ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸೆಂಚರ್ ಪ್ರಗತಿ ಎದುರು ಭಾರತದ 5 ಪ್ರಮುಖ ಐಟಿ ಸಂಸ್ಥೆಗಳು ಕಂಗಾಲು

|
Google Oneindia Kannada News

ನವದೆಹಲಿ, ಅಕ್ಟೋಬರ್ 8: ಆಗಸ್ಟ್ 2018ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಆಕ್ಸೆಂಚರ್ ಕಂಪೆನಿಯು ಶೇ 13.5ರಷ್ಟು ಬೆಳವಣಿಗೆ ಕಂಡಿದ್ದು, 4.72 ಬಿಲಿಯನ್ ಡಾಲರ್ ಏರಿಕೆ ಆದಾಯ ಪಡೆದುಕೊಂಡಿದೆ.

ಇದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಕಾರ್ಪ್, ಇನ್ಫೋಸಿಸ್ ಲಿಮಿಟೆಡ್ ಮತ್ತು ವಿಪ್ರೋ ಲಿಮಿಟೆಡ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪೆನಿಗಳ ಒಟ್ಟು ಹೊಸ ಆದಾಯವಾದ 4.78 ಬಿಲಿಯನ್ ಡಾಲರ್‌ಗಿಂತ ತುಸು ಕಡಿಮೆ ಆದಾಯವಾಗಿದೆ.

ಸಂಸ್ಥೆಯು ತೀವ್ರ ಸ್ವರೂಪದಲ್ಲಿ ಅಳವಡಿಸಿಕೊಂಡ ನೂತನ ಕಾರ್ಯತಂತ್ರಗಳ ಕಾರಣದಿಂದ ದೊಡ್ಡ ಪ್ರಮಾಣದ ಬೆಳವಣಿಗೆ ಸಾಧಿಸಿದೆ. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರಗಳನ್ನು ಗುರುತಿಸಿ ಅಲ್ಲಿ ಹೆಚ್ಚಿನ ವ್ಯವಹಾರವನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿದೆ.

ಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿ

ಸಾಮಾಜಿಕ, ಮೊಬೈಲ್, ಅನಾಲಿಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಇಂಟರ್ನೆಟ್ ಸಂಬಂಧಿ ವಲಯಗಳಲ್ಲಿ ಆಕ್ಸೆಂಚರ್ ಪ್ರಗತಿ ಸಾಧಿಸಿದೆ.

39.57 ಬಿಲಿಯನ್ ಡಾಲರ್ ಆದಾಯ

39.57 ಬಿಲಿಯನ್ ಡಾಲರ್ ಆದಾಯ

ಹೊಸ ವ್ಯವಹಾರದಡಿ ಡಿಜಿಟಲ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸೈಬರ್ ಸೆಕ್ಯುರಿಟಿಯಲ್ಲಿಯೇ 23 ಬಿಲಿಯನ್ ಡಾಲರ್ ಅಥವಾ ಶೇ 60ರಷ್ಟು ವಾರ್ಷಿಕ ಆದಾಯವನ್ನು ಪಡೆದುಕೊಂಡಿದೆ. ಕನ್ಸಲ್ಟಿಂಗ್ ವಿಭಾಗದಲ್ಲಿಯೂ ಉತ್ತಮ ಪ್ರಗತಿ ಸಾಧಿಸಿರುವ ಕಂಪೆನಿ, ವರ್ಷಾಂತ್ಯಕ್ಕೆ 39.57 ಬಿಲಿಯನ್ ಡಾಲರ್ ಆದಾಯ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸ್ವದೇಶಿ ಐಟಿ ಕಂಪೆನಿಗಳು ಡಿಜಿಟಲ್ ಖಾತೆಯಲ್ಲಿ ಶೇ 22-25ರ ವರೆಗೆ ವ್ಯವಹಾರದಲ್ಲಿನ ಪ್ರಗತಿ ಘೋಷಿಸಿವೆ.

ಕಾಂಪ್ಲಾನ್ ಖರೀದಿಗಾಗಿ ವಿಪ್ರೋ, ಐಟಿಸಿ, ಕಾಡಿಲಾ ಪೈಪೋಟಿ ಕಾಂಪ್ಲಾನ್ ಖರೀದಿಗಾಗಿ ವಿಪ್ರೋ, ಐಟಿಸಿ, ಕಾಡಿಲಾ ಪೈಪೋಟಿ

1.8 ಬಿಲಿಯನ್ ಡಾಲರ್ ಖರೀದಿ ವೆಚ್ಚ

1.8 ಬಿಲಿಯನ್ ಡಾಲರ್ ಖರೀದಿ ವೆಚ್ಚ

ಕಳೆದ ವರ್ಷ ಆಕ್ಸೆಂಚರ್ ಕಂಪೆನಿಗಳನ್ನು ಖರೀದಿಸಲು 750 ಮಿಲಿಯನ್ ಡಾಲರ್ ವಿನಿಯೋಗಿಸಿತ್ತು. 2016-17ರಲ್ಲಿ ಕಂಪೆನಿಗಳ ಖರೀದಿಗೆ 1.8 ಬಿಲಿಯನ್ ಡಾಲರ್ ವೆಚ್ಚ ಮಾಡಿತ್ತು. 2018-19ರಲ್ಲಿ ಮತ್ತೆ ಖರೀದಿಗೆ ಹೂಡಿಕೆ ಮಾಡಲು ಅದು ಮುಂದಾಗಿದೆ.

'ನಮ್ಮ ಬಂಡವಾಳ ಹಂಚಿಕೆ ಕಾರ್ಯತಂತ್ರದ ಭಾಗವಾಗಿ 1.5 ಬಿಲಿಯನ್ ಡಾಲರ್ ವೆಚ್ಚ ಮಾಡಲು ಉದ್ದೇಶಿಸಿದ್ದೇವೆ. ಸೂಕ್ತ ಅವಕಾಶ ಮತ್ತು ಸೂಕ್ತ ಸಂದರ್ಭಗಳು ದೊರೆತರೆ ಖಂಡಿತವಾಗಿ ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಹೆಚ್ಚಿಸಲು ಸಿದ್ಧ' ಎಂದು ಆಕ್ಸೆಂಚರ್‌ನ ಮುಖ್ಯ ಹಣಕಾಸು ಅಧಿಕಾರಿ ಡೇವಿಡ್ ರೋಲ್ಯಾಂಡ್ ತಿಳಿಸಿದ್ದಾರೆ.

ರು. 8 ಲಕ್ಷ ಕೋಟಿ ದಾಟಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಬಂಡವಾಳ ಮೌಲ್ಯ ರು. 8 ಲಕ್ಷ ಕೋಟಿ ದಾಟಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಬಂಡವಾಳ ಮೌಲ್ಯ

34,309 ಉದ್ಯೋಗಿಗಳ ನೇಮಕ

34,309 ಉದ್ಯೋಗಿಗಳ ನೇಮಕ

ಕಳೆದ ವರ್ಷ ಆಕ್ಸೆಂಚರ್ 34,309 ಉದ್ಯೋಗಿಗಳನ್ನು ತೆಗದುಕೊಂಡಿದೆ. ಸಂಸ್ಥೆಯಲ್ಲಿ ಒಟ್ಟು 4,59,178 ಉದ್ಯೋಗಿಗಳಿದ್ದಾರೆ. ಕಾಗ್ನಿಜೆಂಟ್ ಮತ್ತು ಭಾರತದ ಇತರೆ ಬೃಹತ್ ಐಟಿ ಸಂಸ್ಥೆಗಳು 2017-18ನೇ ಸಾಲಿನಲ್ಲಿ ಕೇವಲ 13,772 ಉದ್ಯೋಗಿಗಳ ನೇಮಕಾತಿ ಮಾಡಿಕೊಂಡಿವೆ.

ಆಕ್ಸೆಂಚರ್ ಸೆಪ್ಟೆಂಬರ್‌ನಿಂದ ಆಗಸ್ಟ್ ಅವಧಿಯನ್ನು ಹಣಕಾಸು ವರ್ಷವೆಂದು ಪರಿಗಣಿಸುತ್ತದೆ. ಭಾರತದ ಐಟಿ ಸಂಸ್ಥೆಗಳು ಏಪ್ರಿಲ್‌ನಿಂದ ಮಾರ್ಚ್‌ ಅವಧಿಯನ್ನು ಹಣಕಾಸು ವರ್ಷವೆಂದು ಪರಿಗಣಿಸುತ್ತವೆ. ಕಾಗ್ನಿಜೆಂಟ್ ಜನವರಿಯಿಂದ ಡಿಸೆಂಬರ್‌ವರೆಗೆ ಹಣಕಾಸು ವರ್ಷದ ಲೆಕ್ಕಾಚಾರ ಮಾಡುತ್ತದೆ.

70 ಕಂಪೆನಿಗಳ ಖರೀದಿ

70 ಕಂಪೆನಿಗಳ ಖರೀದಿ

ಕಳೆದ ಮೂರು ವರ್ಷಗಳಲ್ಲಿ ಆಕ್ಸೆಂಚರ್ 70 ಕಂಪೆನಿಗಳನ್ನು ಖರೀದಿಸಲು 3.4 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಇದು ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋಗಳು 2014ರ ಏಪ್ರಿಲ್ ಒಂದರಿಂದ ಕಂಪೆನಿ ಖರೀದಿಗೆ ಹೂಡಿಕೆ ಮಾಡಿರುವ ಒಟ್ಟಾರೆ ಮೊತ್ತ 1.58 ಬಿಲಿಯನ್ ಡಾಲರ್ ಮಾತ್ರ.

ಇದಕ್ಕೂ ಮೊದಲು ಎರಡು ಕಂಪೆನಿಗಳು ಮಾತ್ರ ಒಂದು ವರ್ಷದಲ್ಲಿ 2 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಹೊಸ ವ್ಯವಹಾರ ನಡೆಸಿದ್ದವು. 2015ರಲ್ಲಿ ಕಾಗ್ನಿಜೆಂಟ್ 2.15 ಬಿಲಿಯನ್ ಡಾಲರ್ ಮತ್ತು 2015ರ ಮಾರ್ಚ್ ಅಂತ್ಯದಲ್ಲಿ ಟಿಸಿಎಸ್ 2 ಬಿಲಿಯನ್ ಡಾಲರ್ ನವ ವ್ಯವಹಾರ ಆದಾಯ ಪಡೆದುಕೊಂಡಿದ್ದವು.

24,047 ಉದ್ಯೋಗಿಗಳ ನೇಮಕ

24,047 ಉದ್ಯೋಗಿಗಳ ನೇಮಕ

ಪ್ರಸಕ್ತ ಹಣಕಾಸು ವರ್ಷದಲ್ಲಿ ಸ್ವದೇಶಿ ಐಟಿ ಕಂಪೆನಿಗಳು ಉತ್ತಮ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಟಿಎಸಿಎಸ್ ಇದುವರೆಗೂ ವಾರ್ಷಿಕ ಅಥವಾ ತ್ರೈಮಾಸಿಕ ಮಾರ್ಗದರ್ಶಿಯನ್ನು ಹೊರಡಿಸಿಲ್ಲ. ಆದರೆ, ಅದರ ಆಡಳಿತ ವರ್ಗವು ಈ ವರ್ಷದ ಎರಡಂಕಿ ಬೆಳವಣಿಗೆಯ ಗುರಿ ಹೊಂದಿವೆ. ಎಲ್ಲ ಕಂಪೆನಿಗಳಿಂದಲೂ ಉದ್ಯೋಗ ನೇಮಕಾತಿ ನಡೆಯುತ್ತಿರುವುದು ಉತ್ತೇಜನಾಕಾರಿ ಬೆಳವಣಿಕೆಯಾಗಿದೆ.

ಭಾರತದ ಐದು ಪ್ರಮುಖ ಐಟಿ ಸಂಸ್ಥೆಗಳು ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 24,047 ಉದ್ಯೋಗಿಗಳನ್ನು ನೇಮಿಸಿಕೊಂಡಿವೆ. ಕಳೆದ ವರ್ಷ ಒಟ್ಟು ಕೇವಲ 13,772 ಮಂದಿಗೆ ಉದ್ಯೋಗ ನೀಡಿತ್ತು. ಕಳೆದ ಮೂರು ವರ್ಷಗಳಲ್ಲಿ ಐಟಿ ಉದ್ಯಮ ತನ್ನ ಅತ್ಯಂತ ವೇಗದ ಬೆಳವಣಿಗೆಯನ್ನು ಸಾಧಿಸಲು ಸಿದ್ಧತೆ ನಡೆಸಿದೆ ಎಂದು ಅನೇಕ ಪರಿಣತರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

English summary
Accenture Plc reported that $4.72 billion growth in incremental revenue in the financial year august 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X