ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ ನಂತರ ಗೃಹ ಸಾಲ ಬಡ್ಡಿ ದರ ಇಳಿಸಿದ ಎಚ್ಡಿಎಫ್ ಸಿ

ಸರ್ಕಾರಿ ವಲಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್ ಬಿಐ) ನಂತರ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್ ಸಿ ಲಿಮಿಟೆಡ್‌, ಗೃಹ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡಿವೆ.

By Mahesh
|
Google Oneindia Kannada News

ಬೆಂಗಳೂರು, ಮೇ 16: ಸರ್ಕಾರಿ ವಲಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್ ಬಿಐ) ನಂತರ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್ ಸಿ ಲಿಮಿಟೆಡ್‌, ಗೃಹ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡಿವೆ.

ಎಲ್ಲರಿಗೂ ಮನೆ ಒದಗಿಸುವ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಸಾಕಾರಗೊಳ್ಳಲು ಎಸ್ ಬಿ ಐ ಬಡ್ಡಿದರ ಇಳಿಕೆ ಮಾಡಿತ್ತು. ಗೃಹ ಸಾಲ ಮಾರುಕಟ್ಟೆಯಲ್ಲಿ ಎಸ್‌ಬಿಐ ಶೇ 26ರಷ್ಟು ಪಾಲು ಹೊಂದಿದೆ.[ಮೋದಿ ಕನಸಿಗಾಗಿ ಸಾಲದ ದರ ಇಳಿಕೆ ಮಾಡಿದ ಎಸ್ ಬಿಐ]

After SBI, now HDFC, ICICI Bank cut home loan rates

ಇದರ ಬೆನ್ನಲ್ಲೇ ಮನೆ ಮಾರಾಟ ಉತ್ತೇಜಿಸಲು 30 ಲಕ್ಷರು ವರೆಗಿನ ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.30ರಷ್ಟು ಇಳಿಸಲಾಗಿದೆ.

ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್ ಸಿ, ಮಹಿಳೆಯರಿಗೆ ಶೇ 8.35 ಮತ್ತು ಪುರುಷರಿಗೆ ಶೇ 8.40 ಬಡ್ಡಿ ದರದಲ್ಲಿ ಸಾಲ ನೀಡಲಿದೆ.

* 30 ರಿಂದ 75 ಲಕ್ಷ ರು ವರೆಗಿನ ಗೃಹ ಸಾಲದ ಶೇ 8.50ರಷ್ಟು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
* 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಡ್ಡಿ ದರ ಶೇ 8.75ದಿಂದ ಶೇ 8.55ಕ್ಕೆ ಇಳಿಯಲಿದೆ.

2022ರ ವೇಳೆಗೆ ಎಲ್ಲರಿಗೂ ಸೂರು ಎಂಬ ಯೋಜನೆ ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರವು, 9 ಲಕ್ಷ ರು ವರೆಗಿನ ಸಾಲಕ್ಕೆ ಶೇ 4 ಬಡ್ಡಿದರ ಸಬ್ಸಿಡಿ ಹಾಗೂ 12 ಲಕ್ಷ ರು ವರೆಗೂ ಶೇ 3 ಬಡ್ಡಿದರದಲ್ಲಿ ಸಬ್ಸಿಡಿ ನೀಡುತ್ತಿದೆ.

English summary
Housing Development Finance Corp. Ltd (HDFC), India’s largest mortgage lender, on Monday cut interest rates on home loans of up to Rs30 lakh by 15 basis points for new borrowers, to gain from the momentum created by the government’s support for affordable housing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X