ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಯುಕೆಯಲ್ಲೂ ದೋಖಾ
ಲಂಡನ್, ನವೆಂಬರ್ 11: ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅಲ್ಲದೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಇನ್ನು ಐವರು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಭಾರತದಲ್ಲಿ 13 ಸಾವಿರ ಕೋಟಿ ರೂ. ವಂಚನೆಗೆ ಒಳಗಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ಬ್ರಿಟನ್ನಲ್ಲಿ 271 ಕೋಟಿ ರೂ. ವಂಚನೆಯಾಗಿದೆ.
ನೀರವ್ ಮೋದಿಗೆ ಸೇರಿದ ಸಾವಿರಾರು ಕೋಟಿಯಲ್ಲಿ ನೂರಾರು ಕೋಟಿ ಜಪ್ತಿ
ವಿದೇಶದಲ್ಲಿ ಪಿಎನ್ಬಿ ಸಹವರ್ತಿಯಾಗಿ ಬ್ಯಾಂಕ್ ಆಗಿರುವ ಪಂಜಾಬ್ ಇಂಟರ್ನ್ಯಾಷನಲ್ ಲಿಮಿಟೆಡ್ಗೆ ನಕಲಿ ದಾಖಲೆ ನೀಡಿ ಐವರು ಭಾರತೀಯರು ಮತ್ತು ಒಬ್ಬ ಅಮೆರಿಕ ಪ್ರಜೆ ಮೋಸ ಮಾಡಿದ್ದಾರೆ. ಈ ಐವರ್ ಉನಡೆಸುತ್ತಿರುವ 4 ಕಂಪನಿಗಳಿಂದ ಪಡೆದ ಸಾಲ ಇನ್ನೂ ಚುಕ್ತಾ ಆಗಿಲ್ಲ. ಪಡೆದುಕೊಂಡ ಮೊತ್ತ ಮರುಪಾವತಿ ಮಾಡದೆ ವಂಚಿಸಿದ್ದಾರೆ. ಈ ಐವರ ವಿರುದ್ಧ ಬ್ರಿಟನ್ ಹೈಕೋರ್ಟಿನಲ್ಲಿ ಪ್ರಕರಣ ದಾಖಲಾಗಿದೆ.
2011 ರಿಂದ 2014ರ ಅವಧಿಯಲ್ಲಿ ಸೌತ್ ಈಸ್ಟ್ರನ್ ಪೆಟ್ರೋಲಿಯಂ ಎಲ್ಎಲ್ಸಿ (ಎಸ್ಇಪಿಎಲ್), ಪೆಸ್ಕೊ ಬೀಮ್ ಯುಎಸ್ಎ ಮತ್ತು ಇಂಡಿಯಾ ತ್ರಿಶೆ ವಿಂಡ್ ಮತ್ತು ತ್ರಿಶೆ ರಿಸೋರ್ಸ್ಗೆ ಡಾಲರ್ ರೂಪದಲ್ಲಿ ಸಾಲ ನೀಡಲಾಗಿದೆ.
ಪೆಸ್ಕೊ ಬೀಮ್ ಎನ್ವಿರಾನಮೆಂಟಲ್ ಸೆಲ್ಯೂಷನ್ಸ್ ಕಂಪನಿಯು ತೈಲ ಸಂಸ್ಕರಣೆಗೆ ಅಗತ್ಯವಾದ ಸಲಕರಣೆ ತಯಾರಿಸುತ್ತಿದ್ದು, ತಮಿಳುನಾಡಿನ ಶ್ರೀಪೆರಂಬದೂರು ಮತ್ತು ಅಮೆರಿಕದ ವರ್ಜಿನಿಯಾದಲ್ಲಿ ಘಟಕ ಹೊಂದಿದೆ. ಈ ಕಂಪನಿ 2014ರಲ್ಲಿ ದಿವಾಳಿಯಾಗಿದ್ದು, ಇದರ ಆಸ್ತಿಗಳನ್ನು ತ್ರಿಶೆ ರಿಸೋರ್ಸಸ್ಗೆ ವರ್ಗಾಯಿಸಲಾಗಿದೆ.