• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಿಕ್ ಟಾಕ್ ನಿಷೇಧ; ರೊಪೊಸೊ ಭಾರತದ ನಂ.1 ಶಾರ್ಟ್ ವಿಡಿಯೋ ಆ್ಯಪ್!

|

ಬೆಂಗಳೂರು ಜುಲೈ 2: ದೇಶದ ಭದ್ರತೆ ಮತ್ತು ಸುರಕ್ಷತೆಗೆ ಧಕ್ಕೆ ತರುವ ಆತಂಕದಲ್ಲಿ ಚೀನಾದ 59 ಆ್ಯಪ್ ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಇದರಿಂದಾಗಿ ಕಡಿಮೆ ಅವಧಿಯ ಮನರಂಜನಾಯುಕ್ತ ವಿಡಿಯೋಗಳ ಮಾರುಕಟ್ಟೆಯಿಂದ ಟಿಕ್ ಟಾಕ್ ಹೊರಗುಳಿಬೇಕಾಗಿದೆ.

   Bhuvaneswar Kumar wants RajKumar Rao to play in his biopic | Oneindia Kannada

   ಸ್ವದೇಶಿ ನಿರ್ಮಿತ ರೊಪೊಸೊ ಶಾರ್ಟ್ ವಿಡಿಯೋ ಆ್ಯಪ್ ಆಗಿದ್ದು, 65 ದಶಲಕ್ಷಕ್ಕೂ ಅಧಿಕ ಜನರು ಡೌನ್ ಲೋಡ್ ಮಾಡಿಕೊಂಡಿದ್ದು, ದೇಶದಲ್ಲಿ ಸಾಮಾಜಿಕ ವಿಡಿಯೋ ಆ್ಯಪ್ ಗಳ ಪೈಕಿ ಮೊದಲ ಸ್ಥಾನದಲ್ಲಿ ನಿಂತಿದೆ ಎಂದು ಸಂಸ್ಥೆ ಹೇಳಿದೆ.

   ಚೀನಾದ 59 App ಬ್ಯಾನ್ ಓಕೆ! PUBG ನಿಷೇಧವಾಗಿಲ್ಲ ಏಕೆ?

   ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಂಬರ್ ಒನ್ ಸಾಮಾಜಿಕ ಆ್ಯಪ್ ಆಗಿ ಹೊರಹೊಮ್ಮಿದೆ. ಸೋನಂ ವಾಂಗ್ ಚುಂಕ್ ಸೇರಿದಂತೆ ಹಲವಾರು ಗಣ್ಯರು ಸಾಮಾಜಿಕ ಮಾಧ್ಯಮದಲ್ಲಿ ರೊಪೊಸೊಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

   ಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧ

   ರೊಪೊಸೊದೊಂದಿಗೆ ಬಳಕೆದಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಒಂದು ಹೊಣೆಗಾರಿಕೆ ಮನೋರಂಜನೆಯನ್ನು ಎಂಜಾಯ್ ಮಾಡಲಾರಂಭಿಸಿದ್ದಾರೆ. ರೊಪೊಸೊ 12 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, 14 ದಶಲಕ್ಷಕ್ಕೂ ಅಧಿಕ ವಿಡಿಯೋ ಸೃಷ್ಟಿಕರ್ತರು ಮತ್ತು ತಿಂಗಳಿಗೆ 80 ದಶಲಕ್ಷಕ್ಕೂ ಅಧಿಕ ವಿಡಿಯೋಗಳನ್ನು ಸೃಷ್ಟಿಸಲಾಗುತ್ತಿದೆ.

    ಟಿಕ್ ಟಾಕ್ ನಿಂದ ರೊಪೊಸೊಗೆ ಶಿಫ್ಟ್

   ಟಿಕ್ ಟಾಕ್ ನಿಂದ ರೊಪೊಸೊಗೆ ಶಿಫ್ಟ್

   ಇದುವರೆಗೆ ಟಿಕ್ ಟಾಕ್ ಬಳಕೆದಾರರು ಮತ್ತು ಭಾರೀ ಪ್ರಮಾಣದ ಫಾಲೋವರ್ ಗಳು ನಿಷೇಧದ ನಂತರ ಇದೀಗ ರೊಪೊಸೊಗೆ ಮೊರೆ ಹೋಗುತ್ತಿದ್ದಾರೆ. ಟಿಕ್ ಟಾಕ್ ನಲ್ಲಿ 9.5 ದಶಲಕ್ಷ ಅಭಿಮಾನಿಗಳನ್ನು ಹೊಂದಿದ್ದ ಪ್ರೇಮ್ ವತ್ಸ್ ಮತ್ತು 9 ದಶಲಕ್ಷ ಅಭಿಮಾನಿಗಳನ್ನು ಹೊಂದಿದ್ದ ನೂರ್ ಅಫ್ಷಾನ್ ಸೇರಿದಂತೆ ಹಲವಾರು ಮಂದಿ ಪ್ರಭಾವಿಗಳು ರೊಪೊಸೊ ಕಡೆಗೆ ವಾಲಿದ್ದಾರೆ. ಭಾರತ ಸರ್ಕಾರ ಆರಂಭಿಸಿರುವ ನಾಗರಿಕ ಪಾಲ್ಗೊಳ್ಳುವಿಕೆ ಪ್ಲಾಟ್ ಫಾರ್ಮ್ ಆಗಿರುವ MyGov ಈಗಾಗಲೇ ರೊಪೊಸೊದಲ್ಲಿದೆ.

    ಸಹ-ಸಂಸ್ಥಾಪಕ ಮಾಯಾಂಕ್ ಭಂಗಾಡಿಯಾ

   ಸಹ-ಸಂಸ್ಥಾಪಕ ಮಾಯಾಂಕ್ ಭಂಗಾಡಿಯಾ

   ಈ ಬಗ್ಗೆ ಮಾತನಾಡಿದ ರೊಪೊಸೊ ದ ಸಹ-ಸಂಸ್ಥಾಪಕ ಮಾಯಾಂಕ್ ಭಂಗಾಡಿಯಾ ಅವರು, ''ನಿಜವಾದ ಭಾರತೀಯನಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಬಹುದೊಡ್ಡ ವೇದಿಕೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ನಾವು ಪರಿಶುದ್ಧವಾದ ಮತ್ತು ತತ್ತ್ವದ ಆಧಾರದಲ್ಲಿ ಈ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಪ್ರತಿಯೊಬ್ಬ ಪ್ರತಿಭಾನ್ವಿತ ಭಾರತೀಯನೂ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿ ಕ್ಷಿಪ್ರವಾಗಿ ಬೆಳೆಯಲು ಅವಕಾಶ ಕಲ್ಪಿಸಲಾಗುತ್ತಿದೆ'' ಎಂದು ತಿಳಿಸಿದರು.

   ಚೀನಾ ಆಪ್ ನಿಷೇಧ ಬೆನ್ನಲ್ಲೆ ಗಟ್ಟಿ ಸಂದೇಶ ರವಾನಿಸಿದ ಮೋದಿ

    ಮೂವರು ಐಐಟಿ ದೆಹಲಿ ಇಂಜಿನಿಯರ್

   ಮೂವರು ಐಐಟಿ ದೆಹಲಿ ಇಂಜಿನಿಯರ್

   ಭಾರತೀಯ ಮನಗಳ ಉತ್ಪನ್ನವಾಗಿರುವ ರೊಪೊಸೊವನ್ನು ಮೂವರು ಐಐಟಿ ದೆಹಲಿ ಇಂಜಿನಿಯರ್ ಗಳು ಸ್ಥಾಪಿಸಿದ್ದಾರೆ ಮತ್ತು ಮಾಲೀಕತ್ವವನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಭಾರತೀಯನು ತನ್ನ ಪ್ರತಿಭೆಯನ್ನು ವಿನೂತನ ರೀತಿಯಲ್ಲಿ ಪ್ರದರ್ಶಿಸಲು ಈ ವೇದಿಕೆಯನ್ನು ಆರಂಭಿಸಲಾಗಿದೆ. ಈ ಆ್ಯಪ್ ಅನ್ನು ಸುಲಭವಾಗಿ ಬಳಸಬಹುದಾಗಿದ್ದು, ಇದರಲ್ಲಿ ಶಕ್ತಿಶಾಲಿ ವಿಡಿಯೋ ಎಡಿಟಿಂಗ್ ಟೂಲ್ ಗಳು ಇವೆ. ಹಾಲಿ ಇರುವ ಸಮುದಾಯದ ಬಳಕೆದಾರರನ್ನು ಗುರುತಿಸಬಹುದಾಗಿದ್ದು, ಅವರೊಂದಿಗೆ ತಮ್ಮದೇ ಆದ ಮಾತೃ ಭಾಷೆಯಲ್ಲಿ ಸಂವಹನ ನಡೆಸಬಹುದಾಗಿದೆ. ಈ ಮೂಲಕ ರೊಪೊಸ್ ಭಾರತದ ನಂಬರ್ ಒನ್ ಶಾರ್ಟ್ ವಿಡಿಯೋ ಆ್ಯಪ್ ಆಗಿದೆ.

    ಸಿಇಒ ನವೀನ್ ತಿವಾರಿ ಮಾತನಾಡಿ

   ಸಿಇಒ ನವೀನ್ ತಿವಾರಿ ಮಾತನಾಡಿ

   ರೊಪೊಸ್ ಒಡೆತನವನ್ನು ಹೊಂದಿರುವ ಇನ್ ಮೊಬಿ ಗ್ರೂಪ್ ನ ಸಂಸ್ಥಾಪಕ ಮತ್ತು ಸಿಇಒ ನವೀನ್ ತಿವಾರಿ ಅವರು ಮಾತನಾಡಿ, ''ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಂಬರ್ ಒನ್ ಶಾರ್ಟ್ ವಿಡಿಯೋ ಆ್ಯಪ್ ಆಗಿರುವ ರೊಪೊಸ್ ಭಾರತದಲ್ಲಿ ಈ ರೂಪಾಂತರವನ್ನು ಮುನ್ನಡೆಸಲು ಸರ್ವಸನ್ನದ್ಧವಾಗಿದೆ. 65 ದಶಲಕ್ಷ ಭಾರತೀಯ ಬಳಕೆದಾರರ ಪ್ರೀತಿ ಮತ್ತು ವಿಶ್ವಾಸವನ್ನು ಮುಂದುವರಿಸಲು ಪೂರಕವಾದ ಕ್ರಮಗಳನ್ನು ರೊಪೊಸ್ ತೆಗೆದುಕೊಳ್ಳಲಿದೆ'' ಎಂದು ಹೇಳಿದರು.

   English summary
   With the Indian government banning 59 Chinese apps, Roposo Made In India short video app with more than 65 million downloads has become the leader of social video apps in India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more