ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡಿಡಿ ಜೊತೆ ಯುಎಇ ಸಂಸ್ಥೆ ಒಪ್ಪಂದ, ಎಡಿಡಿಗೆ ಭೂಮಿ ಮಂಜೂರು

|
Google Oneindia Kannada News

ಬೆಂಗಳೂರು, ಜೂನ್ 4: ಎಡಿಡಿ ಎಂಜಿನಿಯರಿಂಗ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ನ ಮಾತೃ ಸಂಸ್ಥೆಯಾದ ಎಡಿಡಿ ಎಂಜಿನಿಯರಿಂಗ್ ಜಿಎಂಬಿಎಚ್ ಯುಎಇ ಮೂಲದ ರಕ್ಷಣಾ ಕ್ಷೇತ್ರದ ಉದ್ಯಮವಾದ ಎಡಿಜಿಇ ಗ್ರೂಪ್ ಪಿಜೆಜಿಇ ಜತೆಯಲ್ಲಿ ಪರಸ್ಪರ ಒಪ್ಪಂದಕ್ಕೆ ಸಹಿ ಮಾಡಿದೆ.

ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿನ ನಿರ್ವಹಣೆ, ದುರಸ್ತಿ ಮತ್ತು ಓವರ್ ಹೌಲ್ (ಎಂಆರ್ ಒ)ದ ಕಾರ್ಯಕ್ಷಮತೆಯನ್ನು ಸುಧಾರಣೆ ಮಾಡುವುದು ಮತ್ತು ಉತ್ಪಾದನೆಯನ್ನು ಹೆಚ್ಚಳ ಮಾಡುವ ನಿರ್ಣಾಯಕ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಸಂಬಂಧ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಈ ಒಪ್ಪಂದವು ಎರಡು ವರ್ಷಗಳವರೆಗೆ ಜಾರಿಯಲ್ಲಿರಲಿದ್ದು, ಎಡಿಡಿ ಎಂಜಿನಿಯರಿಂಗ್ ಪರವಾಗಿ ನೊರ್ಬರ್ಟ್ ಕ್ರೆಲ್ಲರ್, ವರ್ನರ್ ಗ್ರೆಕ್ಸಾ, ಅಲೆಕ್ಸಾಂಡರ್ ಲೊಕ್ಟೆವ್ ಹಾಗೂ ಇಡಿಜಿಇ ಪರವಾಗಿ ಮೊಹ್ಮದ್ ಅಲ್ ರಶೀದ್ ಮತ್ತು ಇತರರು ಒಪ್ಪಂದಕ್ಕೆ ಸಹಿ ಹಾಕಿದರು.

Add Engg Gmbh signs MoU with UAE firm EDGE

ಎಡಿಜಿಇ ಒಂದು ಖಾಸಗಿ ಸಂಸ್ಥೆಯಾಗಿದ್ದು ಅಬು ಧಾಬಿಯಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ ಮತ್ತು ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದೆ.

ಎಡಿಡಿಗೆ ಭೂಮಿ ಮಂಜೂರು
ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಉತ್ಪಾದನಾ ಘಟಕ ಸ್ಥಾಪನೆಗೆ ತುಮಕೂರು ಮಶಿನ್ ಟೂಲ್ಸ್ ಪಾರ್ಕ್ ನಲ್ಲಿ ಕೆಐಎಡಿಬಿ ಭೂಮಿಯನ್ನು ಮಂಜೂರು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಯ ನಿರ್ದೇಶಕ ಗಿರೀಶ್ ಲಿಂಗಣ್ಣ ಅವರಿಗೆ ಕೆಐಎಡಿಬಿ ಅಧಿಕಾರಿಗಳು ಮಂಜೂರಾತಿ ಪತ್ರವನ್ನು ಹಸ್ತಾಂತರ ಮಾಡಿದರು. ಇದಲ್ಲದೇ, ಕಂಪನಿಯು ದೇವನಹಳ್ಳಿಯಲ್ಲಿನ ಏರೋಸ್ಪೇಸ್ ಪಾರ್ಕ್ ನಲ್ಲಿ ಭೂಮಿ ಮಂಜೂರಾತಿಗಾಗಿ ಕಾಯುತ್ತಿದೆ. ಸರ್ಕಾರದಿಂದ ಭೂಮಿಯನ್ನು ಪಡೆದುಕೊಳ್ಳಲು ಕಂಪನಿಯು ಕಳೆದ ಎರಡು ವರ್ಷಗಳಿಂದ ಹರಸಾಹಸಪಟ್ಟಿತ್ತು.

Add Engg Gmbh signs MoU with UAE firm EDGE

ಮೊದಲಿಗೆ ನೆಲಮಂಗಲ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ನೀಡುವಂತೆ ಕೆಎಸ್ಎಸ್ಐಡಿಸಿಗೆ ಮನವಿ ಮಾಡಿತ್ತು. ಆದರೆ, ಕೆಎಸ್ಎಸ್ಐಡಿಸಿ ಈ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲೇ ಇಲ್ಲ. ಹಲವಾರು ಪ್ರಯತ್ನಗಳ ನಂತರ ಇದೊಂದು ರಾಷ್ಟ್ರೀಯ ಮಹತ್ವದ ಯೋಜನೆ ಆಗಿದೆ ಎಂಬುದನ್ನು ಪರಿಗಣಿಸಿದ ರಾಜ್ಯ ಸರ್ಕಾರದ ಅಧಿಕಾರಿಗಳು ಭೂಮಿಗಾಗಿ ಕೆಐಎಡಿಬಿಗೆ ಅರ್ಜಿ ಸಲ್ಲಿಸುವಂತೆ ಸಲಹೆ ಮಾಡಿದ್ದರು.

ಮೂರು ವರ್ಷದ ಬಳಿಕ ಎಡಿಡಿ ಇಂಜಿನಿಯರಿಂಗ್‌ಗೆ ಸಿಕ್ಕಿತು ಭೂಮಿಮೂರು ವರ್ಷದ ಬಳಿಕ ಎಡಿಡಿ ಇಂಜಿನಿಯರಿಂಗ್‌ಗೆ ಸಿಕ್ಕಿತು ಭೂಮಿ

ತೇಜಸ್ ವಿಮಾನಕ್ಕೆ ಬಿಡಿಭಾಗ
ಎಡಿಡಿ ಎಂಜಿನಿಯರಿಂಗ್ ಎಚ್ಎಎಲ್ ತಯಾರಿಸುವ ತೇಜಸ್ ಯುದ್ಧ ವಿಮಾನ ಮತ್ತು ಇದರ ಇನ್ನಿತರೆ ವರ್ಗಗಳಿಗೆ ಕಟ್ಟಿಂಗ್ ಟೂಲ್ ಸಲೂಶನ್ಸ್ ಅನ್ನು ಪೂರೈಕೆ ಮಾಡಲಿದೆ.

Add Engg Gmbh signs MoU with UAE firm EDGE

Recommended Video

Mumbai, Chennai ನಗರಗಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಬಂತು Bengaluru | Oneindia Kannada

ಎಡಿಜಿಇ(ಎಡ್ಜ್) ಗ್ರೂಪ್ ಪಿಜೆಜಿಇ ಸಂಸ್ಥೆಯು 2019 ರಲ್ಲಿ ಆರಂಭವಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಈ ಸಂಸ್ಥೆಯ ಮಾಲೀಕತ್ವವನ್ನು ಎಮಿರಾಟಿ ಮೂಲದ ಉದ್ದಿಮೆಗಳು ಹೊಂದಿವೆ. ಸೇವಾವಲಯ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಈ ಸಂಸ್ಥೆಯು ಹೂಡಿಕೆ ಮಾಡುತ್ತದೆ. ಇದಕ್ಕೆ ರಾಜ್ಯ ಮಾಲೀಕತ್ವದ ಉದ್ದಿಮೆ (ಎಸ್ಒಇ) ಮಾನ್ಯತೆಯನ್ನು ನೀಡಲಾಗಿದೆ

English summary
Add Engg Gmbh signs MoU with UAE firm EDGE. ADD Engineering has been allotted land by KIADB at Tumakuru Machine Tools Park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X