ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್, ಟಾಟಾ ಪಾಲಾದ ಮಹಾರಾಜ

|
Google Oneindia Kannada News

ನವದೆಹಲಿ, ಅಕ್ಟೋಬರ್ 08: ಸಾಲದ ಭಾರಕ್ಕೆ ಕುಸಿಯುತ್ತಿರುವ ಏರ್ ಇಂಡಿಯಾದ ಉಕ್ಕಿನ ಹಕ್ಕಿಯ ಹೊಣೆ ಕೊನೆಗೂ ಟಾಟಾ ಸನ್ಸ್ ಪಾಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ DIPAM, ತುಹಿನ್ ಕಾಂತ ಪಾಂಡೆ ಅವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿ, ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ,

ಏರ್ ಇಂಡಿಯಾ ಕೊಳ್ಳಲು ಬಿಡ್ ಸಲ್ಲಿಸಿದ್ದ ಸಂಸ್ಥೆಗಳ ಪೈಕಿ ಟಾಟಾ ಸನ್ಸ್ , ಅಜಯ್ ಸಿಂಗ್ ಸಂಸ್ಥೆ ,ಸ್ಪೈಸ್ ಜೆಟ್ ಪ್ರಮುಖ ಸಂಸ್ಥೆಗಳಾಗಿದ್ದವು. ಈ ಪೈಕಿ ಏರ್ ಇಂಡಿಯಾವನ್ನು ಖರೀದಿಸಲು ಸಲ್ಲಿಸಿದ್ದ ಫೈನಲ್ ಬಿಡ್ ಟಾಟಾ ಸಮೂಹ ಸಂಸ್ಥೆ ಪಾಲಾಗಿದೆ ಎಂಬ ಸುದ್ದಿ ಇದೀಗ ಅಧಿಕೃತವಾಗಿದೆ.

1953ರ ಬಳಿಕ ಮತ್ತೊಮ್ಮೆ ಏರ್ ಇಂಡಿಯಾದ ಮೇಲೆ ಟಾಟಾ ಸಂಸ್ಥೆ ತನ್ನ ಹಿಡಿತ ಸಾಧಿಸುತ್ತಿದೆ. ಟಾಟಾ ವಿಸ್ತಾರದ ಭಾಗವಾಗಿ ಏರ್ ಇಂಡಿಯಾ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗ ಸಾಲದ ಹೊರೆಯ 15, 300 ಕೋಟಿ ರು ಬಿಡ್ಡರ್ ಮೂಲಕ ಬಂದರೆ, ಮಿಕ್ಕ 46, 262ಕೋಟಿ ರು ಸರ್ಕಾರದ ಮೇಲೆ ಹೊರೆಯಾಗಿ ಉಳಿಯಲಿದೆ. ಎಂಟರ್ ಪ್ರೈಸಸ್ ಮೌಲ್ಯದ ಮೇಲೆ ಕನಿಷ್ಠ 15 ಹಾಗೂ ಗರಿಷ್ಠ 85% ರಷ್ಟು ಬಿಡ್ ಸಲ್ಲಿಕೆ ಮಾಡಲು ಬಿಡ್ಡರ್‌ಗಳಿಗೆ ಅವಕಾಶವಿತ್ತು.

ಬಿಡ್ ಮೌಲ್ಯ ಎಷ್ಟು?

ಬಿಡ್ ಮೌಲ್ಯ ಎಷ್ಟು?

ಮೌಲ್ಯ ಎಷ್ಟು?: ಎಂಟರ್ ಪ್ರೈಸರ್ ಮೌಲ್ಯ 18,000 ಕೋಟಿ ರು ಎಂದು ಟಾಟಾ ಸನ್ಸ್ ಸಮೂಹದ ತಾಲೇಸ್ ಪ್ರೈ ಲಿಮಿಟೆಟ್ ಬಿಡ್ ಮಾಡಿದ್ದು, 15,300 ಸಾಲದ ಹೊರೆಯೂ ಇದರಲ್ಲಿ ಸೇರಿದೆ. 2,700 ಕೋಟಿ ರು ನಗದು ವ್ಯವಹಾರ ಸೇರಿದೆ ಎಂದು ಪಾಂಡೆ ವಿವರಿಸಿದ್ದಾರೆ.

ಸುಮಾರು 61,562 ಕೋಟಿ ರುಪಾಯಿಗೂ ಅಧಿಕ ಸಾಲದ ಹೊರೆ(ಆಗಸ್ಟ್ 2021ರಂತೆ) ಹೊತ್ತುಕೊಂಡಿರುವ ಏರ್ ಇಂಡಿಯಾ ಪುನಶ್ಚೇತನಕ್ಕಾಗಿ ಸರ್ಕಾರ ಇನ್ನಿಲ್ಲದ್ದಂತೆ ಯತ್ನಿಸಿ ಸೋತಿತ್ತು. ತನ್ನ ಪಾಲಿನ ಶೇಕಡಾ 76ರಷ್ಟು ಷೇರು ಮಾರಾಟಕ್ಕಿಟ್ಟರೂ ಖರೀದಿದಾರರು ಇಲ್ಲದ್ದಂತಾಗಿತ್ತು. ಏರ್ ಇಂಡಿಯಾ ಬದಲಿಗೆ ಜೆಟ್ ಏರ್ ಲೈನ್ಸ್ ಖರೀದಿಯತ್ತ ಟಾಟಾ ಸಮೂಹ ಸಂಸ್ಥೆ ಹೆಚ್ಚಿನ ಆಸಕ್ತಿ ವಹಿಸಿತ್ತು. ಆದರೆ ಈಗ ಟಾಟಾ ಸನ್ಸ್ ಚೇರ್ಮನ್ ಎನ್ ಚಂದ್ರಶೇಖರನ್ ಅವರು ಏರ್ ಇಂಡಿಯಾ ಖರೀದಿ ಪ್ರಕ್ರಿಯೆ ಬಗ್ಗೆ ಸುಳಿವು ನೀಡಿದ್ದರು.

ಜೆಆರ್ ಡಿ ಟಾಟಾ ಅವರ ಟಾಟಾ ಏರ್ ಲೈನ್ಸ್

ಜೆಆರ್ ಡಿ ಟಾಟಾ ಅವರ ಟಾಟಾ ಏರ್ ಲೈನ್ಸ್

1932ರಲ್ಲಿ ಜೆಆರ್ ಡಿ ಟಾಟಾ ಅವರು ಟಾಟಾ ಏರ್ ಲೈನ್ಸ್ ಆರಂಭಿಸಿದರು. ಕರಾಚಿಯಿಂದ ಬಾಂಬೆಗೆ ಮೊದಲ ವಿಮಾನಯಾನಕ್ಕೆ ಟಾಟಾ ಪೈಲಟ್ ಆಗಿದ್ದರು. ವಿಮಾನ ಸಂಸ್ಥೆ ಟಾಟಾ ಅವರ ಕನಸಾಗಿತ್ತು. 1948ರಲ್ಲಿ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (ಎಐಟಿಎ) ಸ್ಥಾಪಿಸಿದರು. 1978ರ ತನಕ ಏರ್ ಇಂಡಿಯಾದ ಏಳಿಗೆಗೆ ಶ್ರಮಿಸಿದ್ದರು. ಆದರೆ, ಟಾಟಾ ಕಟ್ಟಿ ಬೆಳೆಸಿದ ಸಂಸ್ಥೆ ರಾಜಕೀಯ ತಂತ್ರಕ್ಕೆ ಕೈ ತಪ್ಪಿತು. ದೇಶಕ್ಕಾಗಿ ಟಾಟಾ ಅವರು ತ್ಯಾಗಕ್ಕೆ ಸಿದ್ಧವಾಗಬೇಕಾಯಿತು.

ಏರ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆ ಮಾಡಿದ ನೆಹರೂ

ಏರ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆ ಮಾಡಿದ ನೆಹರೂ

1953ರಲ್ಲಿ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಏರ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಘೋಷಿಸಲು ಮುಂದಾದಾಗ ಟಾಟಾಗೆ ನಿಜಕ್ಕೂ ಆಘಾತವಾಗಿತ್ತು. ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಟಾಟಾ ಅವರನ್ನು ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆಯುವಂತೆ ನೆಹರೂ ಒಪ್ಪಿಸಿದರು. 1977ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟಾಟಾ ಅವರನ್ನು ಸಂಸ್ಥೆ ಚೇರ್ಮನ್ ಸ್ಥಾನದಿಂದ ಕೆಳಗಿಸಿದರು. 1946ರಲ್ಲಿ ಟಾಟಾ ಏರ್ ಲೈನ್ಸ್ ಸಾರ್ವಜನಿಕ ಸಂಸ್ಥೆಯಾಗಿ ನಂತರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಆಗಿದ್ದು ಈಗ ಇತಿಹಾಸ.

61,562ಕೊಟಿರು ಸಾಲದ ಹೊರೆ

61,562ಕೊಟಿರು ಸಾಲದ ಹೊರೆ

2017-18ರಲ್ಲಿ 5,799 ಕೋಟಿ ರು ನಷ್ಟ ಅನುಭವಿಸಿದೆ. ಇಂದಿಗೆ ಏರ್ ಇಂಡಿಯಾ ಸಂಸ್ಥೆ ಮೇಲೆ 58,000 ಕೋಟಿ ರು ಸಾಲವಿತ್ತು. 2021ರ ಆಗಸ್ಟ್ 31ಕ್ಕೆ ಈ ಪ್ರಮಾಣ 61,562ಕೊಟಿರು ಗೇರಿದೆ. ಮಾರುಕಟ್ಟೆ ಮೌಲ್ಯ ಲೆಕ್ಕ ಹಾಕುವಾಗ ಕಡಿಮೆ ಹಾಗೂ ದೀರ್ಘಾವಧಿ ಸಾಲದ ಮೊತ್ತ ಕೂಡಾ ಸೇರಿಸಿಕೊಳ್ಳಬೇಕಾಗುತ್ತದೆ. ಇಂಧನ ಬಾಕಿ ಮೊತ್ತ ಪಾವತಿಸದ ಕಾರಣ, ಏರ್ ಇಂಡಿಯಾ ವಿಮಾನಗಳಿಗೆ ತೈಲ ಪೂರೈಕೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಸ್ಥಗಿತಗೊಳಿಸಿತ್ತು. 6 ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ಕಂಡಿರಲಿಲ್ಲ. ಬೇರೆ ದೇಶಿ ವಿಮಾನಯಾನ ಸಂಸ್ಥೆಗೆ ಹೋಲಿಸಿದರೆ, ವಿಮಾನ ರದ್ದು (2.6%), ಸರಿಯಾದ ಸಮಯಕ್ಕೆ ಕಾರ್ಯಕ್ಷಮತೆ (53.5%), ಏರ್ ಲೈನ್ ಲೋಡ್ ಫ್ಯಾಕ್ಟರ್ 80.9% ನಷ್ಟು ಹಿಂದೆ ಉಳಿದಿದೆ.

English summary
Tata Sons has won the final bid for acquiring national carrier Air India; Govt Announced officially today. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X