ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಜಿಆರ್ ಬಾಕಿ ಪಾವತಿ: ಟೆಲಿಕಾಂ ಕಂಪೆನಿಗಳಿಗೆ 10 ವರ್ಷಗಳ ಸಮಯ ನೀಡಿದ ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ದೂರಸಂಪರ್ಕ ಕಂಪೆನಿಗಳು ಬಾಕಿ ಉಳಿದಿರುವ 1.6 ಲಕ್ಷ ಕೋಟಿ ಹೊಂದಾಣಿಕೆಯ ಒಟ್ಟು ವರಮಾನ (ಎಜಿಆರ್) ಹಣವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಲು ಸುಪ್ರೀಂಕೋರ್ಟ್ 10 ವರ್ಷಗಳ ಕಾಲಾವಕಾಶ ನೀಡಿದೆ.

ಇಷ್ಟು ದೊಡ್ಡ ಮೊತ್ತದ ಹಣವನ್ನು ಒಮ್ಮೆಲೆ ಪಾವತಿ ಮಾಡಲು ಹೊರೆಯಾಗುತ್ತದೆ ಎಂಬ ದೂರಸಂಪರ್ಕ ಕಂಪೆನಿಗಳ ವಾದವನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ಕಂತುಗಳಲ್ಲಿ ಬಾಕಿ ಎಜಿಆರ್ ಪಾವತಿಸಲು ಅವಕಾಶ ನೀಡಿದೆ. ಟೆಲಿಕಾಮ್ ಕಂಪೆನಿಗಳು ಬಾಕಿ ಇರುವ ಮೊತ್ತದಲ್ಲಿ ಶೇ 10ರಷ್ಟು ಮೊದಲು ಪಾವತಿಸಬೇಕಿದೆ. ಬಳಿಕ ಉಳಿದ ಹಣವನ್ನು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕಂತುಗಳಲ್ಲಿ ನೀಡಬೇಕು.

 ಎಚ್ವರ..! ಆನ್‌ಲೈನ್ ಮೀಟಿಂಗ್ ಆ್ಯಪ್‌ಗಳಲ್ಲಿ ಐಎಸ್‌ಡಿ ಶುಲ್ಕ ಪಾವತಿಸಬೇಕಾದಿತು ಎಚ್ವರ..! ಆನ್‌ಲೈನ್ ಮೀಟಿಂಗ್ ಆ್ಯಪ್‌ಗಳಲ್ಲಿ ಐಎಸ್‌ಡಿ ಶುಲ್ಕ ಪಾವತಿಸಬೇಕಾದಿತು

ಒಂದು ವೇಳೆ ಟೆಲಿಕಾಮ್ ಕಂಪೆನಿಗಳು ಎಜಿಆರ್ ಬಾಕಿ ಪಾವತಿಸುವಲ್ಲಿ ವಿಫಲವಾದರೆ ಅದು ಹೆಚ್ಚಿನ ಬಡ್ಡಿ, ದಂಡ ಜತೆಗೆ ನ್ಯಾಯಾಂಗ ನಿಂದನೆಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸಹ ನ್ಯಾಯಪೀಠ ಎಚ್ಚರಿಕೆ ನೀಡಿದೆ. ಮುಂದೆ ಓದಿ.

ಏಪ್ರಿಲ್‌ನಿಂದ ಸಮಯ ಶುರು

ಏಪ್ರಿಲ್‌ನಿಂದ ಸಮಯ ಶುರು

ಎಜಿಆರ್ ಸಂಬಂಧಿಸಿದ ವಿವಾದದ ಅಂತಿಮ ತೀರ್ಪನ್ನು ಮಂಗಳವಾರ ಪ್ರಕಟಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್. ಅಬ್ದುಲ್ ನಜೀರ್ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ, 2021ರ ಏಪ್ರಿಲ್ 1ರಿಂದ ಎಜಿಆರ್ ಬಾಕಿಯ ಪಾವತಿ ಆರಂಭ ಮಾಡಬೇಕಿದ್ದು, ಹತ್ತು ವರ್ಷಗಳ ಬಳಿಕ 2031ರ ಮಾರ್ಚ್ 31ರವರಗೂ ಕಂತುಗಳ ರೂಪದಲ್ಲಿ ಎಲ್ಲ ಹಣವನ್ನು ಪಾವತಿಗೊಳಿಸಬೇಕು ಎಂದು ಸೂಚಿಸಿದೆ.

ಮರುಮೌಲ್ಯಮಾಪನ ಇಲ್ಲ

ಮರುಮೌಲ್ಯಮಾಪನ ಇಲ್ಲ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಯಾವುದೇ ತೀರ್ಪಿನ ಮರುಮೌಲ್ಯಮಾಪನ ಮಾಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ವಾರ್ಷಿಕ ಕಂತುಗಳನ್ನು ಪ್ರತಿ ವರ್ಷ ಫೆಬ್ರವರಿ 7ರ ಒಳಗೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.

ದಿವಾಳಿಯಾದ ವಿಡಿಯೋಕಾನ್: ಏರ್‌ಟೆಲ್ ಮೇಲೆ ಬಾಕಿ ಪಾವತಿಸುವ ಹೊರೆ?ದಿವಾಳಿಯಾದ ವಿಡಿಯೋಕಾನ್: ಏರ್‌ಟೆಲ್ ಮೇಲೆ ಬಾಕಿ ಪಾವತಿಸುವ ಹೊರೆ?

ಸಮಯ ಕೇಳಿದ್ದ ಕಂಪೆನಿಗಳು

ಸಮಯ ಕೇಳಿದ್ದ ಕಂಪೆನಿಗಳು

ಬಾಕಿ ಮೊತ್ತವನ್ನು ಪಾವತಿಸಲು ವಿವಿಧ ಸಮಯಾವಕಾಶಗಳನ್ನು ಟೆಲಿಕಾಮ್ ಕಂಪೆನಿಗಳು ಕೋರಿದ್ದವು. ಟಾಟಾ ಟೆಲಿಕಾಮ್ 7-10 ವರ್ಷದ ಅವಧಿ ಕೇಳಿದ್ದರೆ, ವೊಡಾಫೋನ್-ಐಡಿಯಾ 15 ವರ್ಷ ಸಮಯ ಬೇಕಾಗಬಹುದು ಎಂದು ತಿಳಿಸಿತ್ತು. ಭಾರ್ತಿ ಏರ್ಟೆಲ್ ಕೂಡ 15 ವರ್ಷದ ಸಮಯ ಕೋರಿತ್ತು. ಆದರೆ ದೂರ ಸಂಪರ್ಕ ಸಂವಹನ ಇಲಾಖೆಯು 20 ವರ್ಷಗಳ ಒಳಗೆ ಬಾಕಿ ಹಣ ಪಾವತಿಸಬೇಕೆಂಬ ಕೇಂದ್ರ ಸಂಪುಟದ ಪ್ರಸ್ತಾವವನ್ನು ಪ್ರತಿಪಾದಿಸಿತ್ತು.

ತರಂಗಾಂತರ ಮಾರಾಟ ಎನ್ಸಿಎಲ್‌ಟಿ ನಿರ್ಧಾರ

ತರಂಗಾಂತರ ಮಾರಾಟ ಎನ್ಸಿಎಲ್‌ಟಿ ನಿರ್ಧಾರ

ಟೆಲಿಕಾಮ್ ಕಂಪೆನಿಗಳಿಗೆ ತರಂಗಾಂತರ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣ ವಿಚಾರಣೆ ನಡೆಸಿರುವ ಕೋರ್ಟ್, ತರಂಗಾಂತರಗಳನ್ನು ಮಾರಾಟ ಮಾಡಬಹುದೇ ಅಥವಾ ಇಲ್ಲವೇ ಎಂದು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನಿರ್ಧರಿಸಲಿದೆ ಎಂದು ತಿಳಿಸಿದೆ.

English summary
AGR Verdict : Supreme Court orders Telecoms to pay AGR dues in 10 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X