ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ವಿಮಾನ ಸಂಸ್ಥೆ ಹರಾಜು: ಕೊಳ್ಳುವವರೇ ಇಲ್ಲ!

|
Google Oneindia Kannada News

ನವದೆಹಲಿ, ಮೇ 31: ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಹರಾಜು ಹಾಕಲು ಸರ್ಕಾರ ಮುಂದಾಗಿದೆ. ಆದರೆ, ಅದನ್ನು ಬಿಡ್ ಮಾಡಲು ಯಾರೂ ಆಸಕ್ತಿ ತೋರಿಸಿಲ್ಲ.

ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಡ್ ಮಾಡಲು ಯಾರೂ ಸಹ ಮುಂದೆ ಬಂದಿಲ್ಲ ಎಂಬುದನ್ನು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ತಿಳಿಸಿದೆ.

ರಿಯಾದ್ ಹೋಟೆಲ್‌ನಲ್ಲಿ ಏರ್ ಇಂಡಿಯಾ ಪೈಲಟ್ ಶವ ಪತ್ತೆರಿಯಾದ್ ಹೋಟೆಲ್‌ನಲ್ಲಿ ಏರ್ ಇಂಡಿಯಾ ಪೈಲಟ್ ಶವ ಪತ್ತೆ

ಏರ್ ಇಂಡಿಯಾ ಖರೀದಿಯ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಡ್ಡರ್‌ಗಳು ತಮ್ಮ ಆಸಕ್ತಿಯನ್ನು ತಿಳಿಸಲು (ಇಒಎಲ್) ಗುರುವಾರ ಸಂಜೆ 5 ಗಂಟೆಯವರೆಗೆ ಸಮಯ ನೀಡಲಾಗಿತ್ತು. ಆದರೆ, ಯಾವ ಬಿಡ್ಡರ್‌ಗಳೂ ಇಒಎಲ್ ಸಲ್ಲಿಕೆ ಮಾಡಲಿಲ್ಲ.

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯನ್ನು ಖರೀದಿ ಪ್ರಕ್ರಿಯೆಗೆ ಮೇ 30ರ ವರೆಗೂ ಯಾವುದೇ ಬಿಡ್ ಬಂದಿಲ್ಲ ಎಂದು ವಿಮಾನಯಾನ ಕಾರ್ಯದರ್ಶಿ ಆರ್.ಎನ್. ಚೌಬೆ ತಿಳಿಸಿದ್ದಾರೆ.

air india

ಏರ್‌ ಇಂಡಿಯಾಕ್ಕೆ ಇದುವರೆಗೂ ಯಾವುದೇ ಬಿಡ್ ಬಂದಿಲ್ಲ. ಇಒಎಲ್ ಸಲ್ಲಿಸಲು ನೀಡಿದ್ದ ಗಡುವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಡ್‌ಗಳ ಸಲ್ಲಿಕೆಗೆ ನೀಡಲಾಗಿದ್ದ ಗಡುವನ್ನು ಈಗಾಗಲೇ ಮೇ 14ರಿಂದ 31ರವರೆಗೆ ವಿಸ್ತರಣೆ ಮಾಡಲಾಗಿತ್ತು.

ಜನಸಾಮಾನ್ಯರಿಗೂ ವಿಮಾನಯಾನದ ಅನುಕೂಲ ಕಲ್ಪಿಸಿದ ಮೋದಿ ಸರ್ಕಾರಜನಸಾಮಾನ್ಯರಿಗೂ ವಿಮಾನಯಾನದ ಅನುಕೂಲ ಕಲ್ಪಿಸಿದ ಮೋದಿ ಸರ್ಕಾರ

ಏರ್ ಇಂಡಿಯಾದಿಂದ ಸಾವಿರಾರು ಕೋಟಿ ನಷ್ಟವಾಗುತ್ತಿದ್ದು, ಸಂಸ್ಥೆ ಸಾಲದಲ್ಲಿದೆ. ಸರ್ಕಾರವು ಇದರ ಮೇಲಿನ ಶೇ 76ರಷ್ಟು ಬಂಡವಾಳವನ್ನು ಹಿಂದಕ್ಕೆ ಪಡೆದುಕೊಳ್ಳಲು ಉದ್ದೇಶಿಸಿದೆ.

ಸರ್ಕಾರವು ಷರತ್ತುಗಳನ್ನು ಬಹಿರಂಗಪಡಿಸಿದ ಬಳಿಕ ಯಾವ ಕಂಪೆನಿಯೂ ಬಿಡ್ ಸಲ್ಲಿಸಲು ಆಸಕ್ತಿ ತೋರಿಸಿಲ್ಲ. ಜೆಟ್ ಏರ್‌ವೇಸ್ ಮತ್ತು ಇಂಡಿಗೋ ಸಂಸ್ಥೆಗಳು ಈಗಾಗಲೇ ಕಣದಿಂದ ಹಿಂದಕ್ಕೆ ಸರಿದಿವೆ.

ಬಿಡ್ಡಿಂಗ್ ಮೊತ್ತದ ಆಧಾರದ ಮೇಲೆ ಸಂಸ್ಥೆಯನ್ನು ಮಾರಾಟ ಮಾಡುವುದೋ ಅಥವಾ ಬಿಡುವುದೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ಚೌಬೆ ಅವರು ತಿಳಿಸಿದ್ದರು.

ಎರಡು ಹಂತಗಳಲ್ಲಿ ಬಿಡ್ಡಿಂಗ್ ನಡೆಯಲಿದೆ. ಮೊದಲು ಬಿಡ್ಡಿಂಗ್‌ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಬೇಕು. ಅದರಲ್ಲಿ ಯಶಸ್ವಿಯಾದವರಿಗೆ ಆರ್ಥಿಕ ಬಿಡ್ ಸಲ್ಲಿಸಲು ಹೇಳಲಾಗುತ್ತದೆ. ಮಾರಾಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕುತೂಹಲವಿದೆ. ಆದರೆ, ನಮಗೆ ಅಗತ್ಯವಿರುವಷ್ಟು ಹಣ ಬಾರದಿದ್ದರೆ, ಮಾರಾಟವನ್ನು ನಡೆಸಬೇಕೇ ಅಥವಾ ಬೇಡವೇ ಎಂಬುದನ್ನು ಬಳಿಕ ನಿರ್ಧರಿಸುತ್ತೇವೆ ಎಂದು ಹೇಳಿದ್ದರು.

English summary
The Ministry of Civil Aviation on Thursday said that Air India has failed to attract any bids during the process of auctioning. The Centre on May 30 had not received any bid for its stake in state-run carrier Air India, aviation secretary R.N. Chaubey said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X