ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಗಿ ನ್ಯೂಡಲ್ಸ್ ನಂತರ ಪಾಸ್ತಾಗೆ ನಿಷೇಧದ ಭೀತಿ!

By Mahesh
|
Google Oneindia Kannada News

ಬೆಂಗಳೂರು, ನ.28: ನೆಸ್ಲೆ ಸಂಸ್ಥೆಯ ಮ್ಯಾಗಿ ನಿಷೇಧದ ಭೀತಿಯಿಂದ ಇನ್ನೂ ಹೊರ ಬಂದಿಲ್ಲ. ಇದರ ಬೆನ್ನಲ್ಲೇ ನೆಸ್ಲೆ 'ಪಾಸ್ತಾ'ಕ್ಕೂ ಸಂಕಷ್ಟ ಎದುರಾಗಿದೆ. ಉತ್ತರ ಪ್ರದೇಶದ ಆಹಾರ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಟ್ಟ ಪಾಸ್ತಾದಲ್ಲಿ ಸೀಸದ ಅಂಶ ಇರುವುದು ಪತ್ತೆಯಾಗಿದೆ.

ಪಾಸ್ತಾದಲ್ಲಿ ಸೀಸದ ಅಂಶದ ಪ್ರಮಾಣ ಅಗತ್ಯಕ್ಕಿಂತ ಜಾಸ್ತಿ ಇದೆ. ಇದರಿಂದಾಗಿ ಉತ್ತರಪ್ರದೇಶದಲ್ಲಿ 'ಪಾಸ್ತಾ' ನಿಷೇಧಿಸುವ ಸಾಧ್ಯತೆಗಳು ಹೆಚ್ಚಿದೆ.

ರಾಜ್ಯ ಸರ್ಕಾರದ ನಿಯಮದ ಪ್ರಕಾರ 2.5 ಪಿಪಿಎಂನಷ್ಟು ಲೆಡ್ ಬಳಸಬಹುದು. ಆದರೆ, ಪಾಸ್ತಾದಲ್ಲಿ 6 ಪಿಪಿಎಂ ಲೆಡ್ ಅಂಶ ಬಳಕೆ ಮಾಡಲಾಗಿದೆ. ನೆಸ್ಲೆ ಡಿಸ್ಟ್ರಿಬ್ಯೂಟರ್ ಅವರಿಂದಲೇ ಸಂಗ್ರಹಿಸಿಕೊಳ್ಳಲಾದ ಸ್ಯಾಂಪಲ್​ಗಳನ್ನು ಜೂನ್ 10ರಂದು ಲಕ್ನೋದ ಆಹಾರ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು ಎಂದು ಹಿರಿಯ ಅಧಿಕಾರಿ ಅರವಿಂದ್ ಯಾದವ್ ತಿಳಿಸಿದ್ದಾರೆ.

After Maggi noodles, Nestle's pasta in trouble

ಸಪ್ಟೆಂಬರ್ 2ರಂದೇ ಪರೀಕ್ಷೆಯ ವರದಿ ಬಂದಿದ್ದು, ಇದರಲ್ಲಿ ಸೀಸದ ಅಂಶ ಅಗತ್ಯಕ್ಕಿಂತ ಹೆಚ್ಚಿರುವುದು ಗೊತ್ತಾಗಿದೆ. ಈ ಬಗ್ಗೆ ಕಂಪನಿಗೆ ತಿಳಿಸಲಾಗಿದ್ದು, ಕಂಪನಿ ಯಾವುದೇ ಕ್ರಮಕೈಗೊಂಡಿರುವ ಬಗ್ಗೆ ತಿಳಿಸಿಲ್ಲ. ಬಳಿಕ ಅಕ್ಟೋಬರ್ 12ರಂದು ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಯಾದವ್ ಹೇಳಿದ್ದಾರೆ.

ಪಾಸ್ತಾ ಸೇಫ್ : ಪಾಸ್ತಾದಲ್ಲಿ ಸೀಸದ ಅಂಶ ಹೆಚ್ಚಾಗಿರುವ ಬಗ್ಗೆ ಯಾವುದೇ ದೂರುಗಳು ಬಂದಿರಲಿಲ್ಲ.ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ. ಮಾಕ್ರೋನಿ ಪಾಸ್ತಾ ಶೇಕಡಾ 100ರಷ್ಟು ಆರೋಗ್ಯಕರವಾದ ಆಹಾರ ಎಂದು ನೆಸ್ಲೆ ಸಂಸ್ಥೆ ಸಮರ್ಥನೆ ನೀಡಿದೆ.

English summary
Nestle's pasta is the second product after Maggi noodles to land in trouble after its samples, tested at a Uttar Pradesh laboratory, were found to have lead beyond the permissible limits, a state government official said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X