• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಧಾರ್ -ಪ್ಯಾನ್ ಜೋಡಣೆ ಗಡುವು ವಿಸ್ತರಣೆ, ಮುಂದೇನು?

By Mahesh
|

ಬೆಂಗಳೂರು, ಮಾರ್ಚ್ 28: ವಿಶಿಷ್ಟ ಗುರುತಿನ ಚೀಟಿ ಆಧಾರ್‌ ಸಂಖ್ಯೆ ಜತೆಗೆ ಶಾಶ್ವತ ಖಾತೆ ಸಂಖ್ಯೆ (PAN) ಜೋಡಣೆಯ ಮಾಡಲು ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಮಾರ್ಚ್ 31ರ ಬದಲಿಗೆ ಜೂನ್ 30ರ ತನಕ ಜೋಡಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಆನ್ ಲೈನ್ ನಲ್ಲಿ ಪ್ಯಾನ್​ಗೆ ಆಧಾರ್ ಜೋಡಿಸುವುದು ಹೇಗೆ?

ತೆರಿಗೆ ಇಲಾಖೆಯ ನೀತಿ ನಿರ್ಧಾರಕ ಮಂಡಳಿ-ನೇರ ತೆರಿಗೆಯ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದ ಗಡುವನ್ನು ವಿಸ್ತರಿಸಿದೆ. ಪ್ಯಾನ್‌ ಮತ್ತು ಆಧಾರ್‌ ಸಂಪರ್ಕಿಸಲು ಸರ್ಕಾರ ಇದುವರೆಗೆ ನಾಲ್ಕು ಬಾರಿ ಗಡುವು ವಿಸ್ತರಿಸಿದೆ. ಜುಲೈ 31, ಆಗಸ್ಟ್ 31 ಹಾಗೂ ಡಿಸೆಂಬರ್ 31 ಎಂದು ಗಡುವು ನೀಡಲಾಗಿತ್ತು.

ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?

ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಆಧಾರ್ ಹಾಗೂ ಪ್ಯಾನ್ ಜೋಡಣೆ ಅನಿವಾರ್ಯವಾಗಿದೆ. ಆಧಾರ್‌-ಪ್ಯಾನ್ ಜೋಡಣೆ ಮಾಡುವ ಗಡುವನ್ನು ಸುಪ್ರೀಂಕೋರ್ಟ್‌ ವಿಸ್ತರಣೆ ಮಾಡಿರುವ ಹಿನ್ನಲೆಯಲ್ಲಿ 'ಸಿಬಿಡಿಟಿ' ಈ ನಿರ್ಧಾರ ಪ್ರಕಟಿಸಿದೆ.

ಸಂವಿಧಾನ ಪೀಠವು, ಆಧಾರ್‌ ಕ್ರಮಬದ್ಧತೆ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಅಂತಿಮ ತೀರ್ಪು ನೀಡುವವರೆಗೆ ಗಡುವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಗಿದೆ.

ಐಟಿ ರಿಟರ್ನ್ಸ್ ಗೂ ಜೋಡಣೆ ಕಡ್ಡಾಯ

ಐಟಿ ರಿಟರ್ನ್ಸ್ ಗೂ ಜೋಡಣೆ ಕಡ್ಡಾಯ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 139 ಎಎ (2) ಪ್ರಕಾರ, 2017ರ ಜುಲೈ 1ರಂದು ಪ್ಯಾನ್‌ ಹೊಂದಿದವರು ಮತ್ತು ಆಧಾರ್‌ ಪಡೆಯಲು ಅರ್ಹರಾಗಿದ್ದರೆ, ತಮ್ಮ ಆಧಾರ್‌ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಗೆ (ಐ.ಟಿ ರಿಟರ್ನ್‌) ಮತ್ತು ಪ್ಯಾನ್‌ ಪಡೆಯಲು ಆಧಾರ್‌ ಸಂಖ್ಯೆ ಉಲ್ಲೇಖಿಸುವುದನ್ನು ಸರ್ಕಾರ ಈಗ ಕಡ್ಡಾಯ ಮಾಡಿದೆ.

ಎಷ್ಟು ಮಂದಿಯಿಂದ ಜೋಡಣೆ

ಎಷ್ಟು ಮಂದಿಯಿಂದ ಜೋಡಣೆ

ಮಾರ್ಚ್‌ 5ರವರೆಗಿನ ಮಾಹಿತಿ ಪ್ರಕಾರ, ವಿತರಣೆಯಾಗಿರುವ ಒಟ್ಟು 33 ಕೋಟಿ ಪ್ಯಾನ್‌ ಕಾರ್ಡ್‌ಗಳ ಪೈಕಿ, 16.65 ಕೋಟಿ ಪ್ಯಾನ್‌ಗಳನ್ನು ಆಧಾರ್‌ ಜತೆ ಜೋಡಿಸಲಾಗಿದೆ. ಸರ್ಕಾರಿ ಸವಲತ್ತು ಸೇವೆಯ ಫಲಾಕಾಂಕ್ಷಿಗಳಾಗಿದ್ದರೆ ಆಧಾರ್ ಕಡ್ಡಾಯವಾಗಿ ಜೋಡಣೆ ಮಾಡಿಕೊಳ್ಳಬೇಕಾಗುತ್ತದೆ. ಇ-ವ್ಯಾಲೆಟ್ ಬಳಕೆದಾರರು ತಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಇತರ ದಾಖಲಾತಿಗಳನ್ನು ಲಿಂಕ್ ಮಾಡದೇ ಇದ್ದಲ್ಲಿ ಇ-ವ್ಯಾಲೆಟ್ ಸೇವೆ ಸ್ಥಗಿತಗೊಳ್ಳಲಿದೆ.

ಸರ್ಕಾರದ ಕಲ್ಯಾಣ ಕಾರ್ಯಕ್ರಮಕ್ಕೆ ವಿಸ್ತರಣೆ ಇಲ್ಲ

ಸರ್ಕಾರದ ಕಲ್ಯಾಣ ಕಾರ್ಯಕ್ರಮಕ್ಕೆ ವಿಸ್ತರಣೆ ಇಲ್ಲ

ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್‌ ಜೋಡಿಸಲು ಮಾರ್ಚ್‌ 31ಕ್ಕೆ ಕೊನೆಗೊಳ್ಳುತ್ತಿದ್ದ ಗಡುವನ್ನು ವಿಸ್ತರಿಸುವ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಪ್ಯಾನ್‌ ಮತ್ತು ಆಧಾರ್‌ ಸಂಪರ್ಕಿಸಲು ಸರ್ಕಾರ ಇದುವರೆಗೆ ನಾಲ್ಕು ಬಾರಿ ಗಡುವು ವಿಸ್ತರಿಸಿದೆ. ಬ್ಯಾಂಕ್/ ಆರ್ಥಿಕ ಸಂಸ್ಥೆಯಲ್ಲಿನ ಖಾತೆಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಅನಿವಾರ್ಯವಾಗಿದೆ. ಗ್ರಾಹಕರು ತಮ್ಮ ಕೆವೈಸಿ (Know your Customer) ದಾಖಲೆ ಜತೆಗೆ ಆಧಾರ್ ನಂಬರ್ ನೀಡುವುದು ಕಡ್ಡಾಯವಾಗಿದೆ. ಬ್ಯಾಂಕಿನಿಂದ ಯಾವುದೇ ಸೇವೆ, ಸಾಲ ಪಡೆಯಲು ಆಧಾರ್ ನಂಬರ್ ಕಡ್ಡಾಯವಾಗಿದೆ

ಬ್ಯಾಂಕಿಂಗ್ ವ್ಯವಹಾರಕ್ಕೆ ಆಧಾರ್ ಕಡ್ಡಾಯ

ಬ್ಯಾಂಕಿಂಗ್ ವ್ಯವಹಾರಕ್ಕೆ ಆಧಾರ್ ಕಡ್ಡಾಯ

ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಆಧಾರ್‌ಗೆ ಜೋಡಣೆ ಮಾಡುವುದನ್ನು ಅನಿರ್ದಿಷ್ಟ ಕಾಲಾವಧಿಗೆ ಸುಪ್ರೀಂಕೋರ್ಟ್‌ ಮಾರ್ಚ್ 13 ರಂದು ವಿಸ್ತರಿಸಿದೆ. ಆದರೆ, ಇತರೆ ಬ್ಯಾಂಕಿಂಗ್ ವ್ಯವಹಾರಕ್ಕೆ ಆಧಾರ್ ಕಡ್ಡಾಯವಾಗಿದೆ. ಬ್ಯಾಂಕ್/ ಆರ್ಥಿಕ ಸಂಸ್ಥೆಯಲ್ಲಿನ ಖಾತೆಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಅನಿವಾರ್ಯವಾಗಿದೆ. ಗ್ರಾಹಕರು ತಮ್ಮ ಕೆವೈಸಿ (Know your Customer) ದಾಖಲೆ ಜತೆಗೆ ಆಧಾರ್ ನಂಬರ್ ನೀಡುವುದು ಕಡ್ಡಾಯವಾಗಿದೆ. ಬ್ಯಾಂಕಿನಿಂದ ಯಾವುದೇ ಸೇವೆ, ಸಾಲ ಪಡೆಯಲು ಆಧಾರ್ ನಂಬರ್ ಕಡ್ಡಾಯವಾಗಿದೆ

English summary
Aadhaar-PAN linking: Aadhaar-PAN Linking Deadline Extended to June 30. Earlier deadlines for linking the two were July 31, August 31 and December 31, 2017, with the last being March 31 this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X