ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಆರಂಭವಾಗಲಿದೆ '1 ರುಪಾಯಿ' ಏರ್ ಡೆಕ್ಕನ್ ವಿಮಾನ ಯಾನ

|
Google Oneindia Kannada News

ನವದೆಹಲಿ, ಡಿಸೆಂಬರ್ 13: ರಸಪ್ರಶ್ನೆ ಕಾರ್ಯಕ್ರಮ ಮಾಡಿ, 1 ರುಪಾಯಿ ವಿಮಾನ ಯಾನ ಅಂದರೆ ಏನು ನೆನಪಾಗುತ್ತದೆ ಅಂತ ಪ್ರಶ್ನೆ ಕೇಳಿದರೆ, ಏರ್ ಡೆಕ್ಕನ್ ಎಂಬ ಉತ್ತರ ಬರಬಹುದಲ್ಲವಾ! ಭಾರತೀಯರಿಗೆ ಅತ್ಯಂತ ಕಡಿಮೆ ಪ್ರಯಾಣ ದರದಲ್ಲಿ ದೇಶೀಯ ವಿಮಾನ ಯಾನದ ಕನಸು ಬಿತ್ತಿದ್ದು ಏರ್ ಡೆಕ್ಕನ್. ಇದೀಗ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಲು ಎಲ್ಲ ಸಿದ್ಧತೆ ನಡೆಸಿದೆ.

ವಿಮಾನಯಾನ ಸಂದರ್ಭದಲ್ಲಿ ಕನ್ನಡದಲ್ಲಿ ಘೋಷಣೆ ಕೇಳಿ ಬರಲಿವಿಮಾನಯಾನ ಸಂದರ್ಭದಲ್ಲಿ ಕನ್ನಡದಲ್ಲಿ ಘೋಷಣೆ ಕೇಳಿ ಬರಲಿ

2003ರಲ್ಲಿ ಏರ್ ಡೆಕ್ಕನ್ ಆರಂಭಿಸಿದ್ದು ಜಿ.ಆರ್.ಗೋಪಿನಾಥ್. 2008ರಲ್ಲಿ ಅದು ವಿಜಯ್ ಮಲ್ಯರ ಕಿಂಗ್ ಫಿಷರ್ ಏರ್ ಲೈನ್ಸ್ ಜತೆಗೆ ವಿಲೀನವಾಯಿತು. ಆ ನಂತರ ಹಣಕಾಸು ಸಮಸ್ಯೆಯ ಕಾರಣಕ್ಕೆ 2012ರಿಂದ ತನ್ನ ಕಾರ್ಯಾಚರಣೆಯನ್ನೇ ನಿಲ್ಲಿಸಿತು. ಇದೀಗ ಎರಡನೇ ಬಾರಿ ನಭಕ್ಕೆ ಹಾರಲು ಸಿದ್ಧವಾಗಿದೆ ಏರ್ ಡೆಕ್ಕನ್.

Air Deccan all set to start operation from December 22nd

ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಶಿಲ್ಲಾಂಗ್ ನಿಂದ ಚಟುವಟಿಕೆ ಆರಂಭಿಸಲಿರುವ ಏರ್ ಡೆಕ್ಕನ್, ಸಮೀಪದ ನಗರಗಳಿಗೆ ಹಾರಾಟ ಆರಂಭಿಸಲಿದೆ. ಇದೇ ಡಿಸೆಂಬರ್ 22ರಂದು ನಾಸಿಕ್ ನಿಂದ ಮುಂಬೈಗೆ ಏರ್ ಡೆಕ್ಕನ್ ನ ವಿಮಾನ ಹಾರಾಟ ನಡೆಸಲಿದೆ ಎಂದು ಬೆಂಗಳೂರಿನ ನಿವಾಸಿಯಾದ ಗೋಪಿನಾಥ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಅಗ್ಗದ ವಿಮಾನ ಯಾನ 'ಉಡಾನ್ ಯೋಜನೆ' ಏನು, ಎತ್ತ?ಅಗ್ಗದ ವಿಮಾನ ಯಾನ 'ಉಡಾನ್ ಯೋಜನೆ' ಏನು, ಎತ್ತ?

ಆರಂಭದಲ್ಲಿ ಕೆಲವು ಅದೃಷ್ಟವಂತರು ಒಂದು ರುಪಾಯಿಯಲ್ಲಿ ವಿಮಾನ ಹಾರಾಟ ನಡೆಸಬಹುದು. ಇನ್ನು ನಾಸಿಕ್-ಮುಂಬೈ ಮಧ್ಯೆ ವಿಮಾನದಲ್ಲಿ ನಲವತ್ತು ನಿಮಿಷದ ಪ್ರಯಾಣ ಆಗುತ್ತದೆ. ಅದಕ್ಕೆ 1400 ರುಪಾಯಿ ದರ ಇರುತ್ತದೆ. ಈ ಮಾರ್ಗದ ಮಧ್ಯೆ ರಸ್ತೆ ಮೂಲಕ ಸಂಚರಿಸಬೇಕು ಅಂದರೆ ನಾಲ್ಕು ಗಂಟೆ ಸಮಯ ಹಿಡಿಯುತ್ತದೆ.

Air Deccan all set to start operation from December 22nd

ನಾಸಿಕ್ ಮತ್ತು ಪುಣೆ ಹಾಗೂ ಮುಂಬೈ ಮತ್ತು ಜಲಗಾಂವ್ ಮಧ್ಯೆ ಅದೇ ದಿನವೇ ವಿಮಾನ ಹಿಂತಿರುಗುತ್ತದೆ. ಜನವರಿ ಹೊತ್ತಿಗೆ ದೆಹಲಿಯಿಂದಲೂ ಏರ್ ಡೆಕ್ಕನ್ ಸೇವೆ ಆರಂಭಿಸಲಿದ್ದು, ಆಗ್ರಾ, ಶಿಮ್ಲಾ, ಲುಧಿಯಾನ, ಪಂಥ್ ನಗರ್, ಡೆಹ್ರಾಡೂನ್ ಮತ್ತು ಕುಲುವಿನ ಮಧ್ಯೆ ಸಂಚರಿಸಲಿದೆ.

English summary
Air Deccan which was started by Bengaluru based G.R.Gopinath, was well known as cheapest domestic airways (1 Rupee) will relaunch it's operation from December 22nd between Nasik and Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X