ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುಪೇ ಕಾರ್ಡ್ ಬಳಕೆದಾರರಿಗೂ ಸಿಗಲಿದೆ ವಿಮೆ!

By Mahesh
|
Google Oneindia Kannada News

ನವದೆಹಲಿ, ಜುಲೈ 28: ಕೇವಲ ವೀಸಾ ಕಾರ್ಡ್ ಮತ್ತು ಮಾಸ್ಟರ್ ಕಾರ್ಡ್ ಗೆ ಸೀಮಿತವಾಗಿದ್ದ ಇ-ಕಾಮರ್ಸ್ ವ್ಯವಹಾರಗಳು ರುಪೇ ಕಾರ್ಡ್ ಮೂಲಕವೂ ಜನಪ್ರಿಯ. ಈಗ ರುಪೇ ಕಾರ್ಡ್ ಬಳಕೆದಾರರಿಗೆ ಸರ್ಕಾರದಿಂದ ಶುಭ ಸುದ್ದಿ ಸಿಕ್ಕಿದೆ. ರುಪೇ ಕಾರ್ಡ್ ವುಳ್ಳವರಿಗೆ ಅಪಘಾತ ವಿಮೆ ಘೋಷಿಸಲಾಗಿದೆ.

ಬಸ್‌, ರೈಲು ಮತ್ತು ವಿಮಾನದ ಟಿಕೆಟ್‌ ಖರೀದಿದಗೂ, ಕಾಯ್ದಿರುಸುವಿಕೆಗೂ ರುಪೇ ಕಾರ್ಡ್‌ ಬಳಸಬಹುದು. ಫ್ಲಿಪ್‌ಕಾರ್ಟ್‌, ಐಆರ್‌ಸಿಟಿಸಿ, ಜೆಟ್‌ ಏರ್‌ವೇಸ್‌, ಸ್ನ್ಯಾಪ್‌ಡೀಲ್‌, ಎಲ್‌ಐಸಿ, ಬುಕ್‌ ಮೈ ಶೋ ಸೇರಿದಂತೆ ಸುಮಾರು 30 ಸಾವಿರಕ್ಕೂ ಅಧಿಕ ಆನ್‌ಲೈನ್‌ ಕಂಪೆನಿಗಳಲ್ಲಿ ರುಪೇ ಕಾರ್ಡ್‌ ಮೂಲಕ ವಹಿವಾಟು ನಡೆಸಬಹುದು. ಸರಿ ಸುಮಾರು 10 ಕೋಟಿ ಗೂ ಅಧಿಕ ರುಪೇ ಕಾರ್ಡ್ ನೀಡಲಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಮೂಲಕ ರುಪೇ ಕಾರ್ಡ್ ನಿಯಂತ್ರಿಸಲ್ಪಟ್ಟಿದೆ.

Accidental Insurance for RuPay ATM Card Holders

ರುಪೇ ಕ್ಲಾಸಿಕ್ ಕಾರ್ಡ್ ದಾರರಿಗೆ 1 ಲಕ್ಷ ರು ಹಾಗೂ ರುಪೇ ಪ್ರೀಮಿಯಂ ಕಾರ್ಡ್ ದಾರರಿಗೆ 2 ಲಕ್ಷ ರು ವಿಮೆ ಸೌಲಭ್ಯ ಸಿಗಲಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಪ್ರೀಮಿಯಂ ಹಣ ಪಾವತಿ ಮಾಡಲಿದೆ.

2016-17ರಲ್ಲಿ 872 ಕಾರ್ಡ್ ದಾರರಿಗೆ ವಿಮೆ ಕ್ಲೇಮುಗಳನ್ನು ನೀಡಲಾಗಿತ್ತು. ಅಪಘಾತದಲ್ಲಿ ಸಾವು ಹಾಗೂ ಶಾಶ್ವತ ಅಗವೈಕಲ್ಯ ವಿಮೆಯಡಿ ಕವರ್ ಆಗಲಿದೆ ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗವಾರ್ ಅವರು ಲೋಕಸಭೆಯಲ್ಲಿ ಶುಕ್ರವಾರದಂದು ತಿಳಿಸಿದರು.

English summary
All RuPay ATM-cum-debit cardholders are presently eligible for accidental death and permanent disability insurance cover. RuPay Classic cardholders are eligible for cover of Rs.1 lakh, whereas RuPay Premium cardholders are eligible for cover of Rs.2 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X