ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನ್‌ಪೇ ಇದ್ರೆ ಹಂಗಾಮಾದ ಪ್ರೀಮಿಯಂ ಸೇವೆ ಗಳಿಸಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಭಾರತದ ಪ್ರಮುಖ ಡಿಜಿಟಲ್ ಮನರಂಜನಾ ಕಂಪನಿ ಹಂಗಾಮಾ, ಭಾರತದ ಪ್ರಮುಖ ಡಿಜಿಟಲ್ ಪಾವತಿ ತಾಣವಾದ ಫೋನ್‌ಪೇ ಜೊತೆ ಒಪ್ಪಂದ ಮಾಡಿಕೊಂಡಿದೆ.

ಇದರಿಂದಾಗಿ ಹಂಗಮಾ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮತ್ತು ಅದರ ವೀಡಿಯೊ-ಆನ್-ಡಿಮಾಂಡ್ ಸೇವೆಯಾದ ಹಂಗಮಾ ಪ್ಲೇಗೆ ಚಂದಾದಾರರಾಗಲು ಫೋನ್‌ಪೆ ಬಳಕೆದಾರರಿಗೆ ಅವಕಾಶ ಸಿಗಲಿದೆ.

ಫೋನ್‌ಪೇ ಖಾತೆಗಳಿಗೆ ಲಾಗ್ ಇನ್ ಆಗಗಿ, ರೀಚಾರ್ಜ್ ಮತ್ತು ಪೇ ಬಿಲ್‌ಗಳ ವಿಭಾಗದಲ್ಲಿ ಚಂದಾದಾರಿಕೆ ಟ್ಯಾಬ್‌ನಲ್ಲಿ ಉಲ್ಲೇಖಿಸಲಾದ ಸೇವೆಗಳ ಪಟ್ಟಿಯಿಂದ ಹಂಗಮಾ ಮ್ಯೂಸಿಕ್ ಮತ್ತು ಹಂಗಮಾ ಪ್ಲೇ ಅನ್ನು ಆಯ್ಕೆ ಮಾಡಿಕೊಂಡರೆ ಸಾಕು, ಹಂಗಮಾ ಮ್ಯೂಸಿಕ್ ಪ್ರೊ, ಹಂಗಮಾ ಪ್ಲೇ ಪ್ರೊ ಅಥವಾ ಎರಡರ ಮಾಸಿಕ ಅಥವಾ ವಾರ್ಷಿಕ ಚಂದಾದಾರಿಕೆಯ ಆಯ್ಕೆ ದೊರೆಯುತ್ತದೆ.

Access Hungama Music, Video Services Directly From Phonepe

ಹಂಗಾಮಾ ಮ್ಯೂಸಿಕ್ ಪ್ರೊ ಚಂದಾದಾರಿಕೆಯನ್ನು ಒಂದು ತಿಂಗಳಿಗೆ ರೂ 99 ನೀಡುವ ಮೂಲಕ ಅಥವಾ ಒಂದು ವರ್ಷಕ್ಕೆ 499 ರೂ. ನೀಡುವ ಮೂಲಕ ಎಚ್‌ಡಿ ಗುಣಮಟ್ಟದ ಜಾಹೀರಾತು-ಮುಕ್ತ ಸಂಗೀತ ಮತ್ತು ಅನಿಯಮಿತ ಡೌನ್‌ಲೋಡ್‌ಗಳನ್ನು ಮಾಡಿಕೊಳ್ಳಬಹುದು.

20 ಕ್ಕೂ ಹೆಚ್ಚು ಭಾರತೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಲ್ಲಿ 1.5 ಕೋಟಿಗೂ ಹೆಚ್ಚು ಹಾಡುಗಳು ಮತ್ತು ಸಂಗೀತ ವೀಡಿಯೊಗಳ ವೀಕ್ಷಣೆಗೆ ಅವಕಾಶ ನೀಡುತ್ತದೆ. ಹಂಗಮಾ ಪ್ಲೇ ಪ್ರೊ ಚಂದಾದಾರಿಕೆಗೆ ಒಂದು ತಿಂಗಳಿಗೆ ರೂ 99 ಅಥವಾ ಒಂದು ವರ್ಷಕ್ಕೆ ರೂ 799 ನೀಡಬೇಕಿದೆ. ಇದು ವೀಕ್ಷಕರಿಗೆ ಜಾಹೀರಾತು ರಹಿತ ವೀಡಿಯೊ ನೋಡುವ ಅವಕಾಶ ಮತ್ತು ಮತ್ತು ಅನಿಯಮಿತ ಡೌನ್‌ಲೋಡ್‌ ಅಯ್ಕೆಯನ್ನು ನೀಡುತ್ತದೆ.

ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ 5000 ಕ್ಕೂ ಹೆಚ್ಚು ಚಲನಚಿತ್ರಗಳ ಸಂಗ್ರಹ ಇಲ್ಲಿದೆ. ಒರಿಜಿನಲ್ ಶೋ ಗಳು, 1500 ಕ್ಕೂ ಹೆಚ್ಚು ಕಿರುಚಿತ್ರಗಳು, 7500+ ಗಂಟೆಗಳ ಮಕ್ಕಳ ಮತ್ತು ಬಹು ಭಾಷೆಗಳ ಟಿವಿಯ ಕಾರ್ಯಕ್ರಮಗಳು ಮತ್ತು ಸಂಗೀತದಂಥ ವಿವಿಧ ವಿಭಾಗಗಳಲ್ಲಿ 150,000 ಕ್ಕೂ ಹೆಚ್ಚು ಕಿರು ವೀಡಿಯೊಗಳನ್ನು ವೀಕ್ಷಿಸಬಹುದು. ಚಲನಚಿತ್ರ, ಗಾಸಿಪ್, ಹಾಸ್ಯ, ಆಧ್ಯಾತ್ಮಿಕ ಇತ್ಯಾದಿಗಳೂ ಇಲ್ಲಿ ವೀಕ್ಷಣೆಗೆ ಲಭ್ಯ.

ಹಂಗಾಮಾ ಡಿಜಿಟಲ್ ಮೀಡಿಯಾದ ಸಿಒಒ ಸಿದ್ಧಾರ್ಥ ರಾಯ್, ''ಫೋನ್‌ಪೆಯೊಂದಿಗಿನ ನಮ್ಮ ಒಡನಾಟವು ಸಂಪರ್ಕಿತ ಡಿಜಿಟಲ್ ಇಕೋ ಸಿಸ್ಟಮ್ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮತ್ತೊಂದು ಹೆಜ್ಜೆಯಾಗಿದ್ದು ಅದು ಬಳಕೆದಾರರಿಗೆ ವಿವಿಧ ಆನ್‌ಲೈನ್ ಸೇವೆಗಳ ನಡುವೆ ತಡೆರಹಿತ ಏಕೀಕರಣವನ್ನು ಆನಂದಿಸಬಹುದು. ನಮ್ಮಈ ಹೊಸ ಪ್ರಯತ್ನದ ಪ್ರಯೋಜನವನ್ನು ಗ್ರಾಹಕರು ಮೆಚ್ಚುತ್ತಾರೆ ಮತ್ತು ನಮ್ಮ ಪ್ರೀಮಿಯಂ ಸೇವೆಗಳನ್ನು ಬಳಸುವ ಸುಲಭದ ಸೇವೆಗಳನ್ನು ಒಪ್ಪಿಕೊಳ್ಳುತ್ತಾರೆ ಎಂಬ ದೃಢ ನಂಬಿಕೆ ನಮಗಿದೆ''ಎಂದರು.

ಫೋನ್‌ಪೆಯ ವ್ಯವಹಾರ ಅಭಿವೃದ್ಧಿ ನಿರ್ದೇಶಕ ಅಂಕಿತ್ ಗೌರ್, ''ಆನ್‌ಲೈನ್ ಮನರಂಜನಾ ಆಯ್ಕೆಗಳಿಗಾಗಿ ಬೇಡಿಕೆ ಹೆಚ್ಚುತ್ತಿದೆ, ಮನೆಯಲ್ಲೇ ಕುಳಿತು ಎಲ್ಲದರ ವೀಕ್ಷಣೆಗೆ ಅವಕಾಶ ಸಿಗುವುದೂ ಅದಕ್ಕೊಂದು ಕಾರಣವಿರಬಹುದು. ಇದಕ್ಕೆ ಅನುಗುಣವಾಗಿ ನಮ್ಮ 23ಕೋಟಿ ಬಳಕೆದಾರರಿಗೆ ತಮ್ಮ ಖರೀದಿಯನ್ನು ನವೀಕರಿಸಲು ಮತ್ತು ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಚಂದಾದಾರಿಕೆಗಳನ್ನು ಸಕ್ರಿಯಗೊಳಿಸಲು ಮತ್ತು ಜಾಹಿರಾತು ರಹಿತ ಮಾರ್ಗವನ್ನು ಸುಗಮಗೊಳಿಸಲು ಹಂಗಾಮಾದೊಂದಿಗಿನ ನಮ್ಮ ಸಹಯೋಗವು ಮಹತ್ತರ ಹೆಜ್ಜೆಯಾಗಿದೆ"ಎಂದರು.

English summary
Hungama, India’s leading digital entertainment company, now allows users to subscribe to Hungama Music, its music streaming platform and Hungama Play, its video-on-demand service, directly from PhonePe, India’s leading digital payments platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X