ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಹಂಚಲು ಎನ್‌ಡಿಟಿವಿ ಹಿಂದೇಟು; ಅದಾನಿ ತಿರುಗೇಟು

|
Google Oneindia Kannada News

ಮುಂಬೈ, ಆಗಸ್ಟ್ 26: ಎನ್‌ಡಿಟಿವಿಯ ಪ್ರೊಮೋಟರ್ ಸಂಸ್ಥೆ ಆರ್‌ಆರ್‌ಪಿಆರ್ ಹೋಲ್ಡಿಂಗ್‌ನ ಶೇರುಗಳನ್ನು ಹಂಚಲು ಸಾಧ್ಯ ಇಲ್ಲ ಎಂದು ಹೇಳುತ್ತಿರುವ ಎನ್‌ಡಿಟಿವಿ ಮಾಲೀಕರಿಗೆ ಗೌತಮ್ ಅದಾನಿ ತಿರುಗೇಟು ನೀಡಿದ್ದಾರೆ. ಎನ್‌ಡಿಟಿವಿ ಪ್ರೊಮೋಟರ್ ಎತ್ತಿರುವ ಆಕ್ಷೇಪದಲ್ಲಿ ಯಾವುದೇ ಹುರುಳಿಲ್ಲ. ಒಪ್ಪಂದದ ಪ್ರಕಾರ ಶೇರುಗಳನ್ನು ಕೂಡಲೇ ಹಂಚಿಕೆ ಮಾಡುವಂತೆ ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆ ಆಗ್ರಹಿಸಿದೆ.

ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ದಂಪತಿ ಎನ್‌ಡಿಟಿವಿಯ ಸಂಸ್ಥಾಪಕರು ಮತ್ತು ಪ್ರೊಮೋಟರ್ ಆಗಿದ್ದಾರೆ. ಅವರ ಮಾಲಕತ್ವದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈ. ಲಿ. ಸಂಸ್ಥೆ ಎನ್‌ಡಿಟಿವಿಯ ಪ್ರೊಮೋಟರ್ ಆಗಿದ್ದು ಶೇ. 29.18ರಷ್ಟು ಶೇರುಗಳನ್ನು ಹೊಂದಿದೆ. ಈ ಮೂಲಕ ಒಟ್ಟಾರೆ ರಾಯ್ ದಂಪತಿ ಎನ್‌ಡಿಟಿವಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದಾರೆ.

Explained- ಅದಾನಿ ಪಾಲಾಗುತ್ತಾ ಎನ್‌ಡಿಟಿವಿ? ಏನಿದೆ ಅಂಬಾನಿ ಪಾತ್ರ?Explained- ಅದಾನಿ ಪಾಲಾಗುತ್ತಾ ಎನ್‌ಡಿಟಿವಿ? ಏನಿದೆ ಅಂಬಾನಿ ಪಾತ್ರ?

ಇದೇ ವೇಳೆ, ಆರ್‌ಆರ್‌ಪಿಆರ್‌ಗೆ ಸಾಲ ಕೊಟ್ಟ ವಿಸಿಪಿಎಲ್ ಎಂಬ ಸಂಸ್ಥೆ, ಅದಕ್ಕೆ ಪ್ರತಿಯಾಗಿ ಸೆಕ್ಯೂರಿಟಿ ಡೆಪಾಸಿಟ್ ರೀತಿಯಲ್ಲಿ ವಾರಂಟ್‌ಗಳನ್ನು ಪಡೆದಿತ್ತು. 19.90 ಲಕ್ಷ ವಾರಂಟ್‌ಗಳನ್ನು ಆರ್‌ಆರ್‌ಪಿಆರ್‌ನ ಈಕ್ವಿಟಿ ಶೇರುಗಳಾಗಿ ಪರಿವರ್ತಿಸುವಂತೆ ವಿಸಿಪಿಎಲ್ ಎನ್‌ಡಿಟಿವಿ ಪ್ರೊಮೋಟರ್‌ಗೆ ನೋಟೀಸ್ ಜಾರಿ ಮಾಡಿದೆ. ಇದಾದರೆ ಆರ್‌ಆರ್‌ಪಿಆರ್‌ನ ಬಹುತೇಕ ಪಾಲು ವಿಸಿಪಿಎಲ್‌ಗೆ ಸಿಕ್ಕಿದಂತಾಗಿದೆ. ಈ ವಿಸಿಪಿಎಲ್ ಸಂಸ್ಥೆಯನ್ನು ಅದಾನಿ ಗ್ರೂಪ್ ಖರೀದಿ ಮಾಡಿದೆ. ಹೀಗಾಗಿ, ಇದು ಅದಾನಿ ವರ್ಸಸ್ ವಿಸಿಪಿಎಲ್ ಎಂಬಂತಾಗಿದೆ.

Adani Enterprises Disagree With NDTV Promoters Statement About SEBI Ban

ಈಗ ಎನ್‌ಡಿಟಿವಿ ತಕರಾರು ಏನೆಂದರೆ, ತನಗೆ ಗೊತ್ತಿಲ್ಲದಂತೆಯೇ, ತನಗೆ ಮಾಹಿತಿ ಕೊಡದೆಯೇ ಅದಾನಿ ಗ್ರೂಪ್‌ನವರು ವಿಸಿಪಿಎಲ್ ಅನ್ನು ಖರೀದಿಸಿದೆ. ಅಲ್ಲದೇ, ಸೆಕ್ಯೂರಿಟೀಸ್ ಮಾರುಕಟ್ಟೆಗಳಲ್ಲಿ ಎರಡು ವರ್ಷಗಳ ಕಾಲ ವಹಿವಾಟು ನಡೆದಂತೆ ಎನ್‌ಡಿಟಿವಿ ಪ್ರೊಮೋಟರ್ಸ್‌ಗೆ ಸೆಬಿ ನಿರ್ಬಂಧ ಹಾಕಿದೆ. ಹೀಗಾಗಿ, ಆರ್‌ಆರ್‌ಪಿಆರ್‌ನ ಷೇರುಗಳನ್ನು ವಿಸಿಪಿಎಲ್ ಖರೀದಿಸಲು ಸಾಧ್ಯವಾಗುವುದಿಲ್ಲ ಎಂಬುದು ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ವಾದ. ವಾರಂಟ್‌ಗಳನ್ನು ಷೇರುಗಳಾಗಿ ಪರಿವರ್ತಿಸಲು ಸೆಬಿಯಿಂದ ಲಿಖಿತ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ರಾಯ್ ದಂಪತಿ ಮೇಲೆ ಸೆಬಿ ವಿಧಿಸಿರುವ ವಹಿವಾಟು ನಿಷೇಧ 2022 ನವೆಂಬರ್ 26ರವರೆಗೂ ಇದೆ. ಅಂದರೆ ಅಲ್ಲಿಯವರೆಗೂ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಇಬ್ಬರೂ ತಮ್ಮ ಶೇರುಗಳನ್ನು ಮಾರಾಟ ಮಾಡುವಂತಿಲ್ಲ.

NDTV ಖರೀದಿಸಲು ಓಪನ್ ಆಫರ್ ನೀಡಿದ ಅದಾನಿNDTV ಖರೀದಿಸಲು ಓಪನ್ ಆಫರ್ ನೀಡಿದ ಅದಾನಿ

ಆದರೆ, ಅದಾನಿ ಗ್ರೂಪ್ ಸಂಸ್ಥೆ ಎನ್‌ಡಿಟಿವಿಯ ಈ ವಾದವನ್ನು ಅಲ್ಲಗಳೆದಿದೆ. ಸೆಬಿ ಆದೇಶ ನೀಡಿದ ಪ್ರಕರಣದಲ್ಲಿ ಆರ್‌ಆರ್‌ಪಿಆರ್ ಇಲ್ಲ. ಅದು ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಅವರಿಗೆ ವಿಧಿಸಲಾಗಿರುವ ನಿರ್ಬಂಧ ಎನ್ನಲಾಗಿದೆ.

Adani Enterprises Disagree With NDTV Promoters Statement About SEBI Ban

"ಶೇರುಗಳನ್ನು ಹಂಚುವ ಮೂಲಕ ವಿಸಿಪಿಎಲ್‌ಗೆ ನೀಡಿದ ವಾರಂಟ್ ಜಾರಿಗೊಳಿಸಲು ಆರ್‌ಆರ್‌ಪಿಆರ್ ಬದ್ಧವಾಗಿರಬೇಕು. ಪ್ರಣಯ್ ರಾಯ್ ಅಥವಾ ರಾಧಿಕಾ ರಾಯ್ ಅವರ ಯಾವುದೇ ಶೇರುಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ವ್ಯವಹರಿಸುತ್ತಿಲ್ಲವಾದ್ದರಿಂದ ಸೆಬಿ ಆದೇಶದ ಉಲ್ಲಂಘನೆ ಆಗುವುದಿಲ್ಲ" ಎಂದು ಅದಾನಿ ಎಂಟರ್‌ಪ್ರೈಸಸ್ ಆಗಸ್ಟ್ 26ರಂದು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾಡಿದ ಫೈಲಿಂಗ್‌ನಲ್ಲಿ ತಿಳಿಸಿದೆ.

ತಾನು ವಿಸಿಪಿಎಲ್ ಅನ್ನು ಖರೀದಿಸುವ ಮೂಲಕ ಎನ್‌ಡಿಟಿವಿಯಲ್ಲಿ ಶೇ. 29.18 ಪಾಲು ಪಡೆದಿರುವುದಾಗಿ ಅದಾನಿ ಗ್ರೂಪ್ ಸಂಸ್ಥೆ ಮೂರು ದಿನಗಳ ಹಿಂದೆ ಪ್ರಕಟಿಸಿತ್ತು.

ಎನ್‌ಡಿಟಿವಿ ಸಾಲ
ಎನ್‌ಡಿಟಿವಿಯ ಪ್ರೊಮೋಟರ್ ಸಂಸ್ಥೆಯಾದ ರಾಧಿಕಾ ರಾಯ್ ಪ್ರಣಯ್ ರಾಯ್ ಹೋಲ್ಡಿಂಗ್ ಪ್ರೈ ಲಿ (ಆರ್‌ಆರ್‌ಪಿಆರ್) ೨೦೦೯ರಲ್ಲಿ ವಿಸಿಪಿಎಲ್‌ನಿಂದ 403.85 ಕೋಟಿ ರೂ ಸಾಲ ಪಡೆದಿತ್ತು. ಒಂದು ವರ್ಷದ ಹಿಂದಷ್ಟೇ ಸ್ಥಾಪನೆಯಾಗಿದ್ದ ವಿಶ್ವಪ್ರಧಾನ್ ಕಮರ್ಶಿಯಲ್ ಪ್ರೈ ಲಿ (ವಿಪಿಸಿಎಲ್) ಈ ಅಭದ್ರತೆಯ ಸಾಲಕ್ಕೆ ಭದ್ರತೆಯಾಗಿ ಆರ್‌ಆರ್‌ಪಿಆರ್‌ನಿಂದ ವಾರಂಟ್‌ಗಳನ್ನು ಪಡೆದಿತ್ತು. ಇದು ಸಾಲದ ಮರುಪಾವತಿ ಆಗದೇ ಇದ್ದಾಗ ಷೇರುಗಳಾಗಿ ಪರಿವರ್ತಿಸಿಕೊಳ್ಳುವ ಒಂದು ಸೆಕ್ಯೂರಿಟಿ ವ್ಯವಸ್ಥೆ. ವಿಪಿಸಿಎಲ್ ಈಗ ಈ ಅವಕಾಶವನ್ನು ಉಪಯೋಗಿಸಿ ಆರ್‌ಆರ್‌ಪಿಆರ್‌ನ ವಾರಂಟ್‌ಗಳನ್ನು ಷೇರುಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಇದು ಸಾಧ್ಯವಾದರೆ ಎನ್‌ಡಿಟಿವಿಯಲ್ಲಿ ಆರ್‌ಆರ್‌ಪಿಆರ್ ಹೊಂದಿರುವ ಶೇ. 29.18ರಷ್ಟು ಷೇರುಗಳು ವಿಪಿಸಿಎಲ್‌ಗೆ ವರ್ಗಾವಣೆ ಆಗುತ್ತದೆ.

ಇನ್ನು, ಎನ್‌ಡಿಟಿವಿಯ ಮಾಲಕತ್ವ ಪಡೆಯಲು ಹೊರಟಿರುವ ಅದಾನಿ ಗ್ರೂಪ್‌ಗೆ ಇನ್ನೂ ಹೆಚ್ಚಿನ ಪಾಲು ಅಗತ್ಯ ಇದೆ. ಹೆಚ್ಚುವರಿ ಶೇ. 26ರಷ್ಟು ಷೇರುಗಳನ್ನು ಪಡೆಯಲು ಅದಾನಿ ಗ್ರೂಪ್ ಓಪನ್ ಆಫರ್ ಮುಂದಿಟ್ಟಿದೆ. ಅದರಂತೆ ಪ್ರತೀ ಷೇರಿಗೆ 294 ರೂ ನಂತೆ ಖರೀದಿಸುವುದಾಗಿ ಅದಾನಿ ಸಂಸ್ಥೆ ಹೇಳಿದೆ.

(ಒನ್ಇಂಡಿಯಾ ಸುದ್ದಿ)

English summary
Adani owned company has rebutted NDTV promoter's claim that its warrants cannot be converted equity shares due to SEBI ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X