ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ಲೆಕ್ಕಾಚಾರ ಇನ್ನು ಸುಲಭ, ಇಲ್ಲಿದೆ ಉಚಿತ ಸಾಫ್ಟ್ ವೇರ್

|
Google Oneindia Kannada News

ಬೆಂಗಳೂರು, ನವೆಂಬರ್ 24: ಎಸಿ ಟಚ್ ಭಾರತದ ಪ್ರಮುಖ ಕ್ಲೌಡ್ ಇಆರ್ ಪಿ (ಎಂಟರ್ ಪ್ರೈಸ್ ರಿಸೋರ್ಸ್ ಪ್ಲಾನಿಂಗ್) ಕಂಪನಿಗಳಲ್ಲಿ ಒಂದು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗಾಗಿ ಸಂಪೂರ್ಣ ಉಚಿತವಾದ ಕ್ಲೌಡ್ ಆಧಾರಿತ ಜಿಎಸ್‍ಟಿ ಸಾಫ್ಟ್‍ವೇರ್‍ನ್ನು ಪರಿಚಯಿಸಿದೆ. ಗ್ರಾಹಕರು ಸಂಸ್ಥೆಯ ವೆಬ್ ತಾಣದಲ್ಲಿ ನೋಂದಣಿ ಮಾಡಿ ಜಿಎಸ್‍ಟಿ ವರದಿ ಸಿದ್ದಪಡಿಸಬಹುದಾಗಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಸಣ್ಣ ವ್ಯಾಪಾರದ ಮಾಲೀಕರು ಹಾಗೂ ಸ್ವ ಉದ್ಯೋಗ ಮಾಡುವ ಸಲಹೆಗಾರರು, ಉಪ ಗುತ್ತಿಗೆದಾರರು, ಜಾಬ್ ವರ್ಕ್, ಪ್ರೀಲಾನ್ಸರ್ , ಬುಕ್ ಕೀಪರ್ಸ್, ಸಣ್ಣ ಉದ್ದಿಮೆದಾರರು ಹಾಗೂ ಉತ್ಪಾದಕರಿಗೆ ಉಚಿತ ಜಿಎಸ್‍ಟಿ ಸಾಫ್ಟ್ ವೇರ್ ಹೆಚ್ಚು ನೆರವಾಗಲಿದೆ.

ಆರ್ಥಿಕ ವರ್ಷ ಸರಾಗವಾಗಿ ಅಂತ್ಯವಾಗುವಂತೆ, ಒತ್ತಡ ಹಾಗೂ ಹಣ ಮುಕ್ತವಾಗಿ ಜಿಎಸ್‍ಟಿ ವರದಿಯನ್ನು ಕೂಡಲೆ ತಯಾರಿಸಬಹುದು. ಸುಲಭವಾಗಿ ಉಪಯೋಗಿಸಬಹುದಾದ ಈ ಸಾಫ್ಟ್ ವೇರ್ ನಿಂದ ಇನ್ವಾಯಿಸಿಂಗ್, ಬಿಲ್ಲಿಂಗ್, ಪೇಮೆಂಟ್ ಹಾಗೂ ರೆಸಿಪ್ಟ್ ಟ್ರಾಕಿಂಗ್‍ನ್ನು ಐದು ನಿಮಿಷದೊಳಗೆ ದೋಷ ಮುಕ್ತವಾಗಿ ಜಿಎಸ್‍ಟಿ ವರದಿಯನ್ನು ಉಚಿತವಾಗಿ ಪಡೆಯಬಹುದು. ಗ್ರಾಹಕರು ತಮ್ಮ ವ್ಯಾಪಾರದತ್ತ ನಿಶ್ಚಿಂತೆಯಿಂದ ಗಮನ ಹರಿಸಲು ಕಂಪನಿಯು ಡಾಟಾ ಬ್ಯಾಕ-ಅಪ್ ಹಾಗೂ ಬ್ಯಾಂಕ್ ಲೆವೆಲ್ ಡಾಟಾ ಸುರಕ್ಷತೆಯ ಹೊಣಗಾರಿಕೆ ಎಸಿ ಟಚ್ ತೆಗೆದುಕೊಂಡಿದೆ.

ಎಸಿ ಟಚ್‍ನ ಸಿಇಒ ನಿತ್ಯಾನಂದ ರಾವ್

ಎಸಿ ಟಚ್‍ನ ಸಿಇಒ ನಿತ್ಯಾನಂದ ರಾವ್

ಉಚಿತ ಕೊಡುಗೆಯ ಹಿಂದಿರುವ ಪ್ರಮುಖ ಅಂಶ ಕುರಿತು ಎಸಿ ಟಚ್‍ನ ಸಿಇಒ ನಿತ್ಯಾನಂದ ರಾವ್ ಹೇಳುತ್ತಾರೆ, "ಭಾರತದ ಮಾರುಕಟ್ಟೆಯಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಅಂದಾಜು 6.8 ಕೋಟಿ ಇದೆ ಇದರಲ್ಲಿ ಶೇ 90ರಷ್ಟು ವ್ಯವಹಾರ ಒಬ್ಬರೇ ಮಾಲೀಕರು ನಿರ್ವಹಿಸುತ್ತಿದ್ದು ಐವರಿಗಿಂತ ಕಡಿಮೆ ನೌಕರರನ್ನು ಹೊಂದಿರುವ ಸಂಸ್ಥೆಗಳಾಗಿವೆ.

ನಾವು ಈ ವಲಯವನ್ನು ಗುರಿಯಾಗಿಸಿಕೊಂಡಿದ್ದೇವೆ, ಜಿಎಸ್‍ಟಿ ವ್ಯಾಪ್ತಿಗೆ ತರುವತ್ತ ಗಮನ ಹರಿಸುವ ಜತೆಗೆ ಅವರ ಹಣ ಉಳಿಸುವಂತೆ ಮಾಡುವುದು ಹಾಗೂ ಒತ್ತಡ ಮುಕ್ತ ಸಮಯವನ್ನು ನೀಡುವುದಾಗಿದೆ.

ಗ್ರಾಹಕರ ಬಗ್ಗೆ ನಮಗಿರುವ ಆಸಕ್ತಿಯನ್ನು ತೋರುವ ಹೆಜ್ಜೆ ಇದಾಗಿದೆ ಮತ್ತು ಸಣ್ಣ ಪ್ರಮಾಣದ ವ್ಯಾಪಾರ ನೋಡುವ ಮಾಲೀಕರಲ್ಲಿ ಕ್ಲೌಡ್ ಇಆರ್‍ಪಿ ಸಲ್ಯೂಷನ್ಸ್ ನೀಡುವ ಪ್ರಯೋಜನ ಕುರಿತ ಅರಿವು ಮೂಡಿಸುವುದಾಗಿದೆ.

ಎಸಿ ಟಚ್ ಟೆಕ್ನಾಲಜೀಸ್

ಎಸಿ ಟಚ್ ಟೆಕ್ನಾಲಜೀಸ್

ಎಸಿ ಟಚ್ ಕುರಿತು: ಎಸಿ ಟಚ್ ಟೆಕ್ನಾಲಜೀಸ್ ಭಾರತದ ಪ್ರಮುಖ ಸಂಪೂರ್ಣ ಕ್ಲೌಡ್ ಇಆರ್‍ಪಿ(ಎಂಟರ್‍ಪ್ರೈಸ್ ರಿಸೋರ್ಸ್ ಪ್ಲಾನಿಂಗ್) ವೇದಿಕೆ. ಬೆಂಗಳೂರಿನಲ್ಲಿ ನೆಲೆಯೂರಿರುವ ಎಸಿಟಚ್ ಸಂಸ್ಥೆಯನ್ನು ನಿತ್ಯಾನಂದ ರಾವ್‍ರವರ ಎರಡು ದಶಕದ ಅನುಭವ ಹಾಗೂ ಸುನಿಶ್ ಅಂಕೋಲೆಕರ್ ರವರ ವ್ಯಾಪಾರ ತಂತ್ರಗಾರಿಯೊಂದಿಗೆ ಜತೆಗೂಡಿ ಸ್ಥಾಪಿಸಿದ್ದಾರೆ.

ಇಆರ್‍ಪಿ ಮಾರುಕಟ್ಟೆಯಲ್ಲಿ ಕೇವಲ ಅಕೌಂಟಿಂಗ್ ಸಲ್ಯೂಷನ್ಸ್ ಸೇವಗಳಿದ್ದು, ಮಾಲಿಕರ ಅವಶ್ಯಕತೆಗಳಿಗೆ ಸ್ವಂದಿಸುವ ಯಾವುದೇ ಸೇವೆಗಳು ಇರಲಿಲ್ಲ. ಮಾರುಕಟ್ಟೆಯ ಈ ಅಂತರವನ್ನು ಕಡಿತಗೊಳಿಸಲು ಎಸಿ ಟಚ್ 2014ರಲ್ಲಿ ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ನೈಜ ಮೌಲ್ಯ ನೀಡಲು ತನ್ನ ಇಆರ್‍ಪಿ ಸಾಫ್ಟ್ ವೇರ್ ಬಿಡುಗಡೆ ಮಾಡಿತು.

ಉತ್ಪನ್ನ ಹಾಗೂ ಸೇವೆಯ ನಿರ್ವಹಣೆ ಸುಲಭ

ಉತ್ಪನ್ನ ಹಾಗೂ ಸೇವೆಯ ನಿರ್ವಹಣೆ ಸುಲಭ

ಎಸಿ ಟಚ್ ಸಂಸ್ಥೆ ಉತ್ಪನ್ನ ಹಾಗೂ ಸೇವೆಯ ಪಟ್ಟಿಯಲ್ಲಿ ಇನ್ವೆಂಟರಿ ಮ್ಯಾನೇಜ್‍ಮೆಂಟ್, ಆಮದು-ರಫ್ತು, ಬಿಲ್ಲಿಂಗ್ ಮತ್ತು ಇನ್‍ವಾಯ್ಸಿಂಗ್ ತಯಾರಿ - ಉತ್ಪಾದನೆ, ಉಪ ಗುತ್ತಿಗೆ ಮತ್ತು ಜಾಬ್ ವಕ್ರ್ಸ್ - ಪೇಮೆಂಟ್ ಮತ್ತು ರಸೀದಿ ಹಾಗೂ ಇನ್ನೂ ಅನೇಕ ಸೇವೆಗಳು. ಮೊಬೈಲ್ ಆ್ಯಪ್ಸ್ ಫಾರ್ ಸೇಲ್ಸ್ ಫೋರ್ಸ್ ಮತ್ತು ಡೀಲರ್ ಮ್ಯಾನೇಜ್‍ಮೆಂಟ್ ಪ್ರೋಗ್ರಾಮ್ಸ್ ಸೇವೆಗಳನ್ನು ಇತ್ತೀಚಿಗೆ ಸೇರಿಸಲಾಗಿದೆ.

200ಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ

200ಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ

ಕಂಪನಿಯ ಗ್ರಾಹಕರ ಪಟ್ಟಿಯಲ್ಲಿ ಇ ಕಾಮರ್ಸ್, ನ್ಯೂ ಏಜ್ ಟೆಕ್ಯಾಲಜಿಯಿಂದ ಹಿಡಿದು ಮ್ಯಾನುಫ್ಯಾಕ್ಟರಿಂಗ್ ಕಂಪನಿಗಳ ವರಗೆ ವ್ಯಾಪರಸ್ಥರಿಂದ ಸಲಹೆಗಾರರ ತನಕ ಸೇರಿದ 200ಕ್ಕೂ ಅಧಿಕ ಗ್ರಾಹಕರನ್ನು ಎಸಿ ಟಚ್ ಹೊಂದಿದೆ. ಅದರಲ್ಲಿ IIM Bangalore (MARS Team), URDoorstep, Magiccrate, RenewIT, Energy Efficient Lights, AdPac ಮೊದಲಾದ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

English summary
AcTouch, one of India’s leading Cloud ERP (Enterprise Resource Planning) Companies has announced the launch of Cloud based GST Software that is available for Start up’s & SME’s absolutely free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X