ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲ್ವರ್‌ ಲೇಕ್ ಜೊತೆಗೆ ಕೆಕೆಆರ್ ಕೂಡ ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ರಿಲಯನ್ಸ್‌ ರಿಟೇಲ್‌ನಲ್ಲಿ ಹೂಡಿಕೆ ಮಾಡಲು ಅಂತರಾಷ್ಟ್ರೀಯ ಕಂಪನಿಗಳು ಮುಗಿ ಬಿದ್ದಂತೆ ಕಾಣುತ್ತಿದೆ. ಅಮೆರಿಕಾದ ಕಂಪನಿ ಸಿಲ್ವರ್ ಲೇಕ್ ಬಳಿಕ ಮತ್ತೊಂದು ಜಾಗತಿಕ ಹೂಡಿಕೆದಾರ ಸಂಸ್ಥೆ ಕೆಕೆಆರ್ ಕೂಡ ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆಗೆ ಆಸಕ್ತಿ ತೋರಿದೆ.

Recommended Video

ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡೋ ಕಾಲ ಬಂದಾಯ್ತು | Oneindia Kannada

ಬ್ಲೂಮ್‌ಬರ್ಗ್‌ ವರದಿಯ ಪ್ರಕಾರ ಕೆಕೆಆರ್ ಅಂಡ್ ಕೊ. 1 ಬಿಲಿಯನ್ ಡಾಲರ್ ಹೂಡಿಕೆ ಮಾಡಬಹುದು ಎನ್ನಲಾಗಿದೆ. ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು 7,368 ಕೋಟಿ ರೂಪಾಯಿಗಳು.

ರಿಲಯನ್ಸ್ ರಿಟೇಲ್‌ನಲ್ಲಿ 7,500 ಕೋಟಿ ಹೂಡಿಕೆ ಮಾಡಲಿರುವ ಸಿಲ್ವರ್ ಲೇಕ್ರಿಲಯನ್ಸ್ ರಿಟೇಲ್‌ನಲ್ಲಿ 7,500 ಕೋಟಿ ಹೂಡಿಕೆ ಮಾಡಲಿರುವ ಸಿಲ್ವರ್ ಲೇಕ್

ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಪಾಲಿಗಾಗಿ ಕೆಕೆಆರ್ ಚರ್ಚೆಯಲ್ಲಿದೆ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆಯು 1.5 ಬಿಲಿಯನ್‌ನಷ್ಟು ಹೂಡಿಕೆ ಮಾಡಬಹುದು ಮತ್ತು ಈ ತಿಂಗಳಲ್ಲಿಯೇ ಪ್ರಕಟಣೆ ಬರಬಹುದು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

After Silver Lake KKR May Invest 1 Billion Dollar In Reliance Retail

ಅಮೆರಿಕಾ ಖಾಸಗಿ ಇಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್‌ನರ್ಸ್ ಶೇ. 1.75 ರಷ್ಟು ಪಾಲನ್ನು ರಿಲಯನ್ಸ್ ರಿಟೇಲ್ ವೆಂಚರ್ಸ್ (ಆರ್ಆರ್‌ವಿಎಲ್) ಅನ್ನು, 7,500 ಕೋಟಿಗೆ ಪಡೆದುಕೊಂಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಇಂದು ಪ್ರಕಟಿಸಿದೆ.

English summary
KKR & Co. is in advanced talks to invest at least $1 billion in the retail business of Reliance Industries, reports Bloomberg
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X