ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು, ಮ್ಯೂಚುವಲ್ ಫಂಡ್ ಕೊಳ್ಳುವುದಕ್ಕೂ ಆಧಾರ್ ಕಡ್ಡಾಯ?

|
Google Oneindia Kannada News

ನವದೆಹಲಿ, ಆಗಸ್ಟ್ 10: ಇನ್ನುಮುಂದೆ ಷೇರು ಮತ್ತು ಮ್ಯೂಚುವಲ್ ಫಂಡ್ ಖರೀದಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಲಿದೆಯೇ?

ಹಣಕಾಸು ನಿಯತಕಾಲಿಕವೊಂದು ವರದಿ ಮಾಡಿರುವ ಪ್ರಕಾರ ಸರ್ಕಾರ ಮತ್ತು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (Securities and Exchange Board of India)ಯು ಹಣಕಾಸು ಮಾರುಕಟ್ಟೆಯ ವ್ಯವಹಾರಗಳಿಗೂ ಆಧಾರ್ ಲಿಂಕ್ ಮಾಡುವ ಚಿಂತನೆ ನಡೆಸುತ್ತಿದೆ.

ಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿ ಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿ

ಹಣಕಾಸು ಮಾರುಕಟ್ಟೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾದರೆ ಷೇರು ಮತ್ತು ಮ್ಯೂಚುವಲ್ ಫಂಡ್ ಖರೀದಿಸುವವರೂ ಆಧಾರ್ ವಿವರ ನೀಡಬೇಕಾಗುತ್ತದೆ.

ನೆನಪಿಡಿ, ಆಧಾರ್ ಗೆ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದು ನೆನಪಿಡಿ, ಆಧಾರ್ ಗೆ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದು

ಸ್ಟಾಕ್ ಎಕ್ಸ್ ಚೇಂಜ್ ಮಾರ್ಕೆಟ್ ಗಳ ಮೂಲಕ ಕಪ್ಪು ಹಣವನ್ನು ಬದಲಾಯಿಸಿಕೊಳ್ಳುವುದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಈ ವರದಿಯಲ್ಲಿ ಹೇಳಲಾಗಿದೆ.

ಪ್ಯಾನ್ ಸಾಕಾಗೋಲ್ಲ

ಪ್ಯಾನ್ ಸಾಕಾಗೋಲ್ಲ

ಹಣಕಾಸು ಮಾರುಕಟ್ಟೆ ವ್ಯವಹಾರದಲ್ಲಿ ಪ್ಯಾನ್ ನಂಬರ್ ಕಡ್ಡಾಯವಾಗಿದ್ದರೂ ಅಕ್ರಮ ವ್ಯವಹಾರಗಳನ್ನು ತಡೆಯುವುದಕ್ಕೆ ಕೇವಲ ಪ್ಯಾನ್ ನಂಬರ್ ಸಾಕಾಗುವುದಿಲ್ಲ. ಆದ್ದರಿಂದ ಆಧಾರ್ ನಂಬರ್ ಜೋಡಣೆಯ ಕುರಿತು ಚಿಂತನೆ ನಡೆಸಲಾಗುತ್ತಿದೆ.

ಪ್ಯಾನ್-ಆಧಾರ್ ಜೋಡಣೆ

ಪ್ಯಾನ್-ಆಧಾರ್ ಜೋಡಣೆ

ಜುಲೈ 1 ರಿಂದ ಅನುಷ್ಠಾನಕ್ಕೆ ಬರುವಂತೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ನಂಬರ್ ಗಳ ಜೋಡಣೆಯನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಈ ಬಾರಿ ಆದಾಯ ತೆರಿಗೆ ಕಟ್ಟುವವರು ಕಡ್ಡಾಯವಾಗಿ ಆಧಾರ್ -ಪ್ಯಾನ್ ಲಿಂಕ್ ಮಾಡಲೇಬೇಕೆಂದು ಸಹ ಸರ್ಕಾರ ಹೇಳಿತ್ತು. ಆಧಾರ್ ನೊಂದಿಗೆ ಲಿಂಕ್ ಆಗದ ಪ್ಯಾನ್ ಕಾರ್ಡ್ ಗಳನ್ನು ರದ್ದು ಮಾಡುವುದಾಗಿಯೂ ಹೇಳಿತ್ತು.

111 ಕೋಟಿ ಆಧಾರ್

111 ಕೋಟಿ ಆಧಾರ್

ಭಾರತದಲ್ಲಿ ಒಟ್ಟು 111 ಕೋಟಿ ಜನ ಆಧಾರ್ ಕಾರ್ಡ್ ಹೊಂದಿದ್ದರೆ, ಕೇವಲ 25 ಕೋಟಿ ಜನ ಮಾತ್ರವೇ ಪ್ಯಾನ್ ಕಾರ್ಡ್ ಹೊಂದಿದ್ದಾರೆ. ಆಧಾರ್-ಪ್ಯಾನ್ ಜೋಡಣೆಯ ನಂತರ ಪತ್ತೆಯಾದ 11.44 ಲಕ್ಷ ಪ್ಯಾನ್ ಕಾರ್ಡ್ ಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ.

ಪ್ಯಾನ್ ಕಾರ್ಡ್ ಪಡೆಯೋಕೂ ಆಧಾರ್ ಕಡ್ಡಾಯ

ಪ್ಯಾನ್ ಕಾರ್ಡ್ ಪಡೆಯೋಕೂ ಆಧಾರ್ ಕಡ್ಡಾಯ

ಸರ್ಕಾರ ತಿದ್ದುಪಡಿ ಮಾಡಿರುವ ಆದಾಯ ತೆರಿಗೆ ನಿಯಗಳ ಪ್ರಕಾರ ಇನ್ನು ಮುಂದೆ ಪ್ಯಾನ್ ಕಾರ್ಡ್ ಪಡೆಯುವುದಕ್ಕೂ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ. ಅಕ್ರಮ ನುಸುಳುಕೋರರು, ಹಣಕಾಸು ಅವ್ಯವಹಾರ, ಕಪ್ಪು ಹಣ ನಿಯಂತ್ರಣ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ, ಪ್ರತಿ ವ್ಯವಹಾರದಲ್ಲೂ ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡುವುದು ಅನಿವಾರ್ಯವಾಗಿದೆ ಎಂಬುದು ಸರ್ಕಾರದ ಅಭಿಪ್ರಾಯ.

English summary
Aadhaar will be made mandatory to buying shares and mutual funds? A financial daily reported thats Government and market regulator SEBI are planning to link aadhaar to financial market transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X