೆ ಮರುನೇಮಕ ಮಾಡಿಕೊಳ್ಳುತ್ತಿತ್ತು.

ಕೊರೊನಾ ಪಿಡುಗಿನ ಹೊಡೆತ

ಕೊರೊನಾ ಪಿಡುಗಿನ ಹೊಡೆತ

ಆದರೆ ಮಾರ್ಚ್ 2020ರ ಅಂತ್ಯದ ನಂತರ ನೇಮಕಾತಿಯನ್ನು ನಿಲ್ಲಿಸಲಾಯಿತು. ಸಾಂಕ್ರಾಮಿಕ ಪಿಡುಗು ಕೊರೊನಾದ ಪರಿಣಾಮವನ್ನು ಭಾಗಶಃ ಸರಿದೂಗಿಸಲು ಅಂತಹ ಪೈಲಟ್‌ಗಳ ಒಪ್ಪಂದಗಳನ್ನು ಸಹ ಕೊನೆಗೊಳಿಸಲಾಯಿತು. ಆದಾಗ್ಯೂ, ಇತರ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲಿ ಪೈಲಟ್‌ಗಳು 65 ವರ್ಷ ವಯಸ್ಸನ್ನು ತಲುಪುವವರೆಗೆ ಉದ್ಯೋಗದಲ್ಲಿ ಇರುತ್ತಾರೆ.

English summary
Air India which is owned by Tata Group, is also looking to recruit pilots who have retired for a period of five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X