ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ ಬೆನ್ನಲ್ಲೇ ತೈವಾನ್ ಕಂಪನಿ ಬಾಗಿಲು ಬಂದ್

By Mahesh
|
Google Oneindia Kannada News

ಚೆನ್ನೈ, ಡಿ.12: ಮೈಕ್ರೋಸಾಫ್ಟ್ ಕಾರ್ಪ್ ಸಂಸ್ಥೆ ತನ್ನ ಲೂಮಿಯಾ ಸರಣಿ ಮೊಬೈಲ್ ಫೋನ್ ಗಳಿಂದ ನೋಕಿಯಾ ಹೆಸರನ್ನು ಕೈಬಿಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೂ ಎಷ್ಟು ದಿನ ಮೊದಲೇ ನೋಕಿಯಾ ಸಂಸ್ಥೆ ಅವನತಿಗೆ ಮೈಕ್ರೋಸಾಫ್ಟ್ ನಾಂದಿ ಹಾಡಿತ್ತು. ಈಗ ಭಾರತದಲ್ಲಿ ನೋಕಿಯಾ ಘಟಕದ ಬೆನ್ನಲ್ಲೇ ತೈವಾನ್ ಮೂಲದ ಕಂಪನಿಯೊಂದು ಬಾಗಿಲು ಮುಚ್ಚುತ್ತಿದೆ.

ಶ್ರೀಪೆರಂಬುದೂರು ಬಳಿಯ ನೋಕಿಯಾ ಹ್ಯಾಂಡ್ ಸೆಟ್ ಉತ್ಪಾದನಾ ಘಟಕಕ್ಕೆ ಬಾಗಿಲು ಹಾಕಲಾಗಿದ್ದು ಅಲ್ಲಿನ ನೌಕರರು ಪ್ರತಿಭಟನೆ ನಡೆಸಿದ್ದು ಎಲ್ಲಾ ಈಗ ಹಳೆ ಸಂಗತಿ.

ಆದರೆ, ಗಮನಾರ್ಹ ಸಂಗತಿಯೆಂದರೆ ಘಟಕದ 900 ಉದ್ಯೋಗಿಗಳಲ್ಲದೆ. ಈ ಘಟಕವನ್ನು ನಂಬಿಕೊಂಡು ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಿಂದ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪರೋಕ್ಷವಾಗಿ ಕೆಲಸ ಪಡೆದುಕೊಂಡಿದ್ದರು. ಇವರಲ್ಲಿ ಶೇ 60 ರಷ್ಟು ಮಹಿಳಾ ಉದ್ಯೋಗಿಗಳೇ ಇದ್ದರು ಎಂಬುದು ವಿಶೇಷ.

After Nokia, Foxconn comes to a halt

ಈ ರೀತಿ ಪರೋಕ್ಷವಾಗಿ ನೋಕಿಯಾ ಘಟಕದ ಜೊತೆ ಕಾರ್ಯ ನಿರ್ವಹಿಸುತ್ತಿದ್ದ ತೈವಾನ್ ಮೂಲದ ಕಂಪನಿ ಫಾಕ್ಸ್ ಕಾನ್ ಈಗ ತನ್ನ ಘಟಕವನ್ನು ಬಂದ್ ಮಾಡುತ್ತಿದೆ. ಡಿ. 24ರಿಂದ ಎಲ್ಲಾ ಕಾರ್ಯಗಳನ್ನು ಸ್ಥಗಿತಗೊಳಿಸಲಿದೆ.ಎಫ್ ಐಎಚ್ ಪ್ರೈ ಲಿ.ನ ಅಂಗವಾದ ಫಾಕ್ಸ್ ಕಾನ್ ಸಂಸ್ಥೆಯಲ್ಲಿ ಸುಮಾರು 1,700ಕ್ಕೂ ಅಧಿಕ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದರು.

ನೋಕಿಯಾ ಸಂಸ್ಥೆಯ ಮೊಬೈಲ್ ಫೋನ್ ಪ್ಯಾನೆಲ್ ಗಳನ್ನು ಫಾಕ್ಸ್ ಕಾನ್ ತಯಾರಿಸುತ್ತಿತ್ತು. ನೋಕಿಯಾ ಘಟಕ ಮುಚ್ಚಿದ ಮೇಲೆ ಫಾಕ್ಸ್ ಕಾನ್ ಗೆ ಭಾರಿ ಹೊಡೆತ ಬಿತ್ತು. ನೋಕಿಯಾ ಸಂಸ್ಥೆಯಂತೆ ತನ್ನ ಉದ್ಯೋಗಿಗಳಿಗೆ ವಿಆರ್ ಎಸ್ ಆಯ್ಕೆ ನೀಡಿದರೂ ಪ್ರಯೋಜನವಾಗಲಿಲ್ಲ.

ಈಗ ವಿಧಿವಿಲ್ಲದೆ ಸಂಸ್ಥೆ ಮುಚ್ಚುವುದು ಅನಿವಾರ್ಯ ಇಲ್ಲಿನ ಸರ್ಕಾರ ಹಾಗೂ ಕಾರ್ಮಿಕರ ಸಂಘಟನೆಗಳು ನಮ್ಮ ಉದ್ಯೋಗಿಗಳ ಭವಿಷ್ಯದ ಬಗ್ಗೆ ಜವಾಬ್ದಾರಿ ಯಾರು ಹೊರ ಬೇಕಿದೆ ಎಂದು ಸಂಸ್ಥೆ ಪ್ರಶ್ನಿಸಿದೆ. [ನೋಕಿಯಾ ಬಂದ್, ತಿರುಗಿ ಬಿದ್ದ ಉದ್ಯೋಗಿಗಳು]

2013ರ ಏಪ್ರಿಲ್ ನಲ್ಲಿ 7.2 ಬಿಲಿಯನ್ ಡಾಲರ್ ಡೀಲ್ ಕುದುರಿಸಿ ನೋಕಿಯಾ ಸಂಸ್ಥೆ ಹ್ಯಾಂಡ್ ಸೆಟ್ ವ್ಯವಹಾರವನ್ನು ಮೈಕ್ರೋಸಾಫ್ಟ್ ತನ್ನದಾಗಿಸಿಕೊಂಡಿತ್ತು. ಅದರೆ, ಹೊಸ ಸರಣಿಯ ಫೋನ್ ಗಳಿಗೂ ನೋಕಿಯಾ ಹೆಸರನ್ನು ಬಳಸಿಕೊಳ್ಳುತ್ತಿತ್ತು. ಅದರೆ, ಅ.23ರ ಮೈಕ್ರೋಸಾಫ್ಟ್ ಫೇಸ್ ಬುಕ್ ಪ್ರಕಟಣೆಯಂತೆ ನೋಕಿಯಾ ಹೆಸರನ್ನು ಕೈಬಿಡಲಾಗಿದೆ.

ನೋಕಿಯಾ ಅಶಾ ಸರಣಿ, ಎಕ್ಸ್ ಸರಣಿಯನ್ನು ಅಂತ್ಯಗಾಣಿಸಲಾಗಿದೆ. ಜಾಗತಿಕವಾಗಿ ವಿಂಡೋಸ್ ಆಧಾರಿತ ಮೊಬೈಲ್ ಫೋನ್ ಜನಪ್ರಿಯತೆ ಹೆಚ್ಚಿಸಲು ಮೈಕ್ರೋಸಾಫ್ಟ್ ಯತ್ನಿಸುತ್ತಿದೆ. [ಮೈಕ್ರೋಸಾಫ್ಟ್ ಗರ್ಭ ಸೇರಿದ ನೋಕಿಯಾ ಬಗ್ಗೆ]

English summary
Taiwanese firm Foxconn, which made mobile phone panels for Nokia, has announced that it will be suspending its operations at its Sriperumbudur plant near here from December 24. Around 1,700 employees will be affected by this move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X