ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ವಿಮರ್ಶೆ ಹಾಕಿದರೆ ಇ-ಕಾಮರ್ಸ್ ಸಂಸ್ಥೆಗಳಿಗೆ ಬೀಳಲಿದೆ 50 ಲಕ್ಷ ದಂಡ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 16: ಗ್ರಾಹಕ ವ್ಯವಹಾರಗಳ ಇಲಾಖೆಯು ಇ-ಕಾಮರ್ಸ್ ಕಂಪೆನಿಗಳಿಗೆ ಮೂಗುದಾರ ಹಾಕಲು ಅಖಾಡ ಸಿದ್ದಪಡಿಸಿಕೊಂಡಿದ್ದು ಇನ್ನು ಮುಂದೆ ನಕಲಿ ವಿಮರ್ಶೆಯನ್ನು ಪೋಸ್ಟ್‌ ಮಾಡಿದರೆ ಭಾರಿ ದಂಡ ಅಂದರೆ ಬರೋಬ್ಬರಿ 50 ಲಕ್ಷದವರೆಗೂ ತೆರಬೇಕಾಗುತ್ತದೆ.

ಮೂಲಗಳ ಪ್ರಕಾರ, ಗ್ರಾಹಕ ವ್ಯವಹಾರಗಳ ಇಲಾಖೆಯು ರಚಿಸಿದ ಸಮಿತಿಯು ನಕಲಿ ವಿಮರ್ಶೆಗಳಿಗೆ ಸಂಬಂಧಿಸಿದ ಮಾನದಂಡಗಳಲ್ಲಿ ಬದಲಾವಣೆಗಳನ್ನು ಅಂತಿಮಗೊಳಿಸುತ್ತಿದೆ. ಇದನ್ನು 2021 ರಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್‌) ರೂಪಿಸಲಾಗಿದೆ.

ಹಬ್ಬದ ಸೀಸನ್‌ನಲ್ಲಿ ಹಣದುಬ್ಬರ: ಪೂರೈಕೆ ಕುಸಿತ, ಬೆಲೆ ಏರಿಕೆ ಹೊರೆಹಬ್ಬದ ಸೀಸನ್‌ನಲ್ಲಿ ಹಣದುಬ್ಬರ: ಪೂರೈಕೆ ಕುಸಿತ, ಬೆಲೆ ಏರಿಕೆ ಹೊರೆ

ಒಮ್ಮೆ ಈ ಮಾನದಂಡಗಳಲ್ಲಿ ಬದಲಾವಣೆಗಳನ್ನು ಮಾಡಿದರೆ, ಅವು ಕಡ್ಡಾಯವಾಗುತ್ತವೆ. ನಕಲಿ ವಿಮರ್ಶೆಗಳನ್ನು ಪೋಸ್ಟ್ ಮಾಡಲು ಮತ್ತು ಪ್ರತಿಸ್ಪರ್ಧಿ ಘಟಕಗಳ ನಕಲಿ ವಿಮರ್ಶೆಗಳನ್ನು ಪಡೆಯಲು ಮುಂದಾದರೆ ಇ-ಕಾಮರ್ಸ್ ಸಂಸ್ಥೆಗಳಿಗೆ ದಂಡವನ್ನು ವಿಧಿಸುತ್ತವೆ. ಹಲವಾರು ಇ-ಕಾಮರ್ಸ್ ಕಂಪನಿಗಳು ಪರಸ್ಪರ ವಿರುದ್ಧವಾಗಿ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತವೆ. ಹೀಗಾಗಿ ಈ ಕ್ರಮಕ್ಕೆ ಗ್ರಾಹಕ ವ್ಯವಹಾರಗಳ ಇಲಾಖೆ ಮುಂದಾಗಿದೆ.

A fine of 50 lakhs will be imposed if a fake review is posted by e commerce

ನಕಲಿ ವಿಮರ್ಶೆಗಳ ಮೇಲಿನ ಬಿಐಎಸ್‌ ಮಾನದಂಡಗಳು, ಈಗಿನಂತೆ, ಸ್ವಯಂಪ್ರೇರಿತವಾಗಿವೆ. ಗ್ರಾಹಕ ಸಂರಕ್ಷಣಾ ಕಾಯಿದೆ 2019 ರ ನಿಬಂಧನೆಗಳ ಪ್ರಕಾರ, ಉತ್ಪನ್ನಗಳ ನಕಲಿ ವಿಮರ್ಶೆಗಳನ್ನು ಪೋಸ್ಟ್ ಮಾಡಲು ಮತ್ತು ಹೆಚ್ಚಿನ ರೇಟಿಂಗ್‌ಗಳನ್ನು ನೀಡಲು ಇ-ಕಾಮರ್ಸ್ ಘಟಕಗಳಿಗೆ ದಂಡವನ್ನು ವಿಧಿಸಲಾಗುತ್ತದೆ. ಈ ದಂಡದ ಮೊತ್ತವು 10 ಲಕ್ಷದಿಂದ 50 ಲಕ್ಷದವರೆಗೆ ಇರಬಹುದು. ಇದರ ಹೊರತಾಗಿ, ಗ್ರಾಹಕ ವ್ಯವಹಾರಗಳ ಇಲಾಖೆಯು ಸುಳ್ಳು ಇ- ಕಾಮರ್ಸ್ ಘಟಕಗಳ ಮೇಲೆ ಸ್ವಯಂಪ್ರೇರತವಾಗಿ ಕ್ರಮಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

A fine of 50 lakhs will be imposed if a fake review is posted by e commerce

ಗ್ರಾಹಕ ವ್ಯವಹಾರಗಳ ಇಲಾಖೆಯು ರಚಿಸಿದ ಸಮಿತಿಯು ಒಂದು ವಾರದೊಳಗೆ ನಕಲಿ ವಿಮರ್ಶೆಗಳ ಕುರಿತು ಬಿಐಎಸ್ ಮಾನದಂಡಗಳಲ್ಲಿ ಬದಲಾವಣೆಗಳನ್ನು ಸೂಚಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಈ ಕುರಿತು ಸಮಿತಿ ಸಭೆ ನಡೆಸಿದ್ದು, ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಹಲವು ಸಂಬಂಧಪಟ್ಟವರು ಉಪಸ್ಥಿತರಿದ್ದರು.

English summary
The Department of Consumer Affairs has prepared an arena to snoop on e-commerce companies and henceforth, if they post fake reviews, a hefty fine of up to Rs 50 lakh will be paid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X