ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ನಂತರ ಮಧ್ಯ ಪ್ರದೇಶದಲ್ಲೂ ಪೆಟ್ರೋಲ್ ಬೆಲೆ 100 ರು ಪ್ಲಸ್

|
Google Oneindia Kannada News

ಭೋಪಾಲ್, ಫೆಬ್ರವರಿ 18: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಸತತ 10 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಿವೆ. ದೇಶದಲ್ಲೇ ಅತಿ ಹೆಚ್ಚು ವ್ಯಾಟ್ ವಿಧಿಸುವ ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಎರಡು ಬಾರಿ 100 ರು ಗಡಿ ದಾಟಿದೆ. ಇಂದು ಮಧ್ಯಪ್ರದೇಶದಲ್ಲೂ ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 100 ರು ಗೂ ಅಧಿಕವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 34 ಪೈಸೆ ಏರಿಕೆಯಾಗಿ 89.88 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 32 ಪೈಸೆ ಏರಿಕೆ ಕಂಡು 80.27 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ಸತತ 10ನೇ ದಿನ ಕೂಡಾ ಪೆಟ್ರೋಲ್, ಡೀಸೆಲ್ ದರ ಏರಿಕೆ ಸತತ 10ನೇ ದಿನ ಕೂಡಾ ಪೆಟ್ರೋಲ್, ಡೀಸೆಲ್ ದರ ಏರಿಕೆ

ಮಧ್ಯಪ್ರದೇಶದ ಅನ್ನುಪ್ಪುರ್ ಎಂಬಲ್ಲಿ ಪೆಟ್ರೋಲ್ 100.25 ರು ಹಾಗೂ ಡೀಸೆಲ್ ದರ 90.35 ರು ದಾಟಿದೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100.49 ರು ನಷ್ಟಿದೆ. ಶ್ರೀಗಂಗಾನಗರ ಪಟ್ಟಣದಲ್ಲಿ ಬುಧವಾರದಂದು ಪೆಟ್ರೋಲ್ 100.13 ರು ಹಾಗೂ ಡೀಸೆಲ್ ಬೆಲೆ 92.13 ರು ಪ್ರತಿ ಲೀಟರ್ ನಷ್ಟಿತ್ತು.

 ಪ್ರತಿ ದಿನ ತೈಲ ಬೆಲೆ ನಿರ್ಧಾರ ಹೇಗೆ?

ಪ್ರತಿ ದಿನ ತೈಲ ಬೆಲೆ ನಿರ್ಧಾರ ಹೇಗೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. ಇದಲ್ಲದೆ, ಆಯಾ ರಾಜ್ಯಗಳಲ್ಲಿನ ವ್ಯಾಟ್, ಸೆಸ್ ದರ ಸೇರಿಸಿ ಇಂಧನ ದರ ಇನ್ನಷ್ಟು ಹೆಚ್ಚಳವಾಗುತ್ತದೆ.

ಈ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆಯಾಗಲು ಏನು ಕಾರಣ?ಈ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆಯಾಗಲು ಏನು ಕಾರಣ?

 ಮಧ್ಯಪ್ರದೇಶದಲ್ಲಿ ಇಂಧನದ ಮೇಲೆ ತೆರಿಗೆ ಹೇಗಿದೆ?

ಮಧ್ಯಪ್ರದೇಶದಲ್ಲಿ ಇಂಧನದ ಮೇಲೆ ತೆರಿಗೆ ಹೇಗಿದೆ?

ಮಧ್ಯಪ್ರದೇಶದಲ್ಲಿ 33% ತೆರಿಗೆ ಪ್ಲಸ್ 4.5 ಪ್ರತಿ ಲೀಟರ್ ಪೆಟ್ರೋಲ್ ಗೆ ಜೊತೆಗೆ 1% ಸೆಸ್ ವಿಧಿಸಲಾಗುತ್ತದೆ. ಇದೇ ರೀತಿ ಡೀಸೆಲ್ ಮೇಲೆ 23% ಪ್ಲಸ್ 3 ರು ಪ್ರತಿ ಲೀಟರ್ ಹಾಗೂ 1 % ಸೆಸ್ ಹಾಕಲಾಗುತ್ತದೆ. ಗುರುವಾರದಂದು ದೇಶದಲ್ಲಿ ಸರಾಸರಿ ದರ ಏರಿಕೆ ಪೆಟ್ರೋಲ್ 30- 35 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ 25-30 ಪೈಸೆ ಪ್ರತಿ ಲೀಟರ್ ಆಗಿದೆ.

 ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 63 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ. ದೆಹಲಿಯಲ್ಲಿ 19 ರು ಪ್ರತಿ ಲೀಟರ್ ವ್ಯಾಟ್, ಡೀಲರ್ ಕಮಿಷನ್ 3.67 ರು ಪ್ರತಿ ಲೀಟರ್ ಸೇರಿ ಬೆಲೆ ಇನ್ನಷ್ಟು ಏರಿಕೆಗೆ ಕಾರಣವಾಗಿದೆ.

 ಬೆಲೆ ತಗ್ಗಿಸಿದ್ದ ರಾಜಸ್ಥಾನ ಸರ್ಕಾರ

ಬೆಲೆ ತಗ್ಗಿಸಿದ್ದ ರಾಜಸ್ಥಾನ ಸರ್ಕಾರ

ರಾಜಸ್ಥಾನದಲ್ಲಿ ಅತಿ ಹೆಚ್ಚು ವ್ಯಾಟ್ ವಿಧಿಸಲಾಗುತ್ತಿದೆ ಹೀಗಾಗಿ ಇಂಧನ ದರ ಇತರೆಡೆಗಿಂತ ಕೊಂಚ ಅಧಿಕವಾಗಿದೆ. ಶ್ರೀಗಂಗಾನಗರ ಪಟ್ಟಣದಲ್ಲಿ ಪೆಟ್ರೋಲ್ 100.13 ರು ಹಾಗೂ ಡೀಸೆಲ್ ಬೆಲೆ 92.13 ರು ಪ್ರತಿ ಲೀಟರ್ ಆಗಿದೆ. ಬ್ರ್ಯಾಂಡೆಡ್ ಪೆಟ್ರೋಲ್ 102.91 ರು ಪ್ರತಿ ಲೀಟರ್ ಹಾಗೂ ಡೀಸೆಲ್ 92.13 ರು ಪ್ರತಿ ಲೀಟರ್ ನಷ್ಟಿದೆ.

ವಾಹನ ಸವಾರರ ಒತ್ತಡಕ್ಕೆ ಮಣಿದಿದ್ದ ರಾಜಸ್ಥಾನ ಸರ್ಕಾರ ಕಳೆದ ತಿಂಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ 2 ರು ಪ್ರತಿ ಲೀಟರ್ ನಂತೆ ತಗ್ಗಿಸಿತ್ತು. ಪೆಟ್ರೋಲ್ ಮೇಲೆ ವ್ಯಾಟ್ 36% ಪ್ಲಸ್ 1.5 ರು ರಸ್ತೆ ಸೆಸ್ ವಿಧಿಸಲಾಗುತ್ತಿದೆ. ಇದೇ ರೀತಿ ಡೀಸೆಲ್ ಮೇಲಿನ ವ್ಯಾಟ್ 26% ಪ್ಲಸ್ 1.75 ರಸ್ತೆ ಸೆಸ್ ಹಾಕಲಾಗಿದೆ. ಇದು ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕ ಸುಂಕವಾಗಿದೆ.

ವಾಹನ ಸವಾರರಿಗೆ ಕಹಿ ಸುದ್ದಿ, ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಲ್ಲ!ವಾಹನ ಸವಾರರಿಗೆ ಕಹಿ ಸುದ್ದಿ, ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಲ್ಲ!

English summary
After Rajasthan, petrol price on Thursday crossed the Rs 100 per litre mark in Madhya Pradesh after fuel rates were increased for the tenth day in a row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X