• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್ ವೇಳೆಗೆ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ: ನಿರ್ಮಲಾ ಸೀತಾರಾಮನ್

|

ನವದೆಹಲಿ, ನವೆಂಬರ್ 18: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನ ಸಂಸ್ಥೆ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕಂಪೆನಿಗಳನ್ನು 2020ರ ಮಾರ್ಚ್ ವೇಳೆಗೆ ಮಾರಾಟ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಷ್ಟದಲ್ಲಿರುವ ಈ ಎರಡೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಈ ಹಣಕಾಸು ವರ್ಷದ ಅಂತ್ಯಗೊಳಗೆ ಮಾರಾಟಮಾಡಲು ಸರ್ಕಾರ ಗಮನ ನೀಡಿದೆ ಎಂದು ಹೇಳಿದರು.

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಭಾರೀ ಗಿಫ್ಟ್

ಎರಡೂ ಸಂಸ್ಥೆಗಳನ್ನು ಈ ವರ್ಷದಲ್ಲಿ ಮಾರಾಟ ಮಾಡುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದ್ದೇವೆ. ಮೂಲ ವಾಸ್ತವಗಳು ಇಲ್ಲಿ ಪ್ರಮುಖ ಕಾರ್ಯನಿರ್ವಹಿಸಲಿವೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 1 ಲಕ್ಷ ಕೋಟಿ ರೂ ಸಂಗ್ರಹಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಉದ್ದೇಶದಲ್ಲಿ ಈ ಮಾರಾಟ ಮಹತ್ವದ ಪಾತ್ರ ವಹಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಹೇಳಿಕೆಯು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರ್ಕಾರವು ತನ್ನ ತಪ್ಪು ಆರ್ಥಿಕ ನೀತಿಗಳಿಂದ ಮಾಡಿದ ನಷ್ಟವನ್ನು ಸರಿದೂಗಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಪಕ್ಷಗಳು ಟೀಕಿಸಿವೆ.

ಹೂಡಿಕೆದಾರರಲ್ಲಿ ಆಸಕ್ತಿ

ಹೂಡಿಕೆದಾರರಲ್ಲಿ ಆಸಕ್ತಿ

ಏರ್ ಇಂಡಿಯಾ ಖರೀದಿಗೆ ಹೂಡಿಕೆದಾರರಲ್ಲಿ ಅಪಾರ ಆಸಕ್ತಿ ಇದೆ ಎಂಬುದು ಅಂತಾರಾಷ್ಟ್ರೀಯ ರೋಡ್‌ಶೋಗಳಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ಒಂದು ವರ್ಷದ ಹಿಂದೆ ಏರ್‌ಲೈನ್ ಸಂಸ್ಥೆಯ ಮಾರಾಟಕ್ಕೆ ಹೂಡಿಕೆದಾರರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗದ ಕಾರಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.

ಆರ್ಥಿಕ ಕುಸಿತದಿಂದ ಸುಧಾರಣೆ

ಆರ್ಥಿಕ ಕುಸಿತದಿಂದ ಸುಧಾರಣೆ

ತೆರಿಗೆ ಸಂಗ್ರಹದ ಒತ್ತಡದ ಸ್ಥಿತಿಯಲ್ಲಿ ಬಂಡವಾಳ ಹಿಂತೆಗೆತ ಕ್ರಮದಿಂದ ಸರ್ಕಾರದ ಆದಾಯ ಹೆಚ್ಚುವ ನಿರೀಕ್ಷೆಯಿದೆ. ಆರ್ಥಿಕ ಕುಸಿತವನ್ನು ತಡೆಯಲು ಸರ್ಕಾರ ಸಕಾಲದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಹಲವು ವಲಯಗಳು ಈ ಒತ್ತಡದಿಂದ ಹೊರಬರುತ್ತಿವೆ ಎಂದು ಹೇಳಿದರು.

ಜನರು ಮದುವೆಯಾಗ್ತಿದ್ದಾರೆ.. ಆರ್ಥಿಕತೆ ಸುಧಾರಿಸಿದೆ: ಬಾನಗಡಿ ಮಾಡಿದ ಅಂಗಡಿ ಹೇಳಿಕೆ!

ಜಿಎಸ್‌ಟಿ ಸಂಗ್ರಹ ಸುಧಾರಣೆ

ಜಿಎಸ್‌ಟಿ ಸಂಗ್ರಹ ಸುಧಾರಣೆ

ಕುಂಠಿತವಾಗಿರುವ ಆರ್ಥಿಕತೆಗೆ ಉತ್ತೇಜನ ನೀಡಲು ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಕೆಲವು ವಲಯಗಳಲ್ಲಿನ ಸುಧಾರಣೆಯಿಂದಾಗಿ ಮಾರಾಟದಲ್ಲಿ ಹೆಚ್ಚಳವಾಗಿ ಸರಕು ಮತ್ತು ಸೇವೆಗಳ ತೆರಿಗೆ ಸಂಗ್ರಹವು ಮತ್ತೆ ಸುಧಾರಣೆಯ ಹಾದಿಗೆ ಮರಳುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಸಾಲಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ

ಸಾಲಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ

ಗ್ರಾಹಕ ಭಾವನೆಗಳು ಮತ್ತೆ ಪುಟಿದೆದ್ದಿರುವ ಅನೇಕ ಲಕ್ಷಣಗಳು ಕಾಣಿಸುತ್ತಿವೆ. ಹಬ್ಬದ ಅವಧಿಗಳಲ್ಲಿ ಬ್ಯಾಂಕುಗಳು ನಡೆಸಿದ ಸಾಲಮೇಳದಂತಹ ಕಾರ್ಯಕ್ರಮಗಳಿಂದ ಸುಮಾರು 1.8 ಲಕ್ಷ ಕೋಟಿ ಮೊತ್ತದ ಸಾಲಗಳನ್ನು ಮಂಜೂರು ಮಾಡಿರುವುದರಿಂದ ಇದು ಸಾಧ್ಯವಾಗಿದೆ. 'ಗ್ರಾಹಕರ ಆತ್ಮವಿಶ್ವಾಸ ಮರಳಿ ಬರುತ್ತಿಲ್ಲ ಎಂದಾದರೆ ಬ್ಯಾಂಕುಗಳು ಆರಂಭಿಸಿರುವ ಎರಡು ಕಾರ್ಯಕ್ರಮಗಳಲ್ಲಿ ಜನರು ಇಡೀ ದೇಶದಾದ್ಯಂತ ಅಷ್ಟು ಪ್ರಮಾಣದ ಸಾಲಗಳನ್ನು ಹೇಗೆ ಪಡೆದುಕೊಳ್ಳುತ್ತಾರೆ?' ಎಂದು ನಿರ್ಮಲಾ ಕೇಳಿದರು.

ವೈಯಕ್ತಿಕ ಆದಾಯ ತೆರಿಗೆ ದರದಲ್ಲಿ ಕಡಿತ, ವದಂತಿ ಬಗ್ಗೆ ಸರ್ಕಾರ ಹೇಳಿದ್ದು...

English summary
Finance Minister Nirmala Sitharaman said, state owned companies Air India and Bharat Petroleum Corporation are expected to be sold by the governmnet by March 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X