ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೀರ್ ಖಾನ್ ನನ್ನು 'ಅಮೀರ'ನನ್ನಾಗಿಸಿದ ಬ್ರ್ಯಾಂಡ್ ಗಳು

By Mahesh
|
Google Oneindia Kannada News

ಬೆಂಗಳೂರು, ನ.25: ಬಾಲಿವುಡ್ ನಟ ಅಮೀರ್ ಖಾನ್ ಅವರ ಅಸಹಿಷ್ಣುತೆ ಬಗ್ಗೆ ಹೇಳಿಕೆ ನಾನಾ ರೂಪದ ಪ್ರತಿಕ್ರಿಯೆಗಳು ಇನ್ನೂ ಹರಿದು ಬರುತ್ತಲೇ ಇದೆ. ಈ ನಡುವೆ ಅಮೀರ್ ಖಾನ್ ರಾಯಭಾರಿಯಾಗಿರುವ ಸಂಸ್ಥೆಗಳಿಗೆ ಇದರಿಂದ ಕೊಂಚ ಆತಂಕ ಶುರುವಾಗಿದೆ.

ಈಗಾಗಲೇ ಸ್ನಾಪ್ ಡೀಲ್ ಅಪ್ಲಿಕೇಷನ್ ಅನ್ ಇನ್ ಸ್ಟಾಲ್ ನಿರೀಕ್ಷೆಗೂ ಮೀರಿ ವ್ಯಾಪಿಸುತ್ತಿದೆ. 'ಅಯ್ಯೋ ರಾಯಭಾರಿ ಮುಖ ನೋಡಿಕೊಂಡು ಉತ್ಪನ್ನ ಖರೀದಿಸುವ ಕಾಲ ಇದಲ್ಲ. ಉತ್ಪನ್ನ ಹಾಗೂ ಸೇವೆ ಪರಿಗಣಿಸಿ' ಎಂದು ಫ್ಲಿಪ್ ಕಾರ್ಟ್ ಸಂಸ್ಥೆ ಕಡೆಯಿಂದ ಸಹಾನುಭೂತಿ ಟ್ವೀಟ್ ಬಂದರೂ ಅಮೀರ್ ಅವರು ಯಾವ ಯಾವ ಉತ್ಪನ್ನಗಳ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಹುಡುಕಾಟ ಆರಂಭವಾಗಿದೆ.

50 ವರ್ಷ ವಯಸ್ಸಿನ ಅಮೀರ್ ಖಾನ್ ಅವರ ಮಾತಿಗೆ ಒಂದು ತೂಕವಿರುತ್ತದೆ. ಸತ್ಯ ಮೇವ ಜಯತೇ ಎಂಬ ಉತ್ತಮ ಕಾರ್ಯಕ್ರಮ ಮಾಡಿದಾತ. ನದಿ ನೀರು ಬಚಾವೋ ಎಂದು ಮೇಧಾ ಪಾಟ್ಕರ್ ಜೊತೆ ಹೋರಾಟಕ್ಕಿಳಿದವನು, ದೇಶಭಕ್ತಿ ಸಾರುವ ಚಿತ್ರಗಳಲ್ಲಿ ನಟಿಸಿದಾತ ಎಂದೆಲ್ಲ ಜನರಿಗೆ ನಂಬಿಕೆ ಇದೆ.

2003ರಲ್ಲಿ ಪದ್ಮಶ್ರೀ ಹಾಗೂ 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಅಮೀರ್ ಅವರು ಇತ್ತೀಚೆಗೆ ಸ್ನಾಪ್ ಡೀಲ್ ಇ ಕಾಮರ್ಸ್ ಆನ್ ಲೈನ್ ರೀಟೈಲರ್ ಸಂಸ್ಥೆ ಜೊತೆ ಕೈಜೋಡಿಸಿದ್ದರು. ಈಗ #NoToSnapdeal #AppWapsi ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಶುರುವಾದ ಮೇಲೆ ಸ್ನಾಪ್ ಡೀಲ್ ಗೆ ಭಾರಿ ನಷ್ಟವಾಗುತ್ತಿದೆ. ಉಳಿದ ಸಂಸ್ಥೆಗಳು ಆತಂಕಕ್ಕೀಡಾಗಿವೆ. ಅಮೀರ್ ಖಾನ್ ಅವರು ರಾಯಭಾರಿಯಾಗಿರುವ ಇತರೆ ಸಂಸ್ಥೆಗಳ ಬಗ್ಗೆ ವಿಡಿಯೋ ಮುಂದೆ ನೋಡಿ...

ನಂಬಿಕೆಗೆ ಪೆಟ್ಟು ಬಿದ್ದ ಕಾರಣ ಜನ ತಿರುಗಿಬಿದ್ದರು

ನಂಬಿಕೆಗೆ ಪೆಟ್ಟು ಬಿದ್ದ ಕಾರಣ ಜನ ತಿರುಗಿಬಿದ್ದರು

ಅಮೀರ್ ಖಾನ್ ಬಗ್ಗೆ ಇದ್ದ ನಂಬಿಕೆಗೆ ಪೆಟ್ಟು ಬಿದ್ದ ಕಾರಣ ಜನ ರೊಚ್ಚಿಗೊದ್ದಿದ್ದಾರೆ. ಅಮೀರ್ ಹೇಳಿಕೆ ಎಷ್ಟರಮಟ್ಟಿಗೆ ಅರ್ಥವಾಯಿತು ಎಂಬುದು ಚರ್ಚೆಯಾಗಲೇ ಇಲ್ಲ. ಅಮೀರ್ ರನ್ನು ನಿಂದಿಸಿ ಅನುಪಮ್ ಖೇರ್, ರಾಮ್ ಗೋಪಾಲ್ ವರ್ಮಾ, ಉಪೇಂದ್ರ, ಪರೇಶ್ ರಾವಲ್, ರವೀನಾ ಟಂಡನ್ ಸೇರಿದಂತೆ ಹಲವಾರು ಸಿನಿಮಾ ರಂಗದವರೇ ಟ್ವೀಟ್ ಮಾಡಿದ್ದರು.

ಸ್ನಾಪ್ ಡೀಲ್ ಜಾಹೀರಾತು ಬಗ್ಗೆ ಟ್ವೀಟ್

ಸ್ನಾಪ್ ಡೀಲ್ ಅಪ್ಲಿಕೇಷನ್ ಅನ್ ಇನ್ ಸ್ಟಾಲ್ ಮಾಡಿ ಎಂದು ಜಾಹೀರಾತು ಬಗ್ಗೆ ಟ್ವೀಟ್.

ದಿಲ್ ಕಾ ಡೀಲ್ ಸ್ನಾಪ್ ಡೀಲ್ ಆಡ್

ದಿಲ್ ಕಾ ಡೀಲ್ ಸ್ನಾಪ್ ಡೀಲ್ ಎಂದು ಜಾಹೀರಾತಿನಲ್ಲಿ ಕಾಣಿಸಿಕೊಂಡ ಅಮೀರ್.

ಸ್ಯಾಮ್ ಸಂಗ್ ಗುರು ಮೊಬೈಲ್ ಆಡ್

ಸ್ಯಾಮ್ ಸಂಗ್ ಗುರು ಮೊಬೈಲ್ ಜಾಹೀರಾತಿನಲ್ಲಿ ಅಮೀರ್ ಖಾನ್.

ಟಾಟಾ ಸ್ಕೈ ಡಿಟಿಎಚ್ ಜಾಹೀರಾತು

ಟಾಟಾ ಸ್ಕೈ ಡಿಟಿಎಚ್ ಯೂನಿವರ್ಸಲ್ ರಿಮೋಟ್ ಜಾಹೀರಾತು.

ಕೋಕಾಕೋಲಾ ಆಡ್ ನಲ್ಲಿ ಅಮೀರ್

ಕೋಕಾಕೋಲಾ ತಂಪು ಪಾನೀಯದ ಪ್ರಚಾರಕ್ಕಾಗಿ ವಿಶಿಷ್ಟ ಜಾಹೀರಾತಿನಲ್ಲಿ ಅಮೀರ್ ಖಾನ್.

ಗೋದ್ರೇಜ್ ಜಾಹೀರಾತು

ಗೋದ್ರೇಜ್ ಸಂಸ್ಥೆಯ ಮ್ಯಾಟ್ರಿಕ್ಸ್ ಲಾಕ್ ಜಾಹೀರಾತು

ಮಹೀಂದ್ರಾ ಸ್ಟಾಲಿಯೋ ಬ್ರ್ಯಾಂಡ್

ಮಹೀಂದ್ರಾ ಸ್ಟಾಲಿಯೋ ವಾಹನದ ಜಾಹೀರಾತಿನಲ್ಲಿ ಅಮೀರ್

ಇನ್ ಕ್ರೆಡಿಬಲ್ ಇಂಡಿಯಾ

ಅತಿಥಿದೇವೋಭವ ವಿದೇಶಿಯರಿಗೆ ಮರ್ಯಾದೆ ನೀಡುವ ಜಾಹೀರಾತು

rn

ಯುನಿಸೆಫ್ ಇಂಡಿಯಾ

ಯುನಿಸೆಫ್ ಇಂಡಿಯಾ ಕುಪೋಷಣೆ ಭಾರತ ಬಿಟ್ಟು ತೊಲಗು ಎಂದು 2011ರಿಂದ ಅಮೀರ್ ಖಾನ್ ಹೇಳುತ್ತಿದ್ದಾರೆ.

ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಅಮೀರ್

2012 ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಅಮೀರ್ ಅವರು ನಿರೂಪಕರಾಗಿ, ಸಾಂತ್ವಾನ ಹೇಳುವ ಅಣ್ಣನಾಗಿ ಅಮೀರ್ ಅವರು ಮನೆ ಮನೆ ತಲುಪಿದರು. ಟಿವಿ ಶೋ ಸಾಮಾಜಿಕ ಸಮಸ್ಯೆಗಳಾದ ಭ್ರೂಣ ಹತ್ಯೆ, ಮಹಿಳಾ ಸಬಲೀಕರಣ, ಶಿಶುಗಳ ಮೇಲೆ ಲೈಂಗಿಕ ಕಿರುಕುಳ, ಮರ್ಯಾದಾ ಹತ್ಯೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿತ್ತು.

English summary
Bollywood actor Aamir Khan, who on Monday, Nov 23, stirred a massive controversy that his family has considered to move out of India, citing the current intolerance situation prevailing in the country, has also dearly cost the brands that he endorses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X