ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ದರ ಮುದ್ರಿಸದಿದ್ದರೆ ತಯಾರಕರಿಗೆ ಜೈಲು!

ಜಿಎಸ್ ಟಿ ಅನ್ವಯಿಸುವ ಎಲ್ಲಾ ಸಾಮಗ್ರಿಗಳ ಮೇಲೆ ಬೆಲೆ ಮುದ್ರಿಸುವಂತೆ ಕೇಂದ್ರ ಸರ್ಕಾರದ ಆದೇಶ. ದೇಶದ ಎಲ್ಲಾ ತಯಾರಕರಿಗೆ, ಮಾರಾಟಗಾರರಿಗೆ ಆದೇಶ. ತಪ್ಪಿದರೆ ಜೈಲು ಶಿಕ್ಷೆ ಸೇರಿದಂತೆ ಹಲವಾರು ಕಾನೂನು ಕ್ರಮಗಳಿಗೆ ಒಳಪಡಿಸುವ ಎಚ್ಚರಿಕೆ.

|
Google Oneindia Kannada News

ನವದೆಹಲಿ, ಜುಲೈ 7: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ ಜಾರಿಗೊಂಡ ನಂತರ ಸರಕುಗಳ ಮೇಲೆ ಪರಿಷ್ಕೃತ ದರ ಎಂದು ಮುದ್ರಿಸಲೇಬೇಕು ಎಂದು ಕೇಂದ್ರ ಸರ್ಕಾರ ತಾಕೀತು ಮಾಡಿದೆ.

ಹೊಸದಾಗಿ ಜಾರಿಗೆ ಬಂದಿರುವ ತೆರಿಗೆ ವ್ಯವಸ್ಥೆಯು ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ನಿತ್ಯ ಬಳಕೆ ಸಾಮಗ್ರಿಗಳ ಮೇಲೆ ಜಿಎಸ್ ಟಿ: ಇನ್ಫೋಗ್ರಾಫಿಕ್ಸ್ ಮಾಹಿತಿನಿತ್ಯ ಬಳಕೆ ಸಾಮಗ್ರಿಗಳ ಮೇಲೆ ಜಿಎಸ್ ಟಿ: ಇನ್ಫೋಗ್ರಾಫಿಕ್ಸ್ ಮಾಹಿತಿ

ಇದರ ಬೆನ್ನಲ್ಲೇ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ಪ್ರತಿಯೊಂದು ಉತ್ಪನ್ನಗಳ ಮೇಲೂ ಜಿಎಸ್ ಟಿ ಅನ್ವಯ ಪರಿಷ್ಕೃತ ದರವನ್ನು ಮುದ್ರಿಸಬೇಕು. ಇಲ್ಲವಾದರೆ, ಜೈಲು ಶಿಕ್ಷೆಯಂಥ ಗಂಭೀರ ಕ್ರಮ ಕೈಗೊಳ್ಳಬೇಕಾಗಬಹುದು ಎಂದು ಅದು ಹೇಳಿದೆ.

ಪ್ರತ್ಯೇಕ ಮುದ್ರಣ

ಪ್ರತ್ಯೇಕ ಮುದ್ರಣ

ಕಾನೂನುಬದ್ಧ ಮಾಪನ ಕಾಯ್ದೆ 2009ರ ಅಧಿನಿಯಮದ ಪ್ರಕಾರ, ಸಂಸ್ಕರಿಸಲ್ಪಟ್ಟ ಅಥವಾ ಪ್ಯಾಕ್ ಮಾಡಲ್ಪಟ್ಟ ಸರಕುಗಳ ಮೇಲೆ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ನಮೂದಿಸಬೇಕು. ಈಗ ಜಿಎಸ್ ಟಿ ಬಂದ ಮೇಲೆ ಹಳೆಯ ಹಾಗೂ ಹೊಸ ದರಗಳನ್ನು ಮುದ್ರಿಸಬೇಕಾಗುತ್ತದೆ.

ಹೊಸ ಲೇಬಲ್ ಹಾಕಬೇಕು ಎಂದ ಸರ್ಕಾರ

ಹೊಸ ಲೇಬಲ್ ಹಾಕಬೇಕು ಎಂದ ಸರ್ಕಾರ

ಮೂಲ ಎಂಆರ್‌ಪಿ ಮೇಲೆ ಹೊಸ ದರ ಮುದ್ರಿಸಬಾರದು. ಎರಡನ್ನೂ ಪ್ರತ್ಯೇಕವಾಗಿ ಗುರುತಿಸುವಂತೆ ಹೊಸ ಲೇಬಲ್ ಗಳನ್ನೇ ಮುದ್ರಿಸಬೇಕೆಂದು ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ಮಧ್ಯಮ ವರ್ಗದ ಜನರಿಗೆ ಜಿಎಸ್ ಟಿಯಿಂದಾಗುವ ಲಾಭಗಳು!ಮಧ್ಯಮ ವರ್ಗದ ಜನರಿಗೆ ಜಿಎಸ್ ಟಿಯಿಂದಾಗುವ ಲಾಭಗಳು!

ನಿಯಮ ತಪ್ಪಿದರೆ ಜೈಲು

ನಿಯಮ ತಪ್ಪಿದರೆ ಜೈಲು

ಜಿಎಸ್‌ಟಿ ಫಲವಾಗಿ ಬೆಲೆ ಕುಸಿತದ ಮರೆ ಮಾಚಿ ಸಾಮಗ್ರಿಗಳನ್ನು ಹೆಚ್ಚು ದರಗಳಿಗೆ ಮಾರುವ ವರ್ತಕರ ವಿರುದ್ಧ ಉಗ್ರ ಕೈಗೊಳ್ಳುವುದಾಗಿಯೂ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಇಳಿಕೆಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಇಳಿಕೆ

ಮೋಸ ತಪ್ಪಿಸಲು ಸರ್ಕಾರದ ಕ್ರಮ

ಮೋಸ ತಪ್ಪಿಸಲು ಸರ್ಕಾರದ ಕ್ರಮ

ಜನರ ನಿತ್ಯ ಜೀವನಕ್ಕೆ ಉಪಯೋಗವಾಗುವಂಥ ದಿನಬಳಕೆಯ ವಸ್ತುಗಳನ್ನು ಹಾಗೂ ಸರಕು ಸಾಮಗ್ರಿಗಳ ಮೇಲಿನ ತೆರಿಗೆಯನ್ನು ಜಿಎಸ್ ಟಿ ಅಡಿಯಲ್ಲಿ ಇಳಿಸಲಾಗಿದೆ. ಇದರ ಪ್ರಯೋಜನ ನೇರವಾಗಿ ಜನರಿಗೆ ಸಿಗಬೇಕೆಂಬುದು ಸರ್ಕಾರದ ಉದ್ದೇಶ.

English summary
The government on Friday amended consumer protection laws to ensure that manufacturers pass on benefits under the Goods and Services Act. Manufacturers will face punishment, including jail term, for not printing revised price on unsold and new products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X