ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ವರ್ಷದಲ್ಲಿ ಈ ಕಂಪನಿಯ ಷೇರಿಗೆ ಶೇ. 741ರಷ್ಟು ಆದಾಯ

|
Google Oneindia Kannada News

ನವದೆಹಲಿ, ಆಗಸ್ಟ್‌ 20: ಖ್ಯಾತ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೀನ್ ಎನರ್ಜಿ (ನವೀಕರಿಸಬಹುದಾದ ಇಂಧನ) ಕಂಪನಿಯ ಷೇರಿನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇಕಡಾ 741ರಷ್ಟು ಮೌಲ್ಯ ಹೆಚ್ಚಾಗಿದೆ.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಜೂನ್ ತಿಂಗಳಿನಲ್ಲಿ 8 ಜಿವ್ಯಾಟ್ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಭಾರತಕ್ಕೆ ಸೌರಶಕ್ತಿ ನಿಗಮದಿಂದ (ಎಸ್‌ಇಸಿಐ) ಉತ್ಪಾದನಾ-ಸಂಬಂಧಿತ ಸೌರ ಒಪ್ಪಂದವನ್ನು ಪಡೆದುಕೊಂಡಿತು. ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ ಇದು ವಿಶ್ವದ ಅತಿದೊಡ್ಡ ಸೌರ ಯೋಜನೆಯಾಗಿದ್ದು, ವಹಿವಾಟಿನ ಮೌಲ್ಯ 45,000 ಕೋಟಿ ಅಥವಾ 6 ಬಿಲಿಯನ್ ಡಾಲರ್ ನಷ್ಟಿದೆ. ಅಂದಿನಿಂದ ಷೇರುಗಳ ಬೆಲೆ ಶೇಕಡಾ 24ರಷ್ಟು ಏರಿಕೆಯಾಗಿ 375 ರೂಪಾಯಿಗೆ ತಲುಪಿದೆ.

ವಿಶ್ವದ ಅತಿದೊಡ್ಡ ಸೌರ ಯೋಜನೆಯನ್ನು ಗೆದ್ದುಕೊಂಡ ಅದಾನಿ ಗ್ರೀನ್ :6 ಬಿಲಿಯನ್ ಡಾಲರ್ವಿಶ್ವದ ಅತಿದೊಡ್ಡ ಸೌರ ಯೋಜನೆಯನ್ನು ಗೆದ್ದುಕೊಂಡ ಅದಾನಿ ಗ್ರೀನ್ :6 ಬಿಲಿಯನ್ ಡಾಲರ್

ಅದಾನಿ ಗ್ರೀನ್ ಎನರ್ಜಿಯನ್ನು ಜೂನ್ 2018 ರಲ್ಲಿ ಪಟ್ಟಿ ಮಾಡಲಾಗಿದೆ. ಸ್ಟಾಕ್ 29 ರಿಂದ 375 ರೂಪಾಯಿಗೆ ಏರಿದೆ. ಈ ಷೇರು 52 ವಾರಗಳ ಗರಿಷ್ಠ 486.75 ಮತ್ತು 52 ವಾರಗಳ ಕಡಿಮೆ 42.50 ರೂಪಾಯಿ ಹೊಂದಿದೆ.

Adani Green Energy: 741 Percent Return In One Year

ಅದಾನಿ ಗ್ರೀನ್ 57,947 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. 2,500 ಕೋಟಿ ಸಂಗ್ರಹಿಸಲು ಕಂಪನಿಯು ಷೇರುದಾರರ ಅನುಮೋದನೆಯನ್ನು ಪಡೆದಿದೆ ಎಂದು ಜೂನ್ 27 ರಂದು ಪಿಟಿಐ ವರದಿ ಮಾಡಿದೆ.

ಏಪ್ರಿಲ್‌ನಲ್ಲಿ, ಫ್ರೆಂಚ್ ಇಂಧನ ಪ್ರಮುಖ 'ಟೋಟಲ್ ಎಸ್ಎ' ಅದಾನಿ ಗ್ರೀನ್ ಎನರ್ಜಿಯೊಂದಿಗೆ ಶೇಕಡಾ 50ರಷ್ಟು ಸಹಭಾಗಿತ್ವಕ್ಕಾಗಿ ಸುಮಾರು 3,707 ಕೋಟಿ ಹೂಡಿಕೆ ಮಾಡಿದೆ, ಇದು ಭಾರತದ 11 ರಾಜ್ಯಗಳಲ್ಲಿ 2.148 ಗಿಗಾವಾಟ್ (ಜಿಡಬ್ಲ್ಯೂ) ಸೌರ ವಿದ್ಯುತ್ ಯೋಜನೆಗಳನ್ನು ನಿರ್ವಹಿಸುತ್ತದೆ.

ಜೂನ್ 30 ರ ಹೊತ್ತಿಗೆ, ಶೇ. 75ರಷ್ಟು ಷೇರುಗಳನ್ನು ಪ್ರವರ್ತಕರು ಮತ್ತು ಶೇ. 25ರಷ್ಟು ಸಾರ್ವಜನಿಕರಿಂದ ಹೊಂದಿದ್ದಾರೆ ಎಂದು ಬಿಎಸ್ಇ ತೋರಿಸಿದೆ.

English summary
Gautam Adani-led Adani Green Energy, a renewable company has grown by over 741% in the last one year. The energy company bagged a manufacturing-linked solar contract from the SECI to develop 8 GW of projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X