ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್, ಸಿಮ್ ಆಯ್ತು ಈಗ ಫೇಸ್ಬುಕ್ ಜತೆ ಆಧಾರ್ ಕೂಡಿಕೆ?

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 27:ನಕಲಿ ಬ್ಯಾಂಕ್ ಖಾತೆ, ಕಾಳಧನಿಕರ ಮೇಲೆ ಕಡಿವಾಣ, ಕಪ್ಪುಹಣ ನಿಯಂತ್ರಣಕ್ಕಾಗಿ ಬ್ಯಾಂಕ್ ಖಾತೆ, ಪ್ಯಾನ್ ಜತೆ ಆಧಾರ್ ಕಾರ್ಡ್ ನಂಬರ್ ಜೋಡಣೆ ಕಡ್ಡಾಯಗೊಳಿಸಲಾಗಿದೆ. ಈಗ ನಕಲಿ ಖಾತೆಗಳನ್ನು ನಿಯಂತ್ರಿಸಲು ಫೇಸ್ಬುಕ್ ಖಾತೆ ಜತೆ ಆಧಾರ್ ಜೋಡಣೆ ಬಗ್ಗೆ ಚಿಂತನೆ ನಡೆದಿದೆ.

ಹೊಸ ಖಾತೆ ಆರಂಭಿಸುವವರ ಹೆಸರು, ಇಮೇಲ್, ಮೊಬೈಲ್ ಫೋನ್ ಸಂಖ್ಯೆ ಪಡೆಯುವ ಫೇಸ್ಬುಕ್ ಈಗ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ಸಲ್ಲಿಸಲು ಸೂಚಿಸುತ್ತಿದೆ. ಇದಿನ್ನು ಪ್ರಾಯೋಗಿಕ ಹಂತದಲ್ಲಿದ್ದು, ಕೆಲವು ಬಳಕೆದಾರರಿಗೆ ಈ ರೀತಿ ಪ್ರಶ್ನೆ ಎದುರಾಗಿದೆ.

After linking PAN and mobile with Aadhaar, now its time for Facebook

ಫೇಸ್ಬುಕ್ ಹೊರ ತರುತ್ತಿರುವ ಈ ಹೊಸ ಸುರಕ್ಷಿತಾ ನಿಯಮದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವಾರು ಮಂದಿ ಭದ್ರತಾ ದೃಷ್ಟಿಯಿಂದ ಒಳ್ಳೆಯದು. ಆದರೆ, ಖಾಸಗಿ ಮಾಹಿತಿ ಸೋರಿಕೆಯಾಗದಿದ್ದರೆ ಸಾಕು ಎಂದಿದ್ದಾರೆ.

ಲಭ್ಯ ಮಾಹಿತಿಯಂತೆ,ಆಧಾರ್ ಕಾರ್ಡ್ ನಲ್ಲಿ ನಮೂದಾಗಿರುವ ರೀತಿಯಲ್ಲೇ ಹೆಸರನ್ನು ಇಲ್ಲಿ ಸೂಚಿಸಬೇಕಾಗುತ್ತದೆ. ಆದರೆ, ಆಧಾರ್ ನಂಬರ್ ನೀಡಬೇಕಾಗಿಲ್ಲ. ಇದು ಐಚ್ಛಿಕ ವಿಷಯವಾಗಿದ್ದು, ಕಡ್ಡಾಯಗೊಳಿಸಿಲ್ಲ. ಸದ್ಯಕ್ಕೆ ಹೊಸ ಖಾತೆ ಆರಂಭಿಸುವವರಿಗೆ ಮಾತ್ರ ಈ ರೀತಿ ಪ್ರಶ್ನೆ ಎದುರಾಗಿದೆ. ಇನ್ಮುಂದೆ ಇತರೆ ಬಳಕೆದಾರರಿಗೂ ಅನ್ವಯಿಸಬಹುದು.

English summary
In a bid to check creation of fake accounts, Facebook is testing a new feature which encourages those opening new accounts to submit their names as in their Aadhaar cards. Facebook is currently testing this new feature on limited number of users and not all users may be able to see this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X