ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

25,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಅಕ್ಸೆಂಚರ್

|
Google Oneindia Kannada News

ನವದೆಹಲಿ, ಆಗಸ್ಟ್‌ 27: ಕೊರೊನಾವೈರಸ್ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್ ಪರಿಣಾಮ ಇನ್ನೂ ಹಲವಾರು ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಲೇ ಇದ್ದು, ಐಟಿ ಕಂಪನಿ ಅಕ್ಸೆಂಚರ್ ಜಾಗತಿಕವಾಗಿ ತನ್ನ ಉದ್ಯೋಗಿಗಳಲ್ಲಿ ಶೇಕಡಾ 5ರಷ್ಟು ಜನರನ್ನು ವಜಾಗೊಳಿಸಲು ಮುಂದಾಗಿದೆ.

Recommended Video

Accenture 25,000 ಕೆಲಸಕ್ಕೆ ಬೀಳಲಿದೆ ಕತ್ತರಿ ಎಚ್ಚರ!! | Oneindia Kannada

ವಿಶ್ವದಾದ್ಯಂತ ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಗ್ಲೋಬಲ್ ಪ್ರೊಫೆಷನಲ್ ಸರ್ವೀಸಸ್ ಕಂಪನಿಯಾದ ಅಕ್ಸೆಂಚರ್ ತನ್ನ ಕಡಿಮೆ ಕಾರ್ಯನಿರತ ಉದ್ಯೋಗಿಗಳ ಪೈಕಿ ಕನಿಷ್ಠ ಶೇಕಡಾ 5ರಷ್ಟು ಅಂದರೆ 25,000 ನೌಕರರನ್ನು ಕಡಿತಗೊಳಿಸಲಿದೆ. ಇದರಿಂದ ಭಾರತದಲ್ಲಿನ ಉದ್ಯೋಗಿಗಳು ಪರಿಣಾಮ ಎದುರಿಸಬೇಕಾಗುತ್ತದೆ.

2 ಸಾವಿರ ಉದ್ಯೋಗಿಗಳ ನೇಮಕಾತಿ ಮಾಡಲಿದೆ ಓಲಾ2 ಸಾವಿರ ಉದ್ಯೋಗಿಗಳ ನೇಮಕಾತಿ ಮಾಡಲಿದೆ ಓಲಾ

ಆಗಸ್ಟ್ ಮಧ್ಯದಲ್ಲಿ ಅಕ್ಸೆಂಚರ್ ಸಿಇಒ ಜೂಲಿ ಸ್ವೀಟ್ ಅವರ ಆಂತರಿಕ ಸಿಬ್ಬಂದಿ ಸಭೆಯನ್ನು ಉಲ್ಲೇಖಿಸಿ ಆಸ್ಟ್ರೇಲಿಯನ್ ಫೈನಾನ್ಷಿಯಲ್ ರಿವ್ಯೂ (ಎಎಫ್ಆರ್) ಯ ವರದಿಯು ಇದನ್ನು ಮೊದಲು ವರದಿ ಮಾಡಿದೆ.

Accenture Lay Off 25,000 Employees: Indian Set To Lose Jobs

"ಪ್ರತಿ ವರ್ಷ ಉದ್ಯೋಗಿಗಳ ಕಾರ್ಯಕ್ಷಮತೆ ಬಗ್ಗೆ ಪರಾಮರ್ಶೆ ನಡೆಯುತ್ತದೆ. ಕಳಪೆ ಕಾರ್ಯಕ್ಷಮತೆಯ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಡೆಯುತ್ತಾ ಬಂದಿದೆ,'' ಎಂದು ಕಂಪನಿ ಪ್ರತಿಕ್ರಿಯಿಸಿದೆ.

ಸುಮಾರು 2 ಲಕ್ಷ ಅಕ್ಸೆಂಚರ್ ಉದ್ಯೋಗಿಗಳನ್ನು ಹೊಂದಿರುವ ಭಾರತ, ಈ ಕ್ರಮದಿಂದ ಸಾವಿರಾರು ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

English summary
Global professional services company Accenture which has over 5 lakh employees worldwide is to cut at least 5 per cent of its 'low-performing workforce and thousands of Indians are set to lose jobs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X