ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

DA Hike : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ತುಟ್ಟಿಭತ್ಯೆ ಹೆಚ್ಚಳ

|
Google Oneindia Kannada News

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ, ಡಿಎಯನ್ನು ಶೇಕಡ ಮೂರರಷ್ಟು ಏರಿಕೆ ಮಾಡಲಾಗಿದೆ. ಈ ಹಿಂದೆ ತುಟ್ಟಿಭತ್ಯೆ ಶೇಕಡ 31 ಇದ್ದು, ಡಿಎ ಹೆಚ್ಚಳದ ಬಳಿಕ ಶೇಕಡ 34ಕ್ಕೆ ಏರಿಕೆ ಆಗಿದೆ. ಜನವರಿ 1, 2022ರಿಂದಲೇ ಈ ಹೆಚ್ಚಳವು ಜಾರಿಗೆ ಬರಲಿದೆ.

ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಮತ್ತು ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುವ ಕುಟುಂಬ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ. ತುಟ್ಟಿಭತ್ಯೆ ರೂಪದಲ್ಲಿ ಈ ಹೆಚ್ಚಳವನ್ನು ಪಡೆಯಬಹುದಾಗಿದೆ.

ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ

ಬುಧವಾರ (ಮಾರ್ಚ್ 30) ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಆರ್) ಹೆಚ್ಚುವರಿ ಕಂತು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

7th Pay Commission: DA for central govt employees hiked by 3% to 34%

2022ರ ಜನವರಿ 1ರಿಂದಲೇ ಈ ಹೊಸ ತುಟ್ಟಿಭತ್ಯೆಯು ಜಾರಿಗೆ ಬರಲಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು ಮೂಲ ವೇತನ/ಪಿಂಚಣಿಯ ಅಸ್ತಿತ್ವದಲ್ಲಿರುವ ದರ ಶೇಕಡ 31ರಿಂದ ಶೇಕಡ 34ಕ್ಕೆ ಏರಿಕೆ ಮಾಡಲಾಗಿದೆ ಎಂದು ಕೂಡಾ ಪ್ರಕಟಣೆಯು ಉಲ್ಲೇಖ ಮಾಡಿದೆ.

ವರ್ಷಕ್ಕೆ ಒಟ್ಟು ಎಷ್ಟು ತುಟ್ಟಿಭತ್ಯೆ ಬಿಡುಗಡೆ?

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯು (ಡಿಆರ್) ಒಟ್ಟಾಗಿ ವರ್ಷಕ್ಕೆ ರೂ.9,544.50 ಕೋಟಿಗಳಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ವೇತನ ಆಯೋಗ ರಚನೆ ಬಗ್ಗೆ ಸಿಎಂ ಘೋಷಣೆ; ಸಂಬಳ ಏರಿಕೆ ನಿರೀಕ್ಷೆ ವೇತನ ಆಯೋಗ ರಚನೆ ಬಗ್ಗೆ ಸಿಎಂ ಘೋಷಣೆ; ಸಂಬಳ ಏರಿಕೆ ನಿರೀಕ್ಷೆ

ಕೋವಿಡ್ ಸಂದರ್ಭದಲ್ಲಿ ಡಿಎ ಹೆಚ್ಚಳ ಸ್ಥಗಿತ ಮಾಡಿದ್ದ ಕೇಂದ್ರ ಸರ್ಕಾರ

ಕೊರೊನಾ ವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಡಿಎ ಹಾಗೂ ಡಿಆರ್‌ ಸ್ಥಗಿತ ಮಾಡಿದ್ದವು. ಜನವರಿ 1, 2020 ರಿಂದ ಜೂನ್ 30, 2021 ರವರೆಗೆ ಸರ್ಕಾರವು ಡಿಎ ಸ್ಥಗಿತ ಮಾಡಿದೆ. ಆದಾಗ್ಯೂ, ಸರ್ಕಾರವು ಜುಲೈ 1, 2021 ರಿಂದ ಡಿಎ ಮತ್ತೆ ಆರಂಭ ಮಾಡಿದೆ. ಈ ಸಂದರ್ಭದಲ್ಲಿ ಡಿಎಯನ್ನು ಶೇಕಡ 17ರಿಂದ ಶೇಕಡ 28ರಷ್ಟು ಏರಿಕೆ ಮಾಡಲಾಗಿದೆ. ಇದು 2020ರ ಜನವರಿ 1, 2020ರ ಜುಲೈ 1, ಮತ್ತು 2021ರ ಜನವರಿ 1ರ ಕಂತುಗಳನ್ನು ಒಳಗೊಂಡಿದೆ. 2020ರ ಜನವರಿ 1 ರಿಂದ 2021ರ ಜೂನ್ 30ರವರೆಗಿನ ಅವಧಿಗೆ ತುಟ್ಟಿ ಭತ್ಯೆಯ ದರವು ಶೇಕಡ 17 ಉಳಿದಿತ್ತು.

ಕಳೆದ ವರ್ಷ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ಸರ್ಕಾರ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ತನ್ನ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಡಿಎ ಶೇ 17ರಿಂದ ಶೇ 31ಕ್ಕೇರಿಕೆ ಮಾಡಲಾಗಿತ್ತು. ರಾಜ್ಯ ಸರ್ಕಾರವು ತನ್ನ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ನೌಕರನ ಮೂಲ ವೇತನದ ಶೇ.21.50ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.24.50ಗೆ ಏರಿಸಲಾಗಿದೆ.

English summary
7th Pay Commission: DA for central govt employees hiked by 3% to 34%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X