• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಗ್ ಬಿಲಿಯನ್ ಡೇಸ್ ಗೂ ಮುನ್ನ ಪೂರೈಕೆ ಜಾಲ ವಿಸ್ತರಿಸಿಕೊಂಡ ಫ್ಲಿಪ್ ಕಾರ್ಟ್

|

ಬೆಂಗಳೂರು, ಸೆ 15: ಬಿಗ್ ಬಿಲಿಯನ್ ಡೇಸ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪೂರೈಕೆ ಜಾಲವನ್ನು ಇನ್ನಷ್ಟು ಪ್ರಮಾಣದಲ್ಲಿ ವಿಸ್ತರಿಸುವುದಾಗಿ ಭಾರತದ ಅತಿ ದೊಡ್ಡ ಇ ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್‍ಕಾರ್ಟ್ ಇಂದು ಹೇಳಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸುಮಾರು 80 ಶೇ.ದಷ್ಟು ಪಿನ್‍ಕೋಡ್ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ಗೃಹೋಪಯೋಗಿ ವಸ್ತುಗಳನ್ನು ಪೂರೈಕೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಫ್ಲಿಪ್‍ಕಾರ್ಟ್ ಹೇಳಿದೆ.

ವಿತರಣಾ ಜಾಲದ ವಿಸ್ತರಣೆಯ ಮೂಲಕ ಫ್ಲಿಪ್‍ಕಾರ್ಟ್ ಪ್ರಸ್ತುತ ಪಿನ್‍ಕೋಡ್ ವ್ಯಾಪ್ತಿಯ ಬಹುತೇಕ ಪ್ರದೇಶಗಳಿಗೆ ದೊಡ್ಡ ಗೃಹೋಪಯೋಗಿ ವಸ್ತುಗಳನ್ನು ವಿತರಣೆ ಮಾಡಲು ಶಕ್ತವಾಗಿದೆ. ಇದರ ಜತೆಗೆ ಎರಡನೇ ದರ್ಜೆಯ ನಗರಗಳನ್ನು ಮೀರಿ ದೇಶದ ಬಹುತೇಕ ಕಡೆಗೆ ದೊಡ್ಡ ಗೃಹೋಪಯೋಗಿ ವಸ್ತುಗಳನ್ನು ಪೂರೈಕೆ ಮಾಡುವ ಸಾಮಥ್ರ್ಯವನ್ನು ಹೊಂದಿದಂತಾಗಿದೆ. ಬೆಂಗಳೂರಿನಲ್ಲಿ 3.5 ಲಕ್ಷ ಚದರ ಅಡಿ ಪ್ರದೇಶದಷ್ಟು ಬೃಹತ್ತಾಗಿರುವ ಸಂಗ್ರಹಣಾ ವ್ಯವಸ್ಥೆಯ ಮೂಲಕ ಫ್ಲಿಪ್‍ಕಾರ್ಟ್ ಪ್ರಸ್ತುತ 2018 ನೇ ವರ್ಷಕ್ಕಿಂತ 14 ಪಟ್ಟು ಹೆಚ್ಚು ವಿತರಣಾ ಸಾಮರ್ಥ್ಯ ವೃದ್ಧಿಸಿಕೊಂಡಿದೆ.

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ದಿನ 700 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಣೆ

ದೊಡ್ಡ ಗೃಹೋಪಯೋಗಿ ವಸ್ತುಗಳ ಖರೀದಿಯ ವೇಳೆ ಗ್ರಾಹಕರ ಮನದಲ್ಲಿ ಉಂಟಾಗುವ ಆತಂಕಗಳಿಗೆ ಉತ್ತರಿಸುವ ನಿಟ್ಟಿನಲ್ಲಿ ಕಾರ್ಯಗತವಾಗಿರುವ ಫ್ಲಿಪ್‍ಕಾರ್ಟ್, ಪೂರೈಕೆ ಬಳಿಕ ಖರೀದಿದಾರರ ಮುಂದೆಯೇ ಓಪನ್ ಬಾಕ್ಸ್ ಡೆಲಿವರಿ ಆಯ್ಕೆ ಅಳವಡಿಸಿಕೊಂಡಿದ್ದು, ಈ ಮೂಲಕ ಗ್ರಾಹಕರಿಗೆ ಖರೀದಿಸಿದ ವಸ್ತುವಿಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಖಾತ್ರಿ ಮಾಡಿಸಲಾಗುತ್ತದೆ.

ಒಂದು ವೇಳೆ ಗ್ರಾಹಕರು ಏನಾದರೂ ಸಮಸ್ಯೆ ಎದುರಿಸಿದರೆ, ಯಾವುದೇ ಅಡೆ ತಡೆಯಿಲ್ಲದೆ ಡೋರ್ ಸ್ಟೇಪ್ ರಿಪ್ಲೇಸ್‍ಮೆಂಟ್ ಅವಕಾಶವನ್ನು ಕೊಡಲಾಗಿದೆ. ದೊಡ್ಡ ಗಾತ್ರದ ಗೃಹೋಪಯೋಗಿ ವಸ್ತುಗಳನ್ನು ಫ್ಲಿಪ್‍ಕಾರ್ಟ್‍ನಿಂದ ಖರೀದಿ ಮಾಡಿದರೆ ಅಲ್ಲಿಗೆ ಎಲ್ಲವೂ ಮುಕ್ತಾಯವಾಗುವುದಿಲ್ಲ. ಖರೀದಿ ಮಾಡಿರುವ ದಿನದಿಂದ 48 ಗಂಟೆಗಳ ಒಳಗೆ ಫಾಸ್ಟೆಸ್ಟ್ ಇನ್‍ಸ್ಟಾಲೇಷನ್ ಪ್ರಾಮಿಸ್ (ಅತಿ ವೇಗದ ಅಳವಡಿಕೆ ಖಾತರಿ) ಒದಗಿಸಲಾಗಿದೆ.

 ಹಿರಿಯ ಉಪಾಧ್ಯಕ್ಷ ಅಜಯ್ ಯಾದವ್

ಹಿರಿಯ ಉಪಾಧ್ಯಕ್ಷ ಅಜಯ್ ಯಾದವ್

ವಿತರಣಾ ಜಾಲದ ವಿಸ್ತರಣೆ ಕುರಿತು ಮಾತನಾಡಿದ ಫ್ಲಿಪ್‍ಕಾರ್ಟ್‍ನ ಹಿರಿಯ ಉಪಾಧ್ಯಕ್ಷ ಅಜಯ್ ಯಾದವ್, "ಶುಭದಿನಗಳಂದು ಗ್ರಾಹಕರು ದೊಡ್ಡ ಪ್ರಮಾಣದ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಪ್ರಸ್ತುತ ಹಬ್ಬದ ಋತುವಿನಲ್ಲಿ ನಮ್ಮ ಪೂರೈಕೆ ಜಾಲವನ್ನು ಹೊಸ ಪ್ರದೇಶಗಳಿಗೆ ವಿಸ್ತರಣೆ ಮಾಡಲಾಗಿದ್ದು, ದೇಶಾದ್ಯಂತ ಇರುವ ಪಿನ್‍ಕೋಡ್ ವ್ಯಾಪ್ತಿಯ ಬಹುತೇಕ ಪ್ರದೇಶಗಳನ್ನು ತಲುಪುವ ಗುರಿಯನ್ನು ಹೊಂದಲಾಗಿದೆ.

 2ನೇ ದರ್ಜೆಯ ನಗರಗಳಿಗೂ ವಿಸ್ತರಣೆ

2ನೇ ದರ್ಜೆಯ ನಗರಗಳಿಗೂ ವಿಸ್ತರಣೆ

ಪ್ರಸ್ತುತ ವರ್ಷದಲ್ಲಿ ನಾವು ಮೆಟ್ರೊ ನಗರಗಳ ಜತೆಗೆ 2ನೇ ದರ್ಜೆಯ ನಗರಕ್ಕಿಂತಲೂ ಮೀರಿದಂತೆ ದೊಡ್ಡ ಗಾತ್ರದ ಗೃಹೋಪಯೋಗಿ ವಸ್ತುಗಳನ್ನು ವಿತರಣೆ ಮಾಡಲು ಮುಂದಾಗಿದ್ದು, ಈ ಸೌಲಭ್ಯ ಈ ಹಿಂದೆ ಎಲ್ಲ ಪ್ರದೇಶದ ಗ್ರಾಹಕರಿಗೆ ಲಭ್ಯವಿರಲಿಲ್ಲ. ಹೀಗಾಗಿ ನಮ್ಮ ಎಲ್ಲ ವ್ಯಾಪ್ತಿಯ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಒದಗಿಸಲಾಗಿದೆ. ನಮ್ಮ ವಿತರಣಾ ಜಾಲದ ವಿಸ್ತರಣೆಯ ಜತೆಗೆ ಸೀಮಾತೀತ ವಿತರಣೆ ಹಾಗೂ ಇನ್‍ಸ್ಟಾಲೇಷನ್ ಮತ್ತು ಅನುಕೂಲಕರ ಪಾವತಿ ವ್ಯವಸ್ಥೆಯನ್ನು ಸಂಯೋಜಿಸಲಾಗಿದೆ. ಇದು ನಮ್ಮ ಪ್ರಗತಿಗೆ ಅನುಕೂಲ ಮಾಡಿಕೊಡುವ ಜತೆಗೆ ಮಂಬರುವ ಬಿಗ್ ಬಿಲಿಯನ್ ಡೇನಲ್ಲಿ ನಮ್ಮ ಗ್ರಾಹಕರಿಗೆ ಇನ್ನಷ್ಟು ಅನುಕೂಲಗಳನ್ನು ಕೊಡುವ ಉದ್ದೇಶವಿದೆ," ಎಂದು ಹೇಳಿದರು.

 ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ

ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ

ದೇಶದ ಮೂಲೆಮೂಲೆಗೂ ಪೂರೈಕೆ ಜಾಲವನ್ನು ವಿಸ್ತರಣೆ ಮಾಡುವ ಮೂಲಕ ಇಂಡಿಯಾ ಹಾಗೂ ಭಾರತದ ನಡುವಿನ ಬಂಧವನ್ನು ಸಂಪರ್ಕಿಸುವ ಗುರಿಯನ್ನು ಫ್ಲಿಪ್‍ಕಾರ್ಟ್ ಹೊಂದಿದೆ. ಹೀಗಾಗಿ ಪ್ರಸ್ತುತ ಬಿಗ್ ಬಿಲಿಯನ್ ಡೇಸ್‍ನಂದು ಸಣ್ಣ ಪಟ್ಟಣಗಳ ಗ್ರಾಹಕರು ಕೂಡ ದೊಡ್ಡ ಗಾತ್ರದ ಗೃಹೋಪಯೋಗಿ ವಸ್ತುಗಳಾದ ಸ್ಮಾರ್ಟ್ ಟಿವಿ, ವಾಷಿಂಗ್ ಮಷಿನ್ ಹಾಗೂ ರೆಫ್ರಿಜರೇಟರ್‍ನಂಥ ವಸ್ತುಗಳನ್ನು ಖರೀದಿಸುವ ಅವಕಾಶ ನೀಡಲಾಗಿದ್ದು, ಇದರಿಂದಾಗಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ.

ಫ್ಲಿಪ್‍ಕಾರ್ಟ್ ನಿಂದ ಮಹತ್ವದ ನಿರ್ಧಾರ, ಇ ವೆಹಿಕಲ್ ಬಳಕೆ ಹೆಚ್ಚಳ

 ಸಣ್ಣ ಪಟ್ಟಣಗಳಲ್ಲಿ ಬೇಡಿಕೆ ಹೆಚ್ಚಿದೆ

ಸಣ್ಣ ಪಟ್ಟಣಗಳಲ್ಲಿ ಬೇಡಿಕೆ ಹೆಚ್ಚಿದೆ

ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್ ಟಿವಿ ಮೇಲಿನ ಬೇಡಿಕೆ ಮೆಟ್ರೊ ನಗರಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ಸಣ್ಣ ಪಟ್ಟಣಗಳಲ್ಲಿ ಅಚ್ಚರಿಯಂತೆ ಸುಮಾರು ಐದು ಪಟ್ಟು ಹೆಚ್ಚಳಗೊಂಡಿದೆ. ಇತ್ತೀಚಿನ ಸುಧಾರಿತ ಹಾಗೂ ಅತ್ಯುನ್ನದ ದರ್ಜೆಯ ತಂತ್ರಜ್ಞಾನದ ಬಳಕೆಯ ಅರಿವು ಹೆಚ್ಚಾಗಿರುವ ಕಾರಣ ವಾಟರ್ ಫ್ಯೂರಿಫೈರ್ ಹಾಗೂ ಏರ್ ಕಂಡೀಷನ್‍ಗಳಿಗೂ ಬೇಡಿಕೆ ಹೆಚ್ಚಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
E-commerce firm Flipkart on Sunday said it has expanded delivery reach by 80 per cent to cover almost all pin codes in India for large appliances, ahead of its big billion day sales, starting from September 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more