India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ ದರ ಹೆಚ್ಚಳ ಪರಿಣಾಮ: ಗೃಹಸಾಲದ ಮೇಲಿನ ಬಡ್ಡಿದರ ಹೆಚ್ಚಳ

|
Google Oneindia Kannada News

ನವದೆಹಲಿ, ಜೂನ್ 13: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಳೆದ ವಾರ ರೆಪೋ ದರ ಹೆಚ್ಚಿಸಿದ ಪರಿಣಾಮ ಹಲವು ವಲಯಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಇನ್ನು ಆರ್‌ಬಿಐ ನಿರ್ಧಾರದಿಂದ ಗೃಹಸಾಲದ ಮೇಲಿನ ಬಡ್ಡಿದರ ಹೆಚ್ಚಾಗಲಿದ್ದು, ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.

ಏಪ್ರಿಲ್ ತಿಂಗಳಲ್ಲಿ ಎಸ್‌ಬಿಐ ತನ್ನ ಗ್ರಾಹಕರ ಗೃಹಸಾಲದ ಮೇಲೆ ಬಡ್ಡಿದರ ಹೆಚ್ಚು ಮಾಡಿತ್ತು. ಈಗ ರಿಸರ್ವ್‌ ಬ್ಯಾಂಕ್ ತೀರ್ಮಾನದಿಂದ ಮತ್ತೆ ಬಡ್ಡಿದರ ಹೆಚ್ಚಳವಾಗಲಿದ್ದು, ಸ್ವಂತ ಸೂರಿನ ಕನಸು ಕಾಣುವ ಮಧ್ಯಮ, ಕೆಳ ಮಧ್ಯಮ ವರ್ಗದ ಜೇಬಿಗೆ ಕತ್ತರಿ ಹಾಕಿದೆ.

ರೆಪೋ ಏರಿಕೆ: ಭಾರತದಲ್ಲಿ ಉಳ್ಳವರಿಗೆ ಲಾಭವೆಷ್ಟು, ಇಲ್ಲದವರಿಗೆ ನಷ್ಟವೆಷ್ಟು? ರೆಪೋ ಏರಿಕೆ: ಭಾರತದಲ್ಲಿ ಉಳ್ಳವರಿಗೆ ಲಾಭವೆಷ್ಟು, ಇಲ್ಲದವರಿಗೆ ನಷ್ಟವೆಷ್ಟು?

ಹೊಸ ಬಡ್ಡಿದರದ ಪರಿಣಾಮ ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಗೃಹಸಾಲ ಪಡೆದವರ ಮಾಸಿಕ ಕಂತು (ಇಎಂಐ) 12,000 ರುಪಾಯಿವರೆಗೆ ಹೆಚ್ಚಳವಾಗಿದೆ. ಇದಕ್ಕೆ ಸೂಕ್ತ ಉದಾಹರಣೆ ನೀಡುವುದಾದರೆ ಒಬ್ಬ ವ್ಯಕ್ತಿ 1 ಕೋಟಿ ರುಪಾಯಿ ಗೃಹ ಸಾಲ ಪಡೆದಿದ್ದರೆ ಇಎಂಐ ದರ ಮೊದಲು ತಿಂಗಳಿಗೆ 79,949 ರುಪಾಯಿ ಇದ್ದರೆ ಮೇ ತಿಂಗಳಲ್ಲಿ 82,403 ರುಪಾಯಿಗೆ ಮತ್ತು ಜೂನ್‌ನಲ್ಲಿ 85,520 ರುಪಾಯಿಗಳಿಗೆ ಹೆಚ್ಚಳವಾಗಿದೆ. ಇದು ಮರುಪಾವತಿ ಅವಧಿ, ಕೆಲವೊಂದು ಬ್ಯಾಂಕ್‌ಗಳು ವಿಧಿಸುವ ಬಡ್ಡಿದರದಲ್ಲಿ ಅಲ್ಪ ಪ್ರಮಾಣದಲ್ಲಿ ವ್ಯತ್ಯಾಸವಾಗಲಿದೆ. ಆದರೆ ಒಟ್ಟಾರೆ ಇಎಂಐ ಮೊತ್ತ ಹೆಚ್ಚಾಗಿರುವುದಂತು ಸ್ಪಷ್ಟ.

ರೆಪೋ ಏರಿಕೆ: ಭಾರತದಲ್ಲಿ ಗೃಹ, ಕಾರು, ವೈಯಕ್ತಿಕ ಸಾಲದ ಇಎಂಐ ಹೆಚ್ಚಳ ರೆಪೋ ಏರಿಕೆ: ಭಾರತದಲ್ಲಿ ಗೃಹ, ಕಾರು, ವೈಯಕ್ತಿಕ ಸಾಲದ ಇಎಂಐ ಹೆಚ್ಚಳ

ಇಎಂಐ ಮೊತ್ತದ ಪ್ರಮಾಣ ಹೆಚ್ಚಳ

ಇಎಂಐ ಮೊತ್ತದ ಪ್ರಮಾಣ ಹೆಚ್ಚಳ

"ಇಎಂಐ ಮೊತ್ತ ಸರ್ಕಾರಿ ದರಗಳನ್ನು ಅವಲಂಬಿಸಿ ಏರಿಕೆಯಾಗುತ್ತದೆ ಎಂದು ನಾನು ಸಾಲ ಪಡೆದಿರುವ ಬ್ಯಾಂಕ್ ಇತ್ತೀಚೆಗೆ ನನಗೆ ಮಾಹಿತಿ ನೀಡಿದೆ. ನನ್ನ ಪ್ರತಿ ತಿಂಗಳ ಆದಾಯ ಮತ್ತು ಖರ್ಚಿನ ಬಜೆಟ್‌ ಮೇಲೆ ಈ ಇಎಂಐ ಹೆಚ್ಚಳ ಸಾಕಷ್ಟು ಹೊರೆಯಾಗಿದೆ" ಎಂದು 1.5 ಕೋಟಿ ಸಾಲ ಪಡೆದು ಇಎಂಐ ಪಾವತಿಸುತ್ತಿರುವ ರವಿ ಕೃಷ್ಣನ್ ಹೇಳಿದ್ದಾರೆ.

ಗೃಹ ಸಾಲದ ದರಗಳು 2019ರಲ್ಲಿ ಚಾಲ್ತಿಯಲ್ಲಿರುವ ದರಗಳಿಗಿಂತ ಸುಮಾರು 150 ಬೇಸಿಸ್ ಪಾಯಿಂಟ್ಸ್ (ಬಿಪಿಎಸ್) ಕಡಿಮೆಯಾಗಿರುವುದು ಗಮನಾರ್ಹ ಅಂಶವಾಗಿದೆ. ಹೆಚ್ಚುತ್ತಿರುವ ಬಡ್ಡಿದರಗಳನ್ನು ಎದುರಿಸಲು ಎರಡು ಆಯ್ಕೆಗಳಿವೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೊದಲನೆಯದಾಗಿ, ಸಾಲಗಾರನು ಹೆಚ್ಚಿದ ಇಎಂಐ ಮೊತ್ತವನ್ನು ಪಾವತಿಸಬೇಕು, ಎರಡನೆಯದಾಗಿ, ಸಾಲದ ಅವಧಿಯನ್ನು ಹೆಚ್ಚಿಸಲು ಬ್ಯಾಂಕ್ ಬಳಿ ಮನವಿ ಮಾಡಿಕೊಳ್ಳಬೇಕು.

ಸಾಲದ ಅವಧಿ ವಿಸ್ತರಿಸಿದರೂ ಹೆಚ್ಚಿನ ಹೊರೆ

ಸಾಲದ ಅವಧಿ ವಿಸ್ತರಿಸಿದರೂ ಹೆಚ್ಚಿನ ಹೊರೆ

ಸಾಮಾನ್ಯವಾಗಿ, ಸಾಲದಾತರು ಗೃಹ ಸಾಲದ ಅವಧಿಯನ್ನು ಹೆಚ್ಚಿಸುತ್ತಾರೆ, ಇಎಂಐ ಅನ್ನು ಸ್ಥಿರವಾಗಿರಿಸುತ್ತಾರೆ. ಆದಾಗ್ಯೂ, ಹೆಚ್ಚಿದ ಅವಧಿಯ ಬದಲಿಗೆ ಹೆಚ್ಚಿನ ಇಎಂಐಗೆ ಹೋಗುವುದು ಅಪಾಯಕಾರಿ, ಏಕೆಂದರೆ ಸಾಲದ ಅವಧಿಯನ್ನು ಹೆಚ್ಚಿಸಿದರೆ ಕಟ್ಟಬೇಕಾದ ಒಟ್ಟು ಬಡ್ಡಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ಇದರಿಂದ ಮತ್ತೆ ಹೆಚ್ಚಿನ ಹೊರೆ ಬೀಳಲಿದೆ.

ರಿಸರ್ವ್ ಬ್ಯಾಂಕ್ ಎರಡು ಹಂತಗಳಲ್ಲಿ ರೆಪೋ ದರವನ್ನು 90 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ ಮತ್ತು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿ ಚಿಲ್ಲರೆ ಹಣದುಬ್ಬರವನ್ನು ತಗ್ಗಿಸಲು ಮತ್ತು ಋಣಾತ್ಮಕ ಪ್ರಮಾಣವನ್ನು ಕಡಿತಗೊಳಿಸಲು ನೀತಿ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ನಿರೀಕ್ಷೆ ಮಾಡಿದ್ದಾರೆ. ಆರ್ಥಿಕತೆಯಲ್ಲಿ ನಿಜವಾದ ಬಡ್ಡಿ ದರ ಇನ್ನೂ -1.8 ನಲ್ಲಿದೆ.

ಬಡ್ಡಿದರ ಹೆಚ್ಚಿಸಿದ ಬ್ಯಾಂಕ್‌ಗಳು

ಬಡ್ಡಿದರ ಹೆಚ್ಚಿಸಿದ ಬ್ಯಾಂಕ್‌ಗಳು

ನಿರಂತರವಾದ ಅಧಿಕ ಹಣದುಬ್ಬರವನ್ನು ಕಡಿಮೆ ಮಾಡುವ ಉದ್ದೇಶದಿಂದ ಎರಡು ಕಂತುಗಳಲ್ಲಿ 90 ಬೇಸಿಸ್ ಪಾಯಿಂಟ್‌ಗಳಲ್ಲಿ ಪಾಲಿಸಿ ರೆಪೋ ದರವನ್ನು 90 ಪ್ರತಿಶತದಷ್ಟು ಹೆಚ್ಚಿಸುವ ಕೇಂದ್ರ ಬ್ಯಾಂಕ್ ನಿರ್ಧಾರದ ನಂತರ ಅನೇಕ ಬ್ಯಾಂಕುಗಳು ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ.

ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪ್ರಭಾವ

ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪ್ರಭಾವ

ನೈಟ್ ಫ್ರಾಂಕ್‌ನ ಅಧ್ಯಕ್ಷ ಶಿಶಿರ್ ಬೈಜಾಲ್ ಮಾತನಾಡಿ, "ವಿಶಾಲ ಆರ್ಥಿಕತೆಯ ಕಾರ್ಯಕ್ಷಮತೆಯು ವರ್ಷದ ಉಳಿದ ಅವಧಿಗೆ ಮಾರುಕಟ್ಟೆಯ ಬೆಳವಣಿಗೆ ಮೇಲೆ ಹೆಚ್ಚಿನ ಪ್ರಭಾವ ಹೊಂದಿರುತ್ತದೆ, ಏಕೆಂದರೆ ಇದು ಮನೆ ಖರೀದಿದಾರರ ಆದಾಯದ ಮಟ್ಟವನ್ನು ನಿರ್ಧರಿಸುತ್ತದೆ ಮತ್ತು ಗೃಹಸಾಲದ ಬೇಡಿಕೆಯನ್ನು ಹೆಚ್ಚಿಸುತ್ತದೆ" ಎಂದಿದ್ದಾರೆ.

ಗೃಹಸಾಲಗಳ ಮೇಲಿನ ಬಡ್ಡಿದರ ಹೆಚ್ಚಳದಿಂದ, ನಗರ, ಮಹಾನಗರ ವ್ಯಾಪ್ತಿಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಈಗಾಗಲೇ ಕೊರೊನಾ ಸಾಂಕ್ರಾಮಿಕ ಹೊಡೆತದಿಂದ ರಿಯಲ್ ಎಸ್ಟೇಟ್ ಉದ್ಯಮ ತತ್ತರಿಸಿದೆ. ಈಗ ಹೆಚ್ಚಿನ ಬಡ್ಡಿಹೊರೆಯಿಂದ ಮನೆಗಳ ನಿರ್ಮಾಣ ಮತ್ತು ಖರೀದಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

   ED ತೆಕ್ಕೆಯಲ್ಲಿ ರಾಹುಲ್ ಗಾಂಧಿ! | *Politics | OneIndia Kannada
   English summary
   After RBI Repo Rate Hike Many Banks Have Raised the Interest Rates On Home Loans. burden to homebuyers household budgets. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X