ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಕ್ತ ಅಭ್ಯರ್ಥಿ ಸಿಗದಿದ್ದರೆ ನೋಟಾಕ್ಕೆ ಮತ ಚಲಾಯಿಸಿ: ಸ್ಪೀಕರ್‌

ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಮತದಾರರು ಆಯ್ಕೆ ಮಾಡಬೇಕು. ಅವರಿಗೆ ಕಣದಲ್ಲಿರುವ ಯಾರೂ ಉತ್ತಮರು ಎಂದು ಕಾಣದಿದ್ದರೆ, ಅವರು ನೋಟಾ ಹಾಕಬಹುದು ಎಂದು ಕಾಗೇರಿ ತಿಳಿಸಿದ್ದಾರೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 2: ಕರ್ನಾಟಕ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಮತದಾರರಿಗೆ ಯಾವುದೇ ಅಭ್ಯರ್ಥಿಗಳು ಸೂಕ್ತವಲ್ಲದಿದ್ದಲ್ಲಿ ಮೇಲಿನ ಯಾವುದೂ ಇಲ್ಲ (ನೋಟಾ) ಆಯ್ಕೆ ಮಾಡುವಂತೆ ತಿಳಿಸಿದರು.

ಕಾಗೇರಿ ಅವರು ಬೆಂಗಳೂರು ನಗರ ಜಿಲ್ಲಾಡಳಿತವು ಚುನಾವಣಾ ಸುಧಾರಣೆಗಳ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡುವಾಗ ಈ ಮೇಲಿನಂತೆ ಹೇಳಿದರು. ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಮತದಾರರು ಆಯ್ಕೆ ಮಾಡಬೇಕು. ಅವರಿಗೆ ಕಣದಲ್ಲಿರುವ ಯಾರೂ ಉತ್ತಮರು ಎಂದು ಕಾಣದಿದ್ದರೆ, ಅವರು ನೋಟಾ ಹಾಕಬಹುದು ಎಂದು ಅವರು ಹೇಳಿದರು.

ಚುನಾವಣೆ ಅಸ್ತ್ರವಾಗಲಿದೆಯಾ ಪ್ರತ್ಯೇಕ ಜಿಲ್ಲೆಯ ಕೂಗು: ಜೋರಾದ ಪರ-ವಿರೋಧ ಚರ್ಚೆಚುನಾವಣೆ ಅಸ್ತ್ರವಾಗಲಿದೆಯಾ ಪ್ರತ್ಯೇಕ ಜಿಲ್ಲೆಯ ಕೂಗು: ಜೋರಾದ ಪರ-ವಿರೋಧ ಚರ್ಚೆ

ನನ್ನ ಮತ ಮಾರಾಟಕ್ಕಿಲ್ಲ. ಈ ಘೋಷವಾಕ್ಯವು ಜನಾಂದೋಲನವಾಗಬೇಕು ಮತ್ತು ನೋಟುಗಳಿಗೆ ಮತವನ್ನು ಮಾರಿಕೊಳ್ಳುವುದಿಲ್ಲ ಎಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದರು. ಪ್ರತಿ ಮತಕ್ಕೆ 6,000 ರೂಪಾಯಿ ನೀಡುವುದಾಗಿ ಹೇಳಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸುತ್ತಿರುವಾಗಲೇ ಸ್ಪೀಕರ್ ಈ ಸ್ಪಷ್ಟನೆ ನೀಡಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ.

If you dont find a suitable candidate, vote for Nota: Speaker Vishweshwar Hegde Kageri

ಜಾತಿ, ಹಣಬಲ ಮತ್ತು ತೋಳ್ಬಲವು ಮತದಾನದ ಮಾನದಂಡವಾದಾಗ ಯುವಕರು ಮಾತ್ರ ಬದಲಾವಣೆಯನ್ನು ತರಲು ಸಾಧ್ಯ. ಮತದಾರನ ಮನಸ್ಥಿತಿ ಬದಲಾಗಬೇಕು ಎಂದ ಅವರು ರಾಜಕಾರಣಿಗಳು ಮತದಾರರಿಗೆ ಹಣ ನೀಡಬೇಡಿ ಎಂದು ಸಲಹೆ ನೀಡಿದರು. ಇಂದು ಕೆಟ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ನಾವು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದಾಗಲೂ (ಜನರು) ಹಣಕ್ಕೆ ಬೇಡಿಕೆ ಇಡುತ್ತಾರೆ. ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವ ಬದಲು ಕ್ರೀಡಾಕೂಟಗಳನ್ನು ಆಯೋಜಿಸಿ, ಹಬ್ಬಗಳನ್ನು ಆಚರಿಸಲು ಜನರು ಕೇಳಲು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ, ಅನಗತ್ಯ ಚರ್ಚೆಗೆ ಅವಕಾಶ ಇಲ್ಲ- ಸ್ಪೀಕರ್ ಕಾಗೇರಿಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ, ಅನಗತ್ಯ ಚರ್ಚೆಗೆ ಅವಕಾಶ ಇಲ್ಲ- ಸ್ಪೀಕರ್ ಕಾಗೇರಿ

ಹಣ ಸಂಪಾದನೆಗಾಗಿ ರಾಜಕೀಯಕ್ಕೆ ಬರುತ್ತಿರುವ ಬಗ್ಗೆ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ಯುವಕರು, ಒಳ್ಳೆಯವರು ರಾಜಕೀಯಕ್ಕೆ ಬಂದರೆ ಪರಿಸ್ಥಿತಿ ಬದಲಾಗಬಹುದು ಎಂದರು. ರಾಜಕೀಯ ಪಕ್ಷಗಳು ಭ್ರಷ್ಟರನ್ನು ಏಕೆ ಬಿಂಬಿಸುತ್ತವೆ ಎಂಬ ಇನ್ನೊಂದು ಪ್ರಶ್ನೆಗೆ, ನೀವು ಭ್ರಷ್ಟರನ್ನು ಚುನಾವಣೆಯಲ್ಲಿ ಗೆಲ್ಲಲು ಬಿಡಬೇಡಿ ಎಂದು ಸ್ಪೀಕರ್ ಹೇಳಿದರು.

If you dont find a suitable candidate, vote for Nota: Speaker Vishweshwar Hegde Kageri

ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಸರ್ಕಾರಿ ನೌಕರಿ ಪಡೆಯುವುದನ್ನು ನಿರ್ಬಂಧಿಸಿರುವಾಗ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿರುವ ಕುರಿತು ಕೇಳಿದಾಗ ಕಾನೂನು ಮತ್ತು ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸುವಂತೆ ಕಾಗೇರಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

English summary
Karnataka Legislative Assembly Speaker Vishweshwar Hegade Kageri on Wednesday told voters to choose none of the above (NOTA) if any of the candidates is not suitable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X